‘ವಿಚಾರವಾದ’ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಉಪನ್ಯಾಸ ಗ್ರಂಥಮಾಲೆಯಲ್ಲಿ ಪ್ರಕಟವಾದ ಕೃತಿ. ಹಿರಿಯ ಸಾಹಿತಿ ಗೌರೀಶ ಕಾಯ್ಕಿಣಿ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯ ಕುರಿತು ಬರೆಯುತ್ತಾ ವಿಚಾರವಾದದ ಹಿಂದಿನ ಮೂರು ಆವೃತ್ತಿಗಳಂತೆ ಈ ನಾಲ್ಕನೆಯ ಆವೃತ್ತಿಯನ್ನೂ ನಮ್ಮ ಬುದ್ಧಿ ಜೀವಿಗಳೂ ಬುದ್ಧಿವಂತರೂ ಕುತೂಹಲದಿಂದ ಮೆಚ್ಚಿ ಸ್ವಾಗತಿಸುವರಾಗಿ ನನ್ನ ಭರವಸೆ, ಕುಮಾರವ್ಯಾಸನು ತನ್ನ ಭಾರತವು ಜನಕೆ ಬುದ್ಧಿಗುಣವಾಗಲೆಂದು ಹಾರೈಸಿದ್ಧನು. ನನ್ನ ಈ ಕಿರಿಹೊತ್ತಿಗೆ ಜನರ ಬುದ್ಧಿ ಗುಣದ ವಿಚಾರವಾಗಿಯೇ ವಾದಿಪ ಕೃತಿ. ನಿಜವಾಗಿಯೂ ನನ್ನ ಈ ಕೃತಿಗೆ ಅದರ ಆಕೃತಿಯ ಮಾನದಲ್ಲಿ ಸ್ವೀಕೃತಿಯು ಕೈತುಂಬಾ ಕಣ್ತುಂಬ ದೊರೆತಿದೆ. ಅದಕ್ಕಾಗಿ ನಾನು ಈ ಮಾಲೆಯ ಮಾರ್ಮಿಕ ವಾಚಕರಿಗೆ ಅನನ್ಯ ಆಭಾರಿ. ಆದರೆ ಈ ಸಂದರ್ಭದಲ್ಲಿ ಒಂದು ಮಾತನ್ನು ವಿಶೇಷವಾಗಿ ಆಡಿಕೊಳ್ಳಬೇಕೆನಿಸುತ್ತದೆ. ಈ ವ್ಯಾಖ್ಯಾನವನ್ನು ಈ ವಿಶ್ವವಿದ್ಯಾಲಯದ ವಿಸ್ತರಣೋಪನ್ಯಾಸ ಮಾಲೆಯಲ್ಲಿ ಪೋಣಿಸಿ ಅನೇಕ ವರ್ಷಗಳು ಸಂದವು. ಅಂದಿನಿಂದ ಇಂದಿನ ವರೆಗೂ ಈ ವಿಷಯದ ಕ್ಷೇತ್ರದಲ್ಲಿ ಈ ಮಾದರಿಯ ಪುಸ್ತಕವು ಇದೊಂದೇ ಆಗಿ ಉಳಿದದ್ದು ನನ್ನ ಮಟ್ಟಕ್ಕೆ ಉತ್ತೇಜನೆ ಮತ್ತು ಉದ್ವೇಗಗಳಿಗೆ ಕೂಡಿಯೇ ಕಾರಣವಾಗಿದೆಯೆನ್ನಬೇಕು. ಒಂದು ಪುಟ್ಟ ಉಪನ್ಯಾಸ- ಒಂದು ನೂರು ಪುಟಗಳೊಳಗೆ ಅಚ್ಚಾಗಿ ಮುಗಿದದ್ದು- ವಿಚಾರವಾದದ, ಬುದ್ಧಿ ಪ್ರಾಮಾಣ್ಯದ ಅಗತ್ಯ, ಮಹತ್ವ, ಇತಿಹಾಸ, ಲಕ್ಷ್ಯ-ಲಕ್ಷಣ, ಪರಮತೆ-ಪರಿಮಿತಿ ಮುಂತಾದವುಗಳ ವ್ಯಾಖ್ಯಾನ ಮೀಮಾಂಸೆಗಳ ದೃಷ್ಟಿಯಿಂದ ಬರೆ ಮೊದಲ ಹೆಜ್ಜೆ. ಮೊದಲ ಹೆಜ್ಜೆಯ ಸಾರ್ಥಕತೆಯಿರುವುದು ಅದರ ಮುಂದಿನ ಹೆಜ್ಜೆಗಳಲ್ಲಿ. ಆ ಹೆಜ್ಜೆಗಳು ಈ ಪುಸ್ತಿಕೆಯ ಮೊದಲ ಆವೃತ್ತಿಯ ನಂತರ ಈವರೆಗೂ ನಮ್ಮ ವಿಚಾರ ಸಾಹಿತ್ಯದ ಕ್ಷೇತ್ರದಲ್ಲಿ ಬಿದ್ದದ್ದೂ ಮೂಡಿದ್ದೂ ಕಂಡು ಬಂದಿಲ್ಲ. ಈ ಅಲ್ಪ ಕೃತಿಯ ಆಹ್ವಾನಕ್ಕೋ ಆಕರ್ಷಣಕ್ಕೋ ಇತರ ಹೆಚ್ಚಿನ ವಿದ್ವತ್ತೆ, ವಿಚಕ್ಷಣತೆಗಳ ಅಧಿಕಾರ ಸಂಪನ್ನರು ಈ ವಿಷಯವನ್ನು ಕುರಿತು ಇನ್ನೂ ವಿಶದವಾಗಿ ವಿಶಾಲವಾಗಿ ಗ್ರಂಥಲೇಖನ ಮಾಡಬಹುದೆಂದು ನಾನು ಇಟ್ಟಕೊಂಡ ನಿರೀಕ್ಷೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಆತನಕವೂ ಈ ಪುಟ್ಟ ಪುಸ್ತಕವು ಇನ್ನೆಷ್ಟು ಸಲ ಬೆಳಕು ಕಾಣಬೇಕಾಗಿದೆಯೋ, ಬೆಳ್ಳಿ ಮೂಡಿದ ಮಾತ್ರಕ್ಕೆ ಬೆಳಗಾದಂತೆಯೇ ಎಂದು ಪ್ರಶ್ನಿಸಿದ್ದಾರೆ ಗೌರೀಶ ಕಾಯ್ಕಿಣಿ.
ಸಾಹಿತಿ ಗೌರೀಶ್ ಕಾಯ್ಕಿಣಿ ಅವರು 1912 ಸೆಪ್ಟೆಂಬರ್ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು. ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು. ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು. ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...
READ MORE