ನಮ್ಮ ಭೂಮಿಯ ಹಾಡು ಪಾಡು- ಡಾ. ಎಂ. ವೆಂಕಟಸ್ವಾಮಿ ಅವರ ಕೃತಿ. ವಿಜ್ಞಾನ ಲೇಖಕ ಟಿ.ಆರ್.ಅನಂತರಾಮು, ಕೃತಿಗೆ ಬೆನ್ನುಡಿ ಬರೆದು ‘ಹಲವು ತಲ್ಲಣಗಳ ನಡುವೆ ಆಧುನಿಕ ಬದುಕು ಸಾಗಬೇಕಾದ ಪರಿಸ್ಥಿತಿ ನಮ್ಮದು. ಪ್ರಕೃತಿ ಸಂಪನ್ಮೂಲಗಳನ್ನು ಹಾಳುಗೆಡುವಲು ಕಾಲಬದ್ಧ ಯೋಜನೆಯನ್ನೇ ನಾವು ರೂಪಿಸಿದಂತಿದೆ. ಇದರ ದೀರ್ಘಕಾಲಿಕ ಪರಿಣಾಮವೇನು? ತತ್ ಕ್ಷಣದ ಪರಿಹಾರಗಳೇನು ಎಂಬುದಕ್ಕೆ ಅಕ್ಷರದ ಮೂಲಕ ಧ್ವನಿ ನೀಡಿರುವ ಡಾ.ಎಂ.ವೆಂಕಟಸ್ವಾಮಿ ಒಬ್ಬ ಭೂವಿಜ್ಞಾನಿ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಸಂಸ್ಥೆಯಲ್ಲಿ ಉಪ ಮಹಾನಿರ್ದೇಶಕರಾಗಿ ಭಾರತದ ಉದ್ದಗಲವನ್ನು ಬಲ್ಲರು. ಕನ್ನಡದಲ್ಲಿ ವೈವಿಧ್ಯಮಯ ಕೃತಿಗಳನ್ನು ರಚಿಸಿದ್ದಾರೆ; ತಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ಹಸಿಹಸಿಯಾಗಿಯೇ ತೆರೆದಿಡುವ ನೇರ ಬರವಣಿಗೆ ಅವರ ಲಾಂಛನ. ಈ ಕೃತಿಯಲ್ಲಿ ಐದು ದೀರ್ಘ ಲೇಖನಗಳ ಮೂಲಕ ವಿಶ್ವದ ಉಗಮದಿಂದ ತೊಡಗಿ ಇಡೀ ಭೂಮಿಯನ್ನೇ ಮಾಲಿನ್ಯದ ಮಡುವಾಗಿ ಮಾಡಿರುವ ದುರಂತದವರೆಗೆ ತಾಕಿಕ ಚಿಂತನೆಗಳಿವೆ. ಬರಿ ಚನೊಬಿಲ್ ಪರಮಾಣು ಸ್ಥಾವರದ ದುರಂತವಷ್ಟೇ ಅಲ್ಲ, ಬೆಂಗಳೂರಿನಿಂದ ಬೀಜಿಂಗ್ ವರೆಗೆ ಆಗಿರುವ ಮಾಲಿನ್ಯದ ವಿಷಾದ ಅಧ್ಯಾಯವಿದೆ, ಸಾಬೂನು ತರುವ ಅಪಾಯದ ಗಂಟೆಯ ಮೊಳಗು ಇದೆ, ಅಂತರ್ಜಲದಲ್ಲಿ ರಾಡಾನ್ ಹೆಚ್ಚುತ್ತಿರುವುದನ್ನು ಕುರಿತ ಹೆಚ್ಚರಿಕೆ ಇದೆ. ಈ ಮಧ್ಯೆ ತಮ್ಮ ಸ್ವಾನುಭವಗಳ ಬುತ್ತಿ ಬಿಚ್ಚಿ, ನೆಲ-ಜಲದ ಬಗ್ಗೆ ಒಳನೋಟ ನೀಡುವ ಚಿಂತನೆಗಳೂ ಇವೆ. ನೈಸರ್ಗಿಕ ವಿಕೋಪಗಳನ್ನು ಕುರಿತ ವೈಜ್ಞಾನಿಕ ವಿಶ್ಲೇಷಣೆಯ ಅಪರೂಪದ ಮಾಹಿತಿಗಳಿವೆ. ಅಂತರಿಕ್ಷವೇ ಜಂಕುಗಳಿಂದ ತುಂಬಿರುವ ಅಪಾಯ ಕುರಿತು ಬರೆದಿರುವ ಅವರ ಲೇಖನ ಭವಿಷ್ಯದ ನಮ್ಮ ಬದುಕಿನ ಬಗ್ಗೆ ಆತಂಕ ತರುತ್ತದೆ. ಬ್ರಹ್ಮಪುತ್ರ ನದಿಯನ್ನೇ ಚೀನ ತನಗೆ ಬೇಕಾದಂತೆ ತಿರುಗಿಸುವ ಅಪಾಯಕಾರಿ ಯೋಜನೆ ಒಂದಾದರೆ, ಇತ್ತ ಉತ್ತರ-ದಕ್ಷಿಣ ಭಾರತದಲ್ಲಿ ನದಿಜೋಡಣೆ ಮಾಡಿದರೆ ಎದುರಾಗುವ ಆತಂಕಗಳ ಮುನ್ನೋಟವಿದೆ.
ಡಾ.ಎಂ.ವೆಂಕಟಸ್ವಾಮಿ ಈ ಒಂದೊಂದು ಅಧ್ಯಾಯದಲ್ಲೂ ತೆರೆದಿಟ್ಟಿರುವ ಸಂಗತಿಗಳನ್ನು ಓದಿದಾಗ ನಾವು ಈ ಭೂಮಿಯನ್ನು ನಡಸಿಕೊಂಡಿರುವ ಹಾಗೂ ಅದು ಪ್ರತಿಕಾರವೆಂಬಂತೆ ತಿರುಗಿಬಿದ್ದಿರುವ ಸಂಗತಿಗಳು ಎದೆಗೆ ನಾಟುತ್ತವೆ. ಸರಳ ವಾಕ್ಯ, ನಿರಾಡಂಬರ ಶಬ್ದಗಳು, ಸಮಕಾಲೀನ ಸಮಸ್ಯೆಗಳನ್ನು ಅವರು ಗ್ರಹಿಸಿರುವ ರೀತಿ - ಈ ಎಲ್ಲವೂ ಓದುಗರನ್ನು ಥಟ್ಟನೆ ಹಿಡಿದಿರುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಗೆ ಸೇರಿದ ಡಾ.ಎಂ.ವೆಂಕಟಸ್ವಾಮಿ ಅವರು 06.11.1955 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ತನ್ನ ಊರಿನಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಘಟ್ಟುಮಾದಮಂಗಳದಲ್ಲಿ ಪೂರೈಸಿದರು. ಕೆ.ಜಿ.ಎಫ್‍ನ ಮುನಿಸಿಪಲ್ ಬಾಯ್ಸ್ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮತ್ತು ಕೆಜಿಎಫ್ ಪ್ರ.ದ.ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (ಭೂವಿಜ್ಞಾನ) ಎಂ.ಎಸ್ಸಿ., ಮುಗಿಸಿದರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾದರು. ಅದಕ್ಕೆ ಮುಂಚೆ ಸ್ವಲ್ಪ ಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿ (SAIL) ಕೆಲಸ ಮಾಡಿದ್ದರು. ‘ಕೋಲಾರ ಚಿನ್ನದ ಗಣಿಗಳು'' ಮಹಾಪ್ರಬಂಧಕ್ಕೆ ...
READ MOREನಮ್ಮ ಭೂಮಿಯ ಹಾಡು ಪಾಡು (ಭೂವಿಜ್ಞಾನ-ಪರಿಸರ ಮಾಲಿನ್ಯ ಲೇಖನಗಳು) ಪರಿವಿಡಿ: ಅಧ್ಯಾಯ - 1: ವಿಶ್ವದ ಉಗಮ 1. ವಿಶ್ವದಲ್ಲಿ ಒಂದು ಕಣ ಭೂಮಿ 2. ಎಷ್ಟು ಭೂಮಿಗಳಿವೆ 3. ಭೂಮಿಯ ವಿಕಾಸ ಮತ್ತು ವಯಸ್ಸು 4. ಭೂಖಂಡಗಳ ಚಲನೆ ಮತ್ತು ಭೂಮಿಯ ಅಂತರಾಳ 5. ಭೂಫಲಕಗಳು ಕಾಲಾಂತರದಲ್ಲಿ ಸಾಗಿ ಬಂದ ದಾರಿ 6. ಭೂಕಾಂತತ್ವ ಅಧ್ಯಾಯ - 2: ನೈಸಗಿಕ ವಿಪತ್ತುಗಳು 1. ಜ್ವಾಲಾಮುಖಿಗಳು 2. ಭೂಕಂಪನಗಳು: ಭೂಕಂಪನ ಮಾಪಕ, ಭೂಕಂಪನ ತಿವ್ರತೆ ಮತ್ತು ಪರಿಮಾಣದ ಅಳತೆ 3. ಸುನಾಮಿ: ಸುನಾಮಿ ಉದ್ಭವ ಹೇಗೆ 4. ಚಂಡಮಾರುತ: ಚಂಡಮಾರುತ ಉಗಮ ಮತ್ತು ರಚನೆ, ಗಾಳಿ-ಮಳೆ ಮತ್ತು ಸಮುದ್ರ ಅಲೆಗಳು 5. ಎಲ್ ನಿನೊ ಲಾ ನಿನಾ: ಚೆನ್ನೈ ಪ್ರವಾಹದ ಅವಾಂತರ ಅಧ್ಯಾಯ - 3: ಜೀವಿಗಳ ಮೂಲ ಮತ್ತು ಮನುಷ್ಯ ಕೊಂಡಿಗಳು 1. ಭೂಮಿಗೆ ಉದುರಿ ಬಂದವೇ ಜೀವಿಗಳು 2. ಮನುಷ್ಯನ ಮೂಲ - ಮಾನವ ವಿಕಾಸ 3. ಅರಣ್ಯ: ಆಮ್ಲಜನಕ ಮನುಷ್ಯ ಕೊಂಡಿಗಳು 4. ಆರನೇ ಜೈವಿಕ ಸಾಮೂಹಿಕ ಅಳಿವು 5. ಕ್ರಿ.ಶ. 2030ಕ್ಕೆ ಮಿನಿ ಹಿಮಯುಗ ಬರಲಿದೆಯೇ? ಅಧ್ಯಾಯ - 4: ಮಾನವ ನಿಮಿತ ವಿಪತ್ತುಗಳು 1. ಗಣಿಗಾರಿಕೆ ಮತ್ತು ಗಣಿಮಾಲಿನ್ಯ 2. ಜಾಗತಿಕ ತಾಪಮಾನ-ಜೀವಸಂಕುಲಕ್ಕೆ ಮಾರಕ 3. ಬೆಂಗಳೂರಿನಿಂದ ಬೀಜಿಂಗ್ ವರೆಗೆ ಪರಿಸರ ಮಾಲಿನ್ಯ 4. ಭೂಮಿಯ ಮೇಲೆ ಹೆಚ್ಚು ಮಾಲಿನ್ಯಗೊಂಡ ಕೆಲವು ಪ್ರದೇಶಗಳು 5. ಬಟ್ಟೆ ತೊಳೆಯುವ ಸಾಬೂನು ಮತ್ತು ಮಾಜಕ ಪುಡಿಗಳ ಮಾಲಿನ್ಯ ಅಧ್ಯಾಯ - 5: ಕೊಳಚೆ ಗುಂಡಿಯಾಗುತ್ತಿರುವ ದೇವತೆಗಳ ಸ್ವರ್ಗ ಎವರೆಸ್ಟ್ 1. ವ್ಯೂಮ ತ್ಯಾಜ್ಯ - ಸ್ಪೇಸ್ ಡೆಬ್ರಿ 2. ವ್ಯೂಮ ತ್ಯಾಜ್ಯ ಗುಡಿಸುವ ಯೋಜನೆ 3. ಓಝೋನ್ ಪದರುಗಳ ನಾಶ 4. ಬೆಂಕಿಯಾಗುತ್ತಿರುವ ಭೂಮಿ 5. ಕಂಪ್ಯೂಟರ್ ಮಾಲಿನ್ಯ 6. ಮನುಷ್ಯನನ್ನು ವಿಶ್ರಾಂತಿಯಿಲ್ಲದೆ ಮಾಡಿರುವ ಆಧುನಿಕ ತಂತ್ರಜ್ಞಾನ ಅಧ್ಯಾಯ - 6: ನೀರು ಮತ್ತು ತೈಲದ ದುಷ್ಪರಿಣಾಮಗಳು 1. ಬೊಗಸೆ ನೀರಿದ್ದರೆ ಬದುಕು ಬಂಗಾರ 2. ಅವಸಾನದ ಕಡೆಗೆ ನಡೆಯುತ್ತಿರುವ ಬೆಂಗಳೂರು 3. ಸಾಗರದಲ್ಲಿ ತೈಲ ಸೋರಿಕೆ ಮತ್ತು ವಿಕಿರಣಶೀಲ ತ್ಯಾಜ್ಯ 4. ಅಂತಜಲದಲ್ಲಿ ಅಪಾಯಕಾರಿ ರೇಡಾನ್ ವಿಕಿರಣ ಅಧ್ಯಾಯ - 7: ಪ್ರಪಂಚದ ಅತಿದೊಡ್ಡ ನದಿಜೋಡಣೆ ಯೋಜನೆ 1. ಭಾರಿ ಅಣೆಕಟ್ಟುಗಳಿಂದ ದುಷ್ಪರಿಣಾಮಗಳು 2. ಬ್ರಹ್ಮಪುತ್ರ ನದಿ ಜಾಡನ್ನು ತಿರುಗಿಸಿಕೊಳ್ಳುತ್ತಿರುವ ಚೀನಾ ಭಾರತಕ್ಕೆ ಅಗಾಧ ದುಷ್ಪರಿಣಾಮಗಳು ಬೀರುವ ಚೀನಾ ಯೋಜನೆಗಳು ಅಧ್ಯಾಯ - 8: ಪರಿಸರ ಅರಾಧ್ಯ ಮತ್ತು ಸಸ್ಯಸಂಪತ್ತು 1. ಮನುಷ್ಯ ಮತ್ತು ಪರಿಸರ ಸಂಬಂಧಗಳು 2. ಪರಿಸರ ಮತ್ತು ಮಾನವ ಇತರೆ ಅಧ್ಯಾಯಗಳಿದ್ದು, ಸರಳ ಭಾಷೆಯಲ್ಲಿ ವೈಜ್ಞಾನಿಕ ವಿವರಣೆಗಳಿವೆ.