‘ಜ್ಞಾನೋಪಾಸಕ’ ಡಿ.ಎಲ್.ಎನ್. ಅವರ ವ್ಯಕ್ತಿತ್ವ ಮತ್ತು ಕೃತಿಗಳ ಕುರಿತ ಲೇಖನಗಳ ಸಂಕಲನ. ಈ ಕೃತಿಯನ್ನು ಜೀ.ಶಂ. ಪರಮಶಿವಯ್ಯ ಮತ್ತು ಎನ್. ಕೃಷ್ಣ ಅವರು ಸಂಪಾದಿಸಿದ್ದಾರೆ. ಡಿ.ಎಲ್.ಎನ್ ಬದುಕು ಬರಹಗಳ ಕುರಿತಾಗಿ ಅವರ ಆಪ್ತರು ಬರೆದ ಲೇಖನಗಳಿವೆ. ಸಿ.ಜಿ. ಪುರುಷೋತ್ತಮ, ಡಾ.ರಂ.ಶ್ರೀ. ಮುಗಳಿ, ಎಸ್.ವಿ. ಪರಮೇಶ್ವರ ಭಟ್ಟ, ಎಚ್. ದೇವೀರಪ್ಪ, ಎಂ. ಯಮುನಾಚಾರ್, ಎಸ್. ನಾರಾಯಣ ಶೆಟ್ಟಿ, ಹಾ.ಮಾ.ನಾಯಕ ಸೇರಿದಂತೆ ಹಲವು ಹಿರಿಯರು ಬರೆದಿರುವ ಬರಹಗಳು ಸಂಕಲನಗೊಂಡಿವೆ.
ಜೀ.ಶಂ. ಪರಮಶಿವಯ್ಯ 'ಜೀಶಂಪ' ಎಂಬ ಸಂಕ್ಷಿಪ್ರನಾಮದಿಂದಲೇ ಚಿರಪರಿಚಿತರು. ಜೀರಹಳ್ಳಿ ಶಂಕರೇಗೌಡ ಪರಮಶಿವಯ್ಯನವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ (ಜನನ: 12-11-1933) ಅಂಬಲ ಜೀರಹಳ್ಳಿಯವರು. ಮೈಸೂರಿನಲ್ಲಿ ತಮ್ಮ ಉನ್ನತ ವ್ಯಾಸಂಗವನ್ನು ಮುಗಿಸಿ ಕನ್ನಡ ಎಂ.ಎ. ಪದವಿಯ ಜೊತೆಗೆ ಜಾನಪದದಲ್ಲಿ ಪಿಎಚ್.ಡಿ. ಪಡೆದರು. ಮೈಸೂರಿನ ಜೆ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಮುಂದೆ ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ, ಜಾನಪದ ಪ್ರಾಧ್ಯಾಪಕರಾಗಿ, ಕುಲಪತಿಗಳ ಆಪ್ತ ಕಾರ್ಯದರ್ಶಿ ಯಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೆಶಕರಾಗಿದ್ದರು. ಜಾನಪದ ಕ್ಷೇತ್ರದಲ್ಲಿ ಅವರ ಸಾಧನೆ ಅದ್ವಿತೀಯ. ಕರ್ನಾಟಕದಾದ್ಯಂತ ಸಂಚರಿಸಿ ಹೊಸ ಹೊಸ ಜಾನಪದ ...
READ MORE