‘ಚಿತ್ತ-ಬಕ್ಕ’ ಕೃತಿಯಲ್ಲಿ ಲೇಖಕಿ ನಳಿನಿ ಟಿ. ಭೀಮಪ್ಪ ಅವರು ಕೌಟುಂಬಿಕ ಹಾಗೂ ಸಾಮಾಜಿಕ ಓರೆಕೋರೆಗಳಿಗೆ ಕನ್ನಡಿ ಹಿಡಿದಿದ್ದಾರೆ. ಸಮಾಜದ ಆರೋಗ್ಯದ ಕುರಿತು- ಶೌಚ, ಟ್ರಾಫಿಕ್ --// ಮೊಬೈಲ್ ಗೀಳು, ದತ್ತು ವಿಚಾರ, ಟಿ.ವಿ ಮಾಧ್ಯಮದ ಅತಿರೇಕದ ಅಬ್ಬರ, ಬಾಲಕಾರ್ಮಿಕ, ಪರಿಸರ ವಿನಾಶದ ಬಗ್ಗೆ ಲೇಖಕಿ ಕಾಳಜಿ ವ್ಯಕ್ತಪಡಿಸಿದ್ದಾರೆ. ಪುರುಷ ಹಾಗೂ ಮಹಿಳೆ ಸರಿಸಮಾನರು ಅಂತ ನಾವು ಎಷ್ಟೇ ಬೊಬ್ಬಿಟ್ಟರೂ ಕೂಡ ಇಂದಿಗೂ ನಮ್ಮದು “ಪುರುಷಪ್ರಧಾನ ಸಮಾಜವೇ..” ಅದು ಹೆಣ್ಣಿನ ಮನೆಯಲ್ಲೇ ಗೊತ್ತಾಗುತ್ತದೆ. ಸ್ವಾತಂತ್ರ್ಯಹರಣ, ಮೂದಲಿಕೆ, ಅವಹೇಳನ, ತಾತ್ಸಾರ ಅವಳಿಗೆ ಕಟ್ಟಿಟ್ಟ ಬುತ್ತಿ. ಇಲ್ಲಿ ಗಂಡಿನ ‘ಅಹಂ’ ಮೆರೆಯುತ್ತಿರುತ್ತದೆ. ದೌರ್ಜನ್ಯ/ಶೋಷಣೆ ಎಂಬುದು ಹೊಡೆತ-ಬಡಿತ ಎಂಬುದೇ ಆಗಿರಬೇಕೆಂದಿಲ್ಲ. ಮತ್ತೊಂದು ಕ್ರೌರ್ಯ ಎಂದರೆ ಅದು ಭಾವನಾತ್ಮಕ ದೌರ್ಜನ್ಯ/ ಭಾವನಾತ್ಮಕ ನಿಂದನೆ/ ಭಾವನಾತ್ಮಕ ಕೊಲೆ ಆಗಿರುತ್ತದೆ. ಇದನ್ನೆಲ್ಲಾ ಸಾಬೀತುಪಡಿಸುವ ಅನೇಕ ಬದುಕಿನ ನೈಜ ಘಟನೆಗಳನ್ನು ಹೇಳುತ್ತಾ ಹೋಗುತ್ತಾರೆ.
ಲೇಖಕಿ ನಳಿನಿ ಟಿ. ಭೀಮಪ್ಪ ಅವರು ಚಿತ್ರದುರ್ಗದವರು. ಪ್ರಸ್ತುತ ಗೃಹಿಣಿಯಾಗಿ ಧಾರವಾಡದಲ್ಲಿ ನೆಲೆಸಿದ್ದಾರೆ. ಬಿ.ಎಸ್ .ಸಿ ಪದವೀಧರರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಉತ್ತಮ ಕ್ರೀಡಾಪಟುವೂ ಹೌದು. ಕಥೆ, ಲೇಖನ, ಪ್ರಬಂಧ, ಕವಿತೆ, ಲಲಿತ ಪ್ರಬಂಧ ಬರಹದಲ್ಲಿ ಆಸಕ್ತಿ. ಇವರ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಒಂದು ಕಪ್ ಕಾಫೀss (ಹರಟೆಗಳ ಸಂಗ್ರಹ) ...
READ MORE