ತುಂಬಿದ ಕೊಡಗಳು

Author : ಮಹೇಶ ಮನ್ನಯ್ಯನವರಮಠ

Pages 80

₹ 75.00




Year of Publication: 2019
Published by: ಮಧುರಾ ಪ್ರಕಾಶನ
Address: ಮಧುರಾ ಪ್ರಕಾಶನ, ಮಹಾಲಿಂಗಪುರ
Phone: 9448765763

Synopsys

ತುಂಬಿದ ಕೊಡಗಳು- ಸಾಧಕರ ಸಾಧನೆಗಳಿಗೆ ಏಣಿ ಹಾಕಿದ 36 ಲೇಖನಗಳಿವೆ. ಹಲವಾರು ಕ್ಷೇತ್ರಗಳಲ್ಲಿ ಬೆರಗು ಹುಟ್ಟಿಸುವಂಥ ಸಾಧನೆ ಮಾಡಿರುವ ಮಹಾನ್ ವ್ಯಕ್ತಿಗಳು ಸಮಾಜದಲ್ಲಿ ಇಂದು ನಮಗೆ ಉತ್ತಮ ಅಡಿಪಾಯ ಹಾಕಿದ್ದಾರೆ. ಅಂತಹ ಸಾಧಕರ ಕುರಿತು ಧ್ಯಾನಿಸಿದರೆ ನಮ್ಮಲ್ಲೂ ಅಂತಹ ಸಾಧನೆ ಮಾಡಬೇಕೆಂಬ ತುಡಿತ ವ್ಯಕ್ತವಾಗುತ್ತದೆ. ಇಂತಹ ಬರಹಗಳು ಈ ಕೃತಿಯಲ್ಲಿವೆ. ಮುನ್ನುಡಿ ಬರೆದಿರುವ ಡಾ.ಜಿನದತ್ತ ಹಡಗಲಿ ಅವರು, ಓದು ಓದುತ್ತಿದ್ದಂತೆ ಕೆಲವು ಲೇಖನಗಳು ನಮ್ಮ ಕಣ್ಣುಗಳು ನಮಗೆ ಗೊತ್ತಿಲ್ಲದಂತೆಯೇ ಒದ್ದೆಯಾಗಿ ಬಿಡುತ್ತವೆ. ಹೃದಯ ತುಂಬಿ ಬರುತ್ತದೆ ಎಂದು ಹೇಳುತ್ತಾರೆ. ಜೀವನದಲ್ಲಿ ಏನೂ ಇಲ್ಲ ಎಂದು ಹೇಳಿ, ಬದುಕನ್ನು ಅಂತ್ಯಗೊಳಿಸಿಕೊಳ್ಳುವ ಹೇಡಿಗಳಿಗೆ ಇದೊಂದು ಕೈಪಿಡಿಯಾಗಿದೆ. ವಿಸ್ತಾರವಾದ ಪ್ರಪಂಚದಲ್ಲಿ ಸಾಧನೆ ಮಾಡಿ ಬದುಕನ್ನು ಕಟ್ಟಿಕೊಂಡು ಸುಂದರವಾಗಿಸಿಕೊಳ್ಳಲು ಏನೆಲ್ಲ ಅವಕಾಶಗಳಿವೆ ಎಂಬ ಸತ್ಯವನ್ನು ಕೃತಿಯಲ್ಲಿಯ ಸಾಧಕರು ತೋರಿಸಿಕೊಟ್ಟಿದ್ದಾರೆ. ಸಾಧಕರ ಸಾಧನೆಯ ವಿವರವನ್ನು ಸಂಕ್ಷಿಪ್ತವಾಗಿ ಹೇಳಿದ್ದರೂ ತುಂಬಾ ಅರ್ಥಗರ್ಭಿತವಾಗಿದೆ. ಪ್ರತಿಯೊಂದು ಲೇಖನವೂ ಓದಿಸಿಕೊಂಡು ಹೋಗುತ್ತದೆ.

About the Author

ಮಹೇಶ ಮನ್ನಯ್ಯನವರಮಠ

ಮಹೇಶ ಮನ್ನಯ್ಯನವರಮಠ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಪಟ್ಟಣದವರು. ಕಳೆದ ಮೂರು ದಶಕದಿಂದ ಮಹಾಲಿಂಗಪುರದಲ್ಲಿ ವಾಸವಿದ್ದಾರೆ. ಬಿ.ಕಾಂ ಪದವೀಧರರು. ಧಾರವಾಡ ಹಾಗೂ ವಿಜಯಪುರ ಆಕಾಶವಾಣಿ ಕೇಂದ್ರದಿಂದ ಯುವವಾಣಿಯಲ್ಲಿ ಕಥೆಗಳು ಹಾಗೂ ವರದಿಗಳು ಪ್ರಸಾರವಾಗಿವೆ. ನಾಡಿನ ವಿವಿಧ ಪತ್ರಿಕೆಗಳು ಸೇರಿದಂತೆ ವರದಿಗಾರರಾಗಿ ಕೆಲಸ ಮಾಡಿದ್ದು, ಸದ್ಯ ಪ್ರಜಾವಾಣಿಯ ಮಹಾಲಿಂಗಪುರದ ವರದಿಗಾರರು.  ಕೃತಿಗಳು: ನನ್ನ ಕಾವ್ಯ (ಕವನ ಸಂಕಲನ), ಬಾಗಿಲೊಳು ಕೈಮುಗಿದು (ಐತಿಹಾಸಿಕ ದೇವಾಲಯಗಳ ಪರಿಚಯ), ಕಾಡುವ ಮನಸುಗಳು, ಮನಸುಗಳ ಬೆನ್ನತ್ತಿ, ತುಂಬಿದ ಕೊಡಗಳು (ಲಲಿತ ಪ್ರಬಂಧಗಳು) ಪ್ರಶಸ್ತಿ-ಪುರಸ್ಕಾರಗಳು: ‘ನನ್ನ ಕಾವ್ಯ’ ಕವನಸಂಕಲನಕ್ಕೆ ಛಲಗಾರ ಪತ್ರಿಕೆಯಿಂದ ಸಾಹಿತ್ಯ ಶ್ರೀ ...

READ MORE

Related Books