ಗೇಬ್ರಿಯಲ್‌ ಗಾರ್ಸಿಯ ಮಾರ್ಕೇಸ್‌ ಗದ್ಯ ಗಾರುಡಿ

Author : ಕೇಶವ ಮಳಗಿ

Pages 144

₹ 150.00




Published by: ದೀಪಂಕರ ಪುಸ್ತಕ
Address: ಸುರೇಶ ನಾಗಲಮಡಿಕೆ s/o ನಾಗರಾಜಪ್ಪ, ನಾಗಲಮಡಿಕೆ, ಪಾವಗಡ ಗ್ರಾಮೀಣ ತಾಲೂಕು, ತುಮಕೂರು ಜಿಲ್ಲೆ- 561202
Phone: 9886279441

Synopsys

ಲೇಖಕ ಕೇಶವ ಮಳಗಿ ಅವರ ಆಯ್ದ ಅಂಕಣ ಬರಹಗಳ ಸಂಗ್ರಹ ಗೇಬ್ರಿಯಲ್‌ ಗಾರ್ಸಿಯ ಮಾರ್ಕೇಸ್‌ ಗದ್ಯ ಗಾರುಡಿ. 'ಗದ್ಯ ಗಾರುಡಿ' ಪುಸ್ತಕವು 'ಗಾಬೋ', ಎಂದು ಇಡೀ ಲ್ಯಾಟಿನ್ ಅಮೆರಿಕದ ಜನರಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್‌ ಆಯ ಅಂಕಣ ಬರಹಗಳ ಸಂಗ್ರಹ. ಮಾರ್ಕೇಸ್ರರ ಗದ್ಯಬರಹಗಳ ಸೊಬಗು, ಉಲ್ಲಾಸ, ವಿಸ್ಮಯತೆ, ವಿಚಾರಗಳ ವಿಸ್ತರಣೆ ಹಾಗೂ ಅಂತಿಮವಾಗಿ ಮನುಷ್ಯ ಪ್ರೀತಿಯಿಂದ ಹುಟ್ಟುವ ನಿಷ್ಕಲ್ಮಶ ಕಾಳಜಿಗಳನ್ನು ಈ ಲೇಖನಗಳು ತೆರೆದಿಡುತ್ತವೆ. ಸುಮಾರು ಮೂರುವರೆ ದಶಕಗಳಲ್ಲಿ ಗಾಜೋ ಕೆತ್ತಿದ ಬರಹಗಳ ಭಾಷಾ ಬೆರಗು ನಾವಿಲ್ಲಿ ಕಾಣಲು ಸಾಧ್ಯ. ಅಪರಿಚಿತ ತರುಣನಾಗಿದ್ದಾಗ ಬರೆದ ಲೇಖನದಿಂದ ಹಿಡಿದು ಮುಪ್ಪರಿಗೊಂಡ ಮನಸ್ಸಿನ ಮೆದು ಮಾತುಗಳವರೆಗೆ ಇವುಗಳ ಹರಹಿದೆ. ಪದಮಿತಿ, ಕಾಲದ ಪರಿಮಿತಿ ಇತ್ಯಾದಿಗಳಿಗೆ ಒಳಪಟ್ಟರೂ ಈ ಬರಹಗಳು ಕುಸುರಿತನ, ಅನುಭವದ ವಿಸ್ತಾರತೆಯಿಂದ ಚ್ಯುತಿಗೊಂಡಿಲ್ಲ. ಭಾಷಾ ಚಮತ್ಕಾರ, ವಿಷಯವನ್ನು ತೆರೆದಿಡುವ ವಿಧಾನ, ಕೊಂಚ ಮಾತ್ರ ಹಣಕುವ ಲ್ಯಾಟಿನೋ ವಿನೋದಪ್ರಜ್ಞೆ ಮತ್ತು ಮಾರ್ಕೇಸ್‌ರಿಗಷ್ಟೇ ಸಾಧ್ಯವಿರುವ ಶಬ್ದ ಯಕ್ಷಿಣಿ ಇಲ್ಲಿನ ಪ್ರತಿ ಬರಹದಲ್ಲೂ ಕಾಣಬಹುದು.

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books