ಮಂಜೂಷಾ

Author : ಸುರೇಂದ್ರ ದಾನಿ

Pages 130

₹ 20.00




Year of Publication: 1992
Published by: ಮಿಂಚಿನ ಬಳ್ಳಿ ಪ್ರಕಾಶನ
Address: ಬಿಂದುಮಾಧವ ಸ್ಮಾರಕ ಪ್ರತಿಷ್ಠಾನ, ಹುಬ್ಬಳ್ಳಿ-580020

Synopsys

ಪಾ.ವೆಂ. ಆಚಾರ್ಯ ಅವರು ಬರೆದ ಲೇಖನಗಳ ಸಂಕಲನ-ಮಂಜೂಷಾ. ಇದನ್ನು ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಅವರು ಸಂಪಾದಿಸಿದ್ದಾರೆ. ವಾಚಕರ ಸನಾತನ ಸಾಂಪ್ರದಾಯಿಕ ಚಿಂತನೆಗಳನ್ನು ಹಾಗೂ ಸತ್ಯ ಸೃಷ್ಟಿಯನ್ನು ಓದುಗರ ಮುಂದಿಡುವ ಪಾ.ವೆಂ. ಆಚಾರ್ಯರು, ಬ್ರಾಹ್ಮಣರ ಅಹಂ ಹಾಗೂ ದಲಿತರ ಅಬ್ಬರವನ್ನು ಏಕಕಾಲಕ್ಕೆ ಖಂಡಿಸಿದವರು. ದೋಷಿಗೆ ಅವರ ದೋಷವನ್ನು ಎತ್ತಿ ತೋರಿಸುವ ಶೈಲಿ ಅವರದ್ದು. ಬೇರೆ ಬೇರೆ ಕಡೆ ಈ ಲೇಖನಗಳು ಪ್ರಕಟಗೊಂಡಿದ್ದರೂ ಅವು ತಾಜಾತನವನ್ನು ಕಳೆದುಕೊಂಡಿಲ್ಲ. ಆದ್ದರಿಂದ, ಅವುಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ ಎಂದು ಸಂಪಾದಕರು ಹೇಳಿದ್ದಾರೆ.

ಕೃತಿಯಲ್ಲಿ ಜಾತಿ ಪದ್ಧತಿ: ಒಂದು ಐತಿಹಾಸಿಕ ವಿಶ್ಲೇಷಣೆ, ಹರಿಜನರ ಸಮಸ್ಯೆ: ಕೆಲ ಅನಿಷ್ಟ ಲಕ್ಷಣಗಳು, ಬ್ರಾಹ್ಮಣರು ಏನು ಮಾಡಬೇಕು?, ಬತ್ತಲೆ: ಮಂತ್ರದಲ್ಲಿ, ಮಾಟದಲ್ಲಿ, ಭಕ್ತಿಯಲ್ಲಿ, ಬತ್ತಲೆ: ಬಟ್ಟೆ ಮತ್ತು ದಲಿತ ಪ್ರಜ್ಞೆ, ಗತಕಾಲದ ಗೀಳು,; ಹಾದಿಗೊಂದು ಮುಳ್ಳು, ಹೀಗೆ ಒಟ್ಟು 12 ಲೇಖನಗಳಿವೆ.

About the Author

ಸುರೇಂದ್ರ ದಾನಿ
(17 August 1925)

ಸುರೇಂದ್ರ ದಾನಿ ಧಾರವಾಡದವರು. (ಜನನ: 17-08-1925) ಕನ್ನಡ ಹಾಗು ಅರ್ಥಶಾಸ್ತ್ರದಲ್ಲಿ ಪದವೀಧರರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ವರ್ಗದಲ್ಲಿದ್ದರು. ‘ಸುರಾಜ್ಯಪಥ’ ಪಾಕ್ಷಿಕದ ಸಂಪಾದಕರಾಗಿದ್ದರು. ಜೀವನ ಚರಿತ್ರೆಗಳು: ಕೌಜಲಗಿ ಹನುಮಂತರಾಯರು ಮೊಹರೆ ಹಣಮಂತರಾವ ಲೀಲಾತಾಯಿ ಮಾಗಡಿ ಇತರ ಕೃತಿಗಳು: ಕನ್ನಡ ಸಾಹಿತ್ಯ ಸಮ್ಮೇಳನದ ಕಥೆ ಸಾಧನೆ ಸವಾಲು ಸ್ವಯಂಸೇವಕನ ನೆನಪುಗಳು ಪತ್ರಿಕಾ ಪ್ರಬಂಧಗಳು ವ್ಯಾಸಸೃಷ್ಟಿ-ಕುಮಾರವ್ಯಾಸ ದೃಷ್ಟಿ ತಿಳಿವಿನ ತಿರುವು ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ ಅನುವಾದ ಕೃತಿಗಳು:  ಜೋಸೆಫ್ ಪುಲಿಟ್ಝರ ಕಮ್ಯುನಿಸ್ಟ ಚೀನಾ ಹಾಗೂ ಸಂದ ಪುರಸ್ಕಾರಗಳು:  ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಖಾದ್ರಿ ಶಾಮಣ್ಣ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ...

READ MORE

Related Books