ಲೇಖಕ ಎನ್.ಪಿ. ಶಂಕರ ನಾರಾಯಣರಾವ್ ಅವರ ಕೃತಿ-ಸ್ವಾತಂತ್ಯ್ರದ ಗುರಿ ಭಾರತದ ದಾರಿ. ಸ್ವಾತಂತ್ಯ್ರ ಹೋರಾಟದ ಸ್ವರೂಪಗಳನ್ನು ಕಿರಿಯರಿಗಾಗಿ ಪರಿಚಯ ಮಾಡಿಕೊಡುವುದು ಈ ಕೃತಿಯ ಉದ್ದೇಶ. ದೇಶದ ಸ್ವಾತಂತ್ಯ್ರಕ್ಕಾಗಿ ಮಾಡಿ ಮಡಿದವರ ತ್ಯಾಗವನ್ನು ಸ್ಮರಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸುವ ಈ ಕೃತಿಯು ಕಿರಿಯರಿಗೆ ದೇಶದ ಸ್ವಾತಂತ್ಯ್ರ ಹೋರಾಟದ ನೆನಪು ಮಾಡಿಕೊಡುವ ಜೊತೆಗೆ ದೇಶ ಸೇವೆಯಲ್ಲಿ ತಮ್ಮ ಪಾಲೂ ನೀಡುವತ್ತ ಗಮನ ಸೆಳೆಯುತ್ತದೆ.
.ಎನ್.ಪಿ. ಶಂಕರ ನಾರಾಯಣ ರಾವ್ ಅವರು 1928ರ ಆಗಸ್ಟ್ 03ರಂದು ಹಾಸನ ಜಿಲ್ಲೆಯ ನಿಟ್ಟೂರು ಗ್ರಾಮದವರು. ತಂದೆ ಪಟ್ಟಾಭಿರಾಮಯ್ಯ ಹಾಗೂ ತಾಯಿ ಅಚ್ಚಮ್ಮ. ತಂದೆ ಸಬ್ ರಿಜಿಸ್ಟ್ರಾರ್ ಇದ್ದರು. ವರ್ಗಾವಣೆ ಆದ ಕಡೆ ಇವರ ವಿದ್ಯಾಭ್ಯಾಸ ಅನಿವಾರ್ಯವಾಯಿತು. ಬೆಂಗಳೂರಿನ ಶ್ರೀರಾಮಪುರದಲ್ಲಿ ಪ್ರಾಥಮಿಕ ಶಿಕ್ಷಂ, ಕನಕಪುರದ ಕಾನಕಾನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆನೇಕಲ್ ಹಾಗೂ ಬಸವನಹಳ್ಳಿಯಲ್ಲಿ ಮಾಧ್ಯಮಿಕ ಹಾಗೂ ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಆ ಕಾಲದಲ್ಲಿ ಸ್ವಾತಂತ್ಯ್ರ ಚಳವಳಿ ಆರಂಭವಾಗಿ, ಜೈಲುವಾಸ ಅನುಭವಿಸಿದರು. ಮೈಸೂರು ಸ್ಟೂಡೆಂಟ್ಸ್ ಯೂನಿಯನ್ ಸ್ಥಾಪಿಸಿ ಎಡ ಪಂಥೀಯ ವಿಚಾರಗಳೊಂದಿಗೆ ಹೋರಾಟ ನಡೆಸಿದರು. ಮೈಸೂರು ಪುರಸಭಾ ಕಾರ್ಮಿಕ ಸಂಘದ ...
READ MORE