ಓದುಗ ದೊರೆಯ ತೀರದ ನೆನಪುಗಳು ಪುಸ್ತಕ ರವಿ ಬೆಳಗೆರೆಯವರ ಕುರಿತು ಓದುಗ ದೊರೆಗಳ ಲೇಖನಗಳ ಸಂಗ್ರಹ. ಕೇವಲ ಹದಿನಾರು ಪುಟಗಳ, ಬಣ್ಣಗಳಿಲ್ಲದ, ಕಪ್ಪು-ಬಿಳಿ ಪತ್ರಿಕೆಯ ಮೊದಲ ಪ್ರತಿಯನ್ನು ನಾಲ್ಕು ರುಪಾಯಿ ಕೊಟ್ಟು, ಕೊಂಡುಕೊಂಡ ಆ ಮೊದಲ ಓದುಗನಿಗೆ ನನ್ನ ನಮಸ್ಕಾರ. ಅದೃಷ್ಟ, ಕಾಲ, ಮುಹೂರ್ತ, ಪಂಚಾಂಗ, ವಾಸ್ತು-ಯಾವುದನ್ನೂ ನಂಬದ ನಾನು ಆ ಓದುಗನೆಂಬ ಅಗೋಚರ ದೊರೆಯನ್ನು ನಂಬಿದೆ. ಪತ್ರಿಕೆ ಆರಂಭಿಸಿದಾಗ ನನ್ನ ಕೈಲಿ ಹಣವಿರಲಿಲ್ಲ. ಯಾವತ್ತಿಗೂ ನಾನು ಜಾತಿ ನಂಬಿದವನಲ್ಲ. ನನ್ನ ಹಿಂದೆ ಅವತ್ತು crowd ಇರಲಿಲ್ಲ, ಇದ್ದುದು ಆತ್ಮವಿಶ್ವಾಸವೊಂದೇ. 'ನನ್ನ ಓದುಗನೊಂದಿಗೆ ನಾನು ಮಾತನಾಡುತ್ತೇನೆ. ಆತ ಕೇಳಿಸಿಕೊಳ್ಳುತ್ತಾನೆ. ನಾನು ಹೇಳುವ ಕಥೆ ನನ್ನದೂ ಇರಬಹುದು. ಆತನದೂ ಇರಬಹುದು. ಆದರೆ ಈ ಮಾತು ನಾನು ಬದುಕಿರುವಷ್ಟು ದಿನ ಜಾರಿಯಲ್ಲಿರುತ್ತದೆ' ಹಾಗಂತ ಅಂದುಕೊಂಡೇ ಪತ್ರಿಕೆ ಆರಂಭಿಸಿದೆ. ಓದುಗ ದೊರೆ ನನ್ನ ಅನಿಸಿಕೆ ಸುಳ್ಳು ಮಾಡಲಿಲ್ಲ.
ಯಶೋಮತಿ ರವಿ ಬೆಳಗೆರೆ ಮೂಲತಃ ತುಮಕೂರು ಜಿಲ್ಲೆಯ ಚಿಕ್ಕಸಾರಂಗಿ ಗ್ರಾಮದವರು. ಬಿಕಾಮ್, ಇಂಟರ್ನ್ಯಾಷನಲ್ ಗ್ರಾಜುಯೇಟ್ ಡಿಪ್ಲೊಮೋ ಇನ್ ಕೌನ್ಸಿಲಿಂಗ್ ಸ್ಕಿಲ್ಸ್,(IGDCS), ಡಿಪ್ಲೊಮೋ ಇನ್ ಬೊಟಿಕ್ ಮ್ಯಾನೇಜ್ ಮೆಂಟ್ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಅಕ್ಷರ ವಿನ್ಯಾಸಕಿ, ಪುಟ ವಿನ್ಯಾಸಕಿ, ಅಂಕಣಕಾರ್ತಿ, ಪ್ರಕಾಶಕಿ, ಲೇಖಕಿ, ರವಿ ಬೆಳಗೆರೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕಿ ಹಾಗೂ ಅನಂತ ನೋಟ ಪತ್ರಿಕೆಯ ಪ್ರಧಾನ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಅಕ್ಷರ ವಿನ್ಯಾಸಕಿಯಾಗಿ ಆರಂಭಗೊಂಡ ಪತ್ರಿಕೋದ್ಯಮದ ಒಡನಾಟ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆಯಾಗಿ, ವ್ಯವಸ್ಥಾಪಕ ನಿರ್ದೇಶಕಿಯಾಗಿ, ಓ ಮನಸೇ ಮ್ಯಾಗಝೀನಿನ ಹಾಗೂ ಭಾವನಾ ಪ್ರಕಾಶನದ ...
READ MORE