ಲೇಖಕಿ ಸುಮಾ ಕಿರಣ್ ಅವರ ಲೇಖನ ಸಂಕಲನ ‘ಮನದ ಮಾತು ಹಲವು ಬಗೆ’. 32 ಲೇಖನಗಳನ್ನು ಒಳಗೊಂಡ ಕೃತಿ ಇದು. ಜನಮಿಡಿತ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳನ್ನು ಒಟ್ಟಿಗೆ ಸೇರಿಸಿ ಪುಸ್ತಕ ರೂಪದಲ್ಲಿ ತರಲಾಗಿದೆ. ಚಂದ್ರಕಾಂತ ಜಿಡ್ಡಿ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಬರಹವೊಂದು ತಾನಾಗಿಯೇ ಓದಿಸಿಕೊಳ್ಳಬೇಕು ಮತ್ತು ಓದುಗನ ಕೌತುಕವನ್ನು ಕೊನೆಯ ಪುಟದವರೆಗೂ ಹಿಡಿದಿರುವಂತಿರಬೇಕು. ಜೊತೆಗೆ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ಸಮತೋಲಿತ ಸಮಾಜಕ್ಕೆ ಮಾದರಿಯಾಗಬಲ್ಲ ಸಂದೇಶಗಳನ್ನು ನೀಡುವಂತಿರಬೇಕು. ಈ ನಿಟ್ಟಿನಲ್ಲಿ ಇವರ ಪ್ರಸ್ತುತ ಕೃತಿಯು ತುಂಬಾ ಉಪಯುಕ್ತವಾದದ್ದು. ದಿನನಿತ್ಯದ ಸನ್ನಿವೇಶಗಳನ್ನೇ ವಿಷಯ ವಸ್ತುಗಳನ್ನಾಗಿ ಆಯ್ಕೆ ಮಾಡಿಕೊಂಡು ಕಥೆ, ಅನುಭವ ಅಥವಾ ಉದಾಹರಣೆಗಳೊಂದಿಗೆ ತುಂಬಾ ಸರಳವಾದ ಶೈಲಿಯಲ್ಲಿ, ಓದುಗನಿಗೆ ಅರ್ಥವಾಗುವ ರೀತಿಯಲ್ಲಿ ವಿಷಯ ಮಂಡಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಬಸ್ರೂರಿನ ಮೂಡ್ಕೇರಿ ಮೂಲದವರಾದ ಸುಮಾ ಕಿರಣ್ ವೃತ್ತಿಯಲ್ಲಿ ಶಿಕ್ಷಕಿ. ಕವನ ಲೇಖನ, ಪ್ರಬಂಧ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಕ್ರಿಯರಾಗಿ ಬರೆಯುವುದು ಇವರ ಹವ್ಯಾಸ. ಸದ್ಯ ಜನಮಿಡಿತ ಪತ್ರಿಕೆಯ ಉಡುಪಿ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿ : ಶಕುನಿ ( ಕಾದಂಬರಿ 2022) ಇವರ ಅಸಂಖ್ಯ ಬರಹಗಳು ಜನಮಿಡಿತ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತವೆ. ಅಲ್ಲದೇ ವಿವಿಧ ಸಾಹಿತ್ಯ ಸಂಘಟನೆಗಳು ಇವರನ್ನು ಪುರಸ್ಕರಿಸಿ ಗೌರವಿಸಿರುತ್ತವೆ. ...
READ MORE