ಕಾಲಮಾನದ ಒಳಗೂ ಹೊರಗೂ ನಿರಂತರವಾಗಿ ಆಗುವ ಮುಖಾಮುಖಿ, ಕಾಲದ ಜೊತೆಗಿನ ಮುಖಾಮುಖಿ ಎಂದರೆ ಸಮಾಜದ ಜೊತೆಗಿನ ಮುಖಾಮುಖಿ ಹಾಗೂ ಅಂತರಂಗದ ಜೊತೆಗಿನ ಮುಖಾಮುಖಿಯಾಗಿ ಅನಂತರು ಮಾತನಾಡಿದ್ದಾರೆ ಈ ಕೃತಿ 2009ರಲ್ಲಿ ಪ್ರಕಟಣೆಯಾಯಿತು. ಸಾಮಾಜಿಕ ಆಗು ಹೋಗುಗಳು, ತಲ್ಲಣ, ರಾಜಕೀಯ ಚಿಂತನೆಗಳ ಕುರಿತು ಲೇಖನಗಳು ಸಿಗುತ್ತವೆ. ಸಮಾಜ, ಓದುಗರು ಮತ್ತು ಅನಂತಮೂರ್ತಿ ಅವರ ಮುಖಾಮುಖಿ ‘ಕಾಲಮಾನ’ ಎನ್ನಬಹುದು.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE