‘ಹಬ್ಬಗಳು ಮತ್ತು ದಿನಾಚರಣೆಗಳು’ ಕೃತಿಯು ಸಂಪಟೂರು ವಿಶ್ವನಾಥ್ ಅವರ ಲೇಖನ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ,`ಜಗತ್ತಿನಲ್ಲಿ ಎಲ್ಲೂ ಇಲ್ಲದಷ್ಟು ವೈವಿಧ್ಯಮಯವಾದ ಹಬ್ಬಗಳು ಭಾರತದಲ್ಲಿವೆ. ಆಧುನಿಕತೆಯಲ್ಲಿ ಎಷ್ಟೇ ಮುಂದುವರಿದರೂ ವಿಜೃಂಭಣೆಯಿಂದ ಹಬ್ಬ ಆಚರಿಸುವುದನ್ನು ಭಾರತೀಯರು ಬಿಡಲಾರರು. ಆಯಾ ದೇಶದ ಸಾಂಸ್ಕೃತಿಕ -ಧಾರ್ಮಿಕ ವೈಶಿಷ್ಟ್ಯವನ್ನು ಸಾರುವಂತಹ ಮತ್ತು ಮನುಷ್ಯನ ದೈನಂದಿನ ಬದುಕಿನಲ್ಲಿ ಲವಲವಿಕೆ, ಸಂತಸ ಚೈತನ್ಯವನ್ನು ಉಕ್ಕಿಸುವಂತಹ ಪ್ರಮುಖ ಹಬ್ಬಗಳ ಆಚರಣೆಯ ರೀತಿ- ನೀತಿ ಮತ್ತು ವೈವಿಧ್ಯಗಳ ವಿವರಣೆ ಇಲ್ಲಿದೆ. ಭಾರತವೂ ಸೇರಿದಂತೆ ವಿಶ್ವದಲ್ಲಿ ಅನೇಕ ದಿನಗಳನ್ನು ಜನರು ವಿವಿಧ ಕಾರಣಗಳಿಗಾಗಿ ಹಬ್ಬಗಳನ್ನು ಆಚರಿಸುತ್ತಾರೆ. ಅಂತಹ ಪ್ರಮುಖ ದಿನಾಚರಣೆಗಳ ಪರಿಚಯವೂ ಈ ಪುಸ್ತಕದಲ್ಲಿದೆ. ಸಂದರ್ಭಾನುಸಾರ ಚಿತ್ರಗಳನ್ನೂ ಒದಗಿಸಲಾಗಿದ್ದು, ಇದೊಂದು ಕತೆಯೂ ಅಲ್ಲದ, ಕಾದಂಬರಿಯೂ ಅಲ್ಲದ, ಅದರೆ ಅಪರೂಪದ ಮಾಹಿತಿಯುಳ್ಳ ಪುಸ್ತಕ ಇದಾಗಿದೆ’ ಎಂದು ವಿಶ್ಲೇಷಿಸಲಾಗಿದೆ.
ಲೇಖಕ ಸಂಪಟೂರು ವಿಶ್ವನಾಥ್ ಅವರು ಜನಿಸಿದ್ದು 1938 ಫೆಬ್ರುವರಿ 28ರಂದು. ತಾಯಿ ನಾಗಮ್ಮ, ತಂದೆ ಎಸ್. ಹನುಮಂತರಾವ್, ಮಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪದವಿ ಪಡೆದ ಇವರು ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ವಿಜ್ಞಾನ, ಸಾಹಿತ್ಯ, ಸಂಗೀತ, ನೃತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿದ್ದ ವಿಶ್ವನಾಥರು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಗೊರೂರು ಸಾಹಿತ್ಯ ಪ್ರಶಸ್ತಿ, ಎಂ.ಜಿ. ರಂಗನಾಥನ್ ಸ್ಮಾರಕ ಪ್ರಶಸ್ತಿ, ಸ್ನೇಹ – ಸೇತು ಬರಹಗಾರರ ಪ್ರಶಸ್ತಿ, ಕರ್ನಾಟಕ ...
READ MORE