ಭಾಮಿನಿ ಷಟ್ಪದಿ

Author : ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

Pages 82

₹ 50.00




Published by: ಪ್ಯಾಪಿರಸ್ ಮೇಫ್ಲಾವರ್ ಮಿಡಿಯಾ ಹೌಸ್
Address: ಬೆಂಗಳೂರು

Synopsys

‘ಭಾಮಿನಿ ಷಟ್ಪದಿ’ ಕೃತಿಯು ಚೇತನಾ ತೀರ್ಥಹಳ್ಳಿ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಈ ಅಂಕಣ ಬರಹಗಳು “ಗಂಡು ಹೆಣ್ಣುಗಳಿಬ್ಬರ ಕಣ್ಣುಗಳನ್ನೂ ತೆರೆಸುವಂತಿದೆ ಎಂದು ಬೆನ್ನುಡಿಯಲ್ಲಿ ವಿಶ್ಲೇಷಿತವಾಗಿದೆ. ಹೆಣ್ತನ, ಮಾತೃತ್ವ, ಪರಂಪರೆ ಹೆಣ್ಣಿಗೆ ನೀಡಿರುವ ಮಾದರಿ ಕುರಿತು ಅವರಿಗೆ ತಕರಾರುಗಳಿರುವಂತೆ ಗಂಡಸ್ತನ, ಗಂಡಿನ ಕುರಿತು ಹೆಣ್ಣು ಇಟ್ಟುಕೊಳ್ಳುವ ಅತಿಯಾದ ನಿರೀಕ್ಷೆಗಳ ಕುರಿತು ಸಂದಿಗ್ಧ ಅವರಿಗೆ ಇದ್ದಂತಿಲ್ಲ. ಇದರ ನಡುವೆ ಪುರಾಣ, ಪುಣ್ಯಕಥೆಗಳ ಪುನರ್ವ್ಯಾಖ್ಯಾನ ಮಾಡುವಾಗ ಅವರು ಎತ್ತಿ ಹಿಡಿಯುವ ಲೌಕಿಕತೆ, ದೇಹದ ಹಸಿವು ಹಿಂಗಿಸಿಕೊಳ್ಳಬೇಕಾದ ಅನಿವಾರ್ಯ (ಉದಾಹರಣೆಗೆ ಭೀಷ್ಮನ ಪ್ರಕರಣ) ಒಂದು ಧ್ರುವವಾದರೆ ಆಗೀಗ ಒಮ್ಮೆಲೆ ನುಸುಳುವ ಆಧ್ಯಾತ್ಮಿಕತೆ ಇನ್ನೊಂದು ಧ್ರುವವಾಗುತ್ತದೆ. ಇವೆರಡನ್ನೂ ಒಂದುಗೂಡಿಸುವುದೇ ಬದುಕಾದರೂ ಆಧುನಿಕ ಮನೋಭಾವ, ಜೀವನ ಕ್ರಮ, ಚಿಂತನೆಯಲ್ಲಿ ಸ್ಪಿರಿಚುವಾಲಿಟಿ ಎಲ್ಲಿ ಮತ್ತು ಹೇಗೆ ತನ್ನ ಜಾಗ ಕಂಡುಕೊಳ್ಳುತ್ತದೆ ಎನ್ನುವುದನ್ನು ಅವರಿನ್ನೂ ಓದುಗರಿಗೆ ತೋರಿಸಿಕೊಡಬೇಕಾಗಿದೆ ಎಂದು ವಿವರಿಸಲಾಗಿದೆ.

About the Author

ಚೇತನಾ ತೀರ್ಥಹಳ್ಳಿ (ಗಾಯತ್ರಿ ಎಚ್‌.ಎನ್)

ಹುಟ್ಟೂರು ತೀರ್ಥಹಳ್ಳಿ. ಮೂಲ ಹೆಸರು ಗಾಯತ್ರಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಮೂವತ್ತು ವರ್ಷಗಳಿಂದ ಗದ್ಯ - ಪದ್ಯ ರಚನೆಯಲ್ಲಿ ತೊಡಗಿಕೊಂಡಿದ್ದು, ಸ್ವತಂತ್ರ ಕೃತಿ, ಅನುವಾದ, ಸಂಪಾದನೆ ಸೇರಿದಂತೆ 15 ಪುಸ್ತಕಗಳು ಪ್ರಕಟವಾಗಿವೆ. ‘ಉಫೀಟ್’ – ಉದಯೋನ್ಮುಖ ಬರಹಗಾರರ ಪ್ರೋತ್ಸಾಹ ಧನ ಯೋಜನೆಯಡಿಯಲ್ಲಿ ಪ್ರಕಟಗೊಂಡ ಮೊದಲ ಪದ್ಯ ಸಂಕಲನ. ‘ಭಾಮಿನಿ ಷಟ್ಪದಿ’ ಅಂಕಣ ಸಂಕಲನವಾಗಿದ್ದು, ಎರಡು ಮುದ್ರಣ ಕಂಡಿದೆ. ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಮತ್ತು ‘ಸೂರ್ಯನೆದೆಯ ನೀರಬೀಜ’ ಮುದ್ರಿತ ಪದ್ಯ ಸಂಕಲನಗಳು; ‘ಕಣೇ ಲಾ ಪದ್ಯಗಳು’ ಇ - ಬುಕ್ ಸಂಕಲನವಾಗಿ ಪ್ರಕಟವಾಗಿದೆ. ‘ಬಿಸಿಲ ಚೂರಿನ ಬೆನ್ನು’, ‘ಅಧ್ಯಾತ್ಮ ಡೈರಿ’ ಬ್ಲಾಗ್ ಮತ್ತು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ ...

READ MORE

Related Books