'ಸತ್ಸಂಗ ಸಂಪದ' ಲೇಖನ ಸಂಕಲನವಾಗಿದ್ದು ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರು ರಚಿಸಿದ್ದಾರೆ. ಕೃತಿಯ ಬೆನ್ನಡಿಯಲ್ಲಿ ಕನ್ನಡಿಗರ ಸಾಕ್ಷಿ ಪ್ರಜ್ಞೆಯಂತಿರುವ ವೈಚಾರಿಕಕೆಯ ಬೀಡು ಆಚಾರವಂತಿಕೆಯ ಗೂಡು ನವದಶಕದ ನಂದನ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲ 'ಅಧ್ಯಾತ್ಮ ಪ್ರಭೂಷಣ ಡಾ. ಗುರುರಾಜ ಪೋಲೆಟ್ಟಹಳ್ಳಿ ಅವರು ದಿನನಿತ್ಯ ಉಣಬಡಿಸುತ್ತಿರುವ ಸತ್ತಂಗ ಸಂಪದ'–ಸಂಸ್ಕೃತಿ ಪರಂಪರೆಯ ದರ್ಶನ ಅಂಕಣ ಓದುಗರಿಗೆ ಅರಿವಿನ ಸಂಜೀವಿನಿ, ಸಶೃಂಗ' ಎಂದರೆ ಸಜ್ಜನರ ಸಂಗ, ಉತ್ತಮರ ಸಹವಾಸ, ಸತ್ತಂಗ ಲಭಿಸುವುದೂ ಭಾಗ್ಯವೇ ಸರಿ, ಅದಕ್ಕೂ ಪೂರ್ವ ಜನ್ಮದ ಪುಣ್ಯವಿರಬೇಕು. ಸಂಗವಾಗಲ, ಸಾಧುಸಂಗವಾಗಲ, ಸಂಗದಿಂದ ಅಂಗ ದೇಹ ಭಂಗವಾಗಲ ಎಂದಿದ್ದಾರೆ. ದಾಸರು, ವಚನಕಾರರು ಅಂದಂತೆ ಸಜ್ಜನರ ಸಂಗವು ಹೆಚ್ಚೇನು ಸವಿದಂತೆ. ಪ್ರತಿದಿನವೂ ಒಂದೊಂದು ವಿಶೇಷ ವಸ್ತು, ಇದೇ ಅಂಕಣಾವತಾರ, ವೇದ-ಉಪನಿಷತ್ತು-ರಾಮಾಯಣ-ಮಹಾಭಾರತ-ಭಾಗವತ-ದಾಸರ ಶರಣರ-ಸಂತ-ಮಹಂತರ ಅನುಭವದ ಸವಿನುಡಿಗಳಿಂದ ಹೆಕ್ಕಿ ತೆಗೆದ ನೀತಿಬೋಧಕ ಕಥಾ ಪ್ರಸಂಗದ ಮೂಲಕ, ಆಚಾರ-ವಿಚಾರಗಳ ತಾತ್ವಿಕ ಹಿನ್ನಲೆಯ ಸ್ಫೂರ್ತಿಯ ಹೊಂಬೆಳಕು, 'ಸಾಂಗ-ಸಂಪದ'ದ ಆವಂದವನ್ನು ಮನದಣಿಯೆ ಉಣಿಸಿವೆ. ಅಂಕಣ ಬರಹವೇ ಒಂದು ತಪಸ್ಸು, ಋಷಿ ಮನದವರಿಗೆ ಮಾತ್ರ ಅಂಕಣಕೃಷಿ ಮಾಡಲು ಸಾಧ್ಯ ಜುಳುಜುಳು ಸದಾನಂದ ಮೈದುಂಬಿ ಮೈಮರೆಸಿ: ಅನಿವರ್ಚನೀಯ ತನ್ಮಯತೆಗೆ ಕಾರಣವಾಗಿರುವ ಶ್ರೀಯುತರ ಅಂಕಣ ಮುಂಜಾನೆಯ ಉದಯರವಿಗೆ ಸುಪ್ರಭಾತ ಈ ಅಂಕಣ ಬರಹಗಳು ತನ್ನಲ್ಲ ಅಂತರ್ಗತವಾಗಿಸಿಕೊಂಡಿರುವ ಶ್ರೇಷ್ಠ ಮೌಲ್ಯಗಳ ಮೂಲಕ ಸಹೃದಯರ ಅಂತರಂಗವನ್ನು ದೀಪ್ತಗೊಳಿಸುವಲ್ಲ ಸಾರ್ಥಕತೆ ಕಂಡುಕೊಂಡಿದೆಯೆಂಬ ನಂಬಿಕೆಯೊಡನೆ ನಿಲ್ಲದಿರಲ ಸಾತ್ವಿಕ ಸಾಹಿತ್ಯ ವಕ್ತಾರರ ಲೇಖನಿಯಿಂದ ಹರಿಯುತ್ತಿರುವ ಈ ಅರಿವಗಾಥೆ ಎಂಬುದೇ ನನ್ನಾಶಯ ಎಂದು ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ಬೆನ್ನಡಿಯಲ್ಲಿ ಬರೆಯುತ್ತಾರೆ.
ಲೇಖಕ ಗುರುರಾಜ ಪೋಶೆಟ್ಟಿಹಳ್ಳಿ ಸಾತ್ವಿಕ ಸಾಹಿತ್ಯ ವಕ್ತಾರರೆಂದೇ ಗುರುತಿಸಿಕೊಂಡಿದ್ದಾರೆ. 1980ರಲ್ಲಿ ಜನಿಸಿದ ಅವರು ಪತ್ರಿಕೋದ್ಯಮ ಪದವಿ ಹಾಗೂ ಕನ್ನಡ ಎಂ.ಎ ಪೂರ್ಣಗೊಳಿಸಿದ್ದಾರೆ. ನೀತಿ ಆಯೋಗದಿಂದ ಮಾನ್ಯತೆ ಪಡೆದ ಐವಿಎಪಿಯಿಂದ ಇಂಡಾಲಜಿ-ಗಣಪತಿ ಕುರಿತು ವಿಶೇಷ ಅಧ್ಯಯನಕ್ಕೆ ರಾಜಮಾತಾ ಶ್ರೀಮತಿ ಪ್ರಮೋದಾದೇವಿ ಒಡೆಯರ್ ರಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸಂಸ್ಕೃತಿ ಚಿಂತಕರು, ಅಂಕಣಕಾರರೂ ಆಗಿರುವ ಗುರುರಾಜ ಪೋಶೆಟ್ಟಿಹಳ್ಳಿ ಅವರು ಮಾಧ್ಯಮ ಸಮಾಲೋಚಕ ಹಾಗೂ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದು, ಪ್ರಣವ ಮೀಡಿಯಾ ಹೌಸ್ ರೂವಾರಿಗಳಾಗಿದ್ದಾರೆ. ಪ್ರಕಟಿತ ಕೃತಿಗಳು: ಕನ್ನಡದ ಕಂಪಿನಲಿ ಕರಿವದನ, ಭಕ್ತಿ ಪಾರಿಜಾತ, ವಂದೇ ಗುರುಪರಂಪರಾಮ್’, ಅಡ್ವೈಸರ್ ಯೋಗ ವಿಶೇಷಾಂಕ 2018(ಅತಿಥಿ ...
READ MORE