ಆ ಹೊತ್ತು ಈ ಹೊತ್ತಿಗೆ

Author : ಲಕ್ಷ್ಮೀಶ್ ಹೆಗಡೆ ಸೋಂದಾ

Pages 216

₹ 110.00




Year of Publication: 2012
Published by: ಅಕ್ಷಯ ಪ್ರಕಾಶನ
Address: ಹನುಮಂತ ನಗರ ,ಬೆಂಗಳೂರು
Phone: 9632582426

Synopsys

ಲೇಖಕ ಲಕ್ಷ್ಮೀಶ್ ಹೆಗಡೆ ಸೋಂದಾ ಅವರ ಕೃತಿ ಆ ಹೊತ್ತು ಈ ಹೊತ್ತಿಗೆ. ಪ್ರಸ್ತುತ ಕೃತಿ ಅಂಕಣ ಬರಹಗಳ ಸಂಗ್ರಹವಾಗಿದ್ದು,ಉತ್ತರ ಕನ್ನಡ ಜಿಲ್ಲೆಯ ಕುತೂಹಲಕಾರಿ ಸಂಗತಿಗಳ ಲೇಖನಗಳ ಗುಚ್ಛವಾಗಿದೆ.ಸುಬ್ರಾಯ ಮತ್ತೀಹಳ್ಳಿ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದು, ಗತದ ಅಲವಿಲ್ಲದ ವರ್ತಮಾನ, ಭವಿಷ್ಯದಿಂದ ವಂಚಿತಗೊಂಡಂತೆ ಭೂತ ಭವಿಷ್ಯಗಳೆರಡರ ಫಲವೆಲ್ಲದೇ ಕೇವಲ ತಂತ್ರಜ್ಞಾನ ನೀಡಿದ ಯಾಂತ್ರಿಕ ಐಷಾರಾಮಿ ಸೌಲಭ್ಯಗಳಲ್ಲಿ ಸುಖಸುತ್ತಿರುವ ಶುಷ್ಕ ವಾಸ್ತವದ ಎದುರಲ್ಲ ಓಯಾಸಿಸನಂತೆ ಮೂಡಿ ಬಂದಿರುವ ಉ.ಕ. ಜಿಲ್ಲೆಯ ಲಕ್ಷ್ಮೀಶ ಹೆಗಡೆ ಪ್ರತಿಭಾವಂತ ಯುವ ಇತಿಹಾಸ ಸಂಶೋಧಕರು. ನಮ್ಮದೇ ಮಣ್ಣಿನ ಉಜ್ವಲ ಇತಿಹಾಸ ವಿಸ್ಕತಿಯ ತಳ ಸೇಲ ನಮ್ಮ ಅಸ್ಮಿತೆಯನ್ನೇ ಕಂಡುಕೊಳ್ಳಲಾಗದ ಅಯೋಮಯದಲ್ಲ ನಾವಿರುವಾಗ ಲಕ್ಷ್ಮೀಶರ ಚಿಕಿತ್ಸಕ ಪ್ರಜ್ಞೆ, ಈ ಜಿಲ್ಲೆಯ ಮರೆಯಾಗಿ ಹೋಗಬಹುದಾಗಿದ್ದ, ಚಲತ್ರೆಯ ವರ್ಣರಂಜಿತ ಅಧ್ಯಾಯಗಳನ್ನು ಪುನಃ ಕಟ್ಟಿಕೊಡುತ್ತಿರುವುದು ಅಭಿನಂದನೀಯ ಸಂಗತಿ ಎಂದಿದ್ದಾರೆ.

About the Author

ಲಕ್ಷ್ಮೀಶ್ ಹೆಗಡೆ ಸೋಂದಾ
(18 February 1984)

ಲಕ್ಷ್ಮೀಶ್ ಹೆಗಡೆ ಸೋಂದಾ, ಇತಿಹಾಸಕಾರರಾಗಿ, ವಾಗ್ಮಿಗಳಾಗಿ ನಾಡಿನ ಚಿರಪರಿಚಿತ ಹೆಸರು. ಕಳೆದ 15 ವರ್ಷಗಳಿಂದ ಇತಿಹಾಸ ಸಂಶೋಧನೆಯಲ್ಲಿ ಸಕ್ರಿಯರಾಗಿ ಹಲವಾರು ಶಾಸನಗಳು, ವೀರಗಲ್ಲುಗಳು, ಐತಿಹಾಸಿಕ ಕುರುಹುಗಳನ್ನು ಸಂಶೋಧಿಸಿ ಅವುಗಳನ್ನು ಅಭ್ಯಸಿಸಿ ಸಮಾಜಕ್ಕೆ ಪರಿಚಯಿಸಿರುತ್ತಾರೆ. ಇದುವರೆಗೂ 13 ಕೃತಿಗಳು, 400 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಸಂಶೋಧನೆಗಾಗಿ 2013 ರಲ್ಲಿ ಬಸವರಾಜ ಕಟ್ಟಿಮನಿ ರಾಜ್ಯ ಪ್ರಶಸ್ತಿ ಮತ್ತು 2016 ರಲ್ಲಿ ಕದಂಬ ಸೇವಾರತ್ನ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿ ವರ್ಷ ಇವರ ಸಂಚಾಲಕತ್ವದಲ್ಲಿ ನಡೆಯುವ ಸೋಂದಾ ಇತಿಹಾಸೋತ್ಸವ ನಾಡಿನಲ್ಲಿ ಪ್ರಸಿದ್ಧಿ ಪಡೆದಿದೆ. ಯುವ ಜನತೆಯಲ್ಲಿ ಸ್ಥಳೀಯ ಇತಿಹಾಸದ ಕುರಿತು ...

READ MORE

Related Books