ಸ್ನೇಹಗ್ರಾಮದ ಸಂಸತ್ತುʼ ಕೃತಿಯು ತನ್ನ ಯಾವುದೇ ತಪ್ಪಿಲ್ಲದಿದ್ದರೂ, ಪೋಷಕರಿಂದ ಕಾಣಿಕೆಯಾಗಿ ಬಂದಿದ್ದ ಎಚ್ಐವಿ ಬಾಧೆಯಿಂದಾಗಿ ತನ್ನ ಗ್ರಾಮದಲ್ಲಿ ಅಸ್ಪೃಶ್ಯನಂತೆ ಬದುಕುತ್ತಿದ್ದ ಬಾಲಕನೊಬ್ಬ, ದೂರದ ಸ್ನೇಹಗ್ರಾಮಕ್ಕೆ ಬಂದು ಹೊಸ ಶಾಲೆ, ಅಪರಿಚಿತವಾದ ಭಾಷೆಯ ಸವಾಲುಗಳನ್ನು ಮೆಟ್ಟಿನಿಲ್ಲುತ್ತಲೇ, ತನ್ನ ಕೊಠಡಿಯ ಸಹವಾಸಿಯ ಪ್ರೋತ್ಸಾಹದಿಂದಾಗಿ ಶಾಲೆಯ ಆಟೋಟಗಳಲ್ಲಿ ಅತ್ಯುತ್ತಮ ಸಾಧನೆ ತೋರುವ ಜತೆಗೆ, ತನಗೆ ಆಪ್ತನಾಗಿರುವ ಕೊಠಡಿಯ ಸಹವಾಸಿಯ ಜತೆಗೆ ಕಠಿಣ ಪೈಪೋಟಿ ನಡೆಸಿ, ಶಾಲೆಯ ಸಂಸತ್ತಿನ ಪ್ರಧಾನಮಂತ್ರಿ ಹುದ್ದೆಯನ್ನು ತನ್ನದಾಗಿಸಿಕೊಳ್ಳುವ ರೋಮಾಂಚನದ ಕಥೆಯನ್ನು ಹೇಳುತ್ತದೆ. ಜೀವನದ ಅನಿರೀಕ್ಷಿತ ಹಾದಿಯಲ್ಲಿ ಸಾಗುವಾಗಲೇ ದಿಢೀರನೆ ಎಲ್ಲ ಒಳಿತುಗಳೂ ನಮ್ಮೆಡೆಗೆ ಸಾಗಿ ಬರುತ್ತವೆ ಎಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆಯಾಗಿದೆ.
ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು. ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು. ಕನ್ನಡದ ಖ್ಯಾತ ಜಾಲತಾಣ 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಆಫ್ರಿಕಾ ಪ್ರವಾಸ ಕಥನವಾಗಿರುವ 'ಹಾಯ್ ಅಂಗೋಲಾ!' ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ. ಕನೆಕ್ಟ್ ಕನ್ನಡ ವೆಬ್ ಪತ್ರಿಕೆಯ 'ಪಟ್ಟಾಂಗ' ಅಂಕಣವೂ ...
READ MORE