ಸು.ರಂ.ಎಕ್ಕುಂಡಿ ಅವರ ‘ಪಂಜುಗಳು’ ಕೃತಿಯು ಕ್ರಾಂತಿಕಾರಿಗಳ ಬದುಕಿನ ತುಣುಕುಗಳು ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಈ ಸಂಹ್ರಹದ ಸಂಪಾದನೆಗೆ ಶ್ರೀ ರಂಜಾನ್ ದರ್ಗಾ ಹಾಗೂ ಶ್ರೀ ಸಿ. ವಿ. ಆನಂದ ಸಹಕರಿಸಿದ್ದಾರೆ. ಕ್ರಾಂತಿಗಾಗಿ ತಮ್ಮನ್ನು ಅರ್ಪಿಸಿಕೊಂಡ ಇಪ್ಪತ್ತೆರಡು ಜನರ ಬದುಕಿನ ತುಣುಕು ಚಿತ್ರಗಳ ಈ ಕೃತಿಯಿಂದ ಲಭ್ಯವಾಗುತ್ತದೆ. ಬದುಕಿಗೆ ಸವಾಲಾಗಿದ್ದ, ಅಷ್ಟೇ ಅಪಾಯಕಾರಿಯೂ ಆಗಿದ್ದ ಕಾಲಘಟ್ಟದಲ್ಲಿ ಜೀವಿಸಿದ್ದ ಅವರು ಪ್ರವಾಹಕ್ಕೆದುರು ಈಜಿದವರು. ಅವರು ಬದುಕಿನ ವಿವಿಧ ಕ್ಷೇತ್ರಗಳಿಂದ ಬಂದವರು. ಮಾನವೀಯ ತುಡಿತವುಳ್ಳ ಅವರು ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಪಣಕ್ಕಿಟ್ಟು ಹೋರಾಡಿದವರು. ನಮ್ಮ ಬದುಕು ಹಸನಾಗಬೇಕೆಂದು ಅವರು ಸಾವಿನೊಂದಿಗೆ ಸೆಣಸಿದರು, ನಾವು ನಗೆಬೇಕೆಂದು ಅವರು ದುಃಖವನ್ನು ನುಂಗಿಕೊಂಡರು. ಸುತ್ತಲೂ ಬೆಳಕು ಚೆಲ್ಲುವುದಕ್ಕಾಗಿ ತಮ್ಮನ್ನು ದಹಿಸಿಕೊಂಡ ಈ ಪಂಜುಗಳನ್ನು ರಚಿಸಿದವರು ಸು. ರಂ. ಎಕ್ಕುಂಡಿ ಅವರು. ಕವಿ ಹೃದಯದ ಕಳಕಳಿಯಿಂದ, ಇತರರಿಗೆ ಸ್ಫೂರ್ತಿಯಾಗುವಂತೆ ಇವನ್ನು ರಚಿಸಿದ್ದಾರೆ.
ಸು.ರಂ. ಎಕ್ಕುಂಡಿಯವರು ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ. ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು 20-01-1923ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ . 1944 ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. 35 ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಅವರ ಕೃತಿಗಳು ಕಾವ್ಯ- ಶ್ರೀ ಆನಂದತೀರ್ಥರು, ಸಂತಾನ, ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು. ಕಥಾಸಂಕಲನ- ನೆರಳು. ಕಾದಂಬರಿ-ಪ್ರತಿಬಿಂಬಗಳು. ಪರಿಚಯ- ಶ್ರೀ ಪು.ತಿ.ನರಸಿಂಹಾಚಾರ್ಯರು. ಅನುವಾದ- ಎರಡು ...
READ MORE