‘ಜೀವನವೆಂದರೇನು?’ ವೀರೇಂದ್ರ ಸಿಂಪಿ ಅವರ ಲೇಖನಗಳಾಗಿವೆ. ನಮ್ಮನ್ನು ಅತ್ಯುತ್ತಮ ನಾಗರಿಕರನ್ನಾಗಿ ರೂಪಿಸುವ ಧ್ಯೇಯವುಳ್ಳ ಅವರು ಮುಖ್ಯವಾಗಿ ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಜೀವಿತದ ಅವಧಿಯಲ್ಲಿ ನೈತಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಕರೆಕೊಟ್ಟಿದ್ದಾರೆ. ಎಲ್ಲ ವಯೋಮಾನದವರಿಗೂ ಈ ಲೇಖನಗಳು ರುಚಿಸುತ್ತವೆ.
ಲೇಖಕ, ಪ್ರಬಂಧಕಾರ ವೀರೇಂದ್ರ ಸಿಂಪಿ ಅವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ. ತಂದೆ ಜಾನಪದ ತಜ್ಞ ಸಿಂಪಿ ಲಿಂಗಣ್ಣ, ತಾಯಿ ಸೊಲಬವ್ವ. ಪ್ರಾರಂಭಿಕ ಶಿಕ್ಷಣ ಚಡಚಣದಲ್ಲಿ ಪೂರೈಸಿದ ಅವರು ಬಿಜಾಪುರದ ವಿಜಯಾ ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿ.ವಿ.ಯಿಂದ ಎಂ.ಎ. ಪದವಿ ಪಡೆದರು. ಆನಂತರ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 1999ರಲ್ಲಿ ನಿವೃತ್ತಿಯಾದರು. ತದನಂತರವೂ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ನಾಲ್ಕು ವರ್ಷ ಸೇವೆ ಸಲ್ಲಿಸಿದರು. ಶಾಲಾ ದಿನಗಳಿಂದಲೇ ಸಾಹಿತ್ಯದತ್ತ ಆಕರ್ಷಿತರಾಗಿದ್ದ ವೀರೇಂದ್ರ ಸಿಂಪಿ ಅವರು ಹೈಸ್ಕೂಲಿನಲ್ಲಿದ್ದಾಗಲೇ ‘ಖೊಟ್ಟಿ ...
READ MOREಹೊಸತು-2003- ಫೆಬ್ರವರಿ
ಉತ್ತಮ ನಡವಳಿಕೆಗಳು ಮಾರ್ಗದರ್ಶನ ಮಾಡುತ್ತ ಉತ್ತಮ ವಿಚಾರಗಳನ್ನು ತಿಳಿ ಹೇಳುವ ಪ್ರಬುದ್ಧ ಪಕ್ವ ಮನಸ್ಸಿನ ಜೀವನವೆಂದರೇನು ಹಿರಿಯರಾದ ಶ್ರೀ ವೀರೇಂದ್ರ ಸಿಂಪಿ ಅವರು ಈ ಲೇಖನಗಳನ್ನು ಬರೆದಿದ್ದಾರೆ. ನಮ್ಮನ್ನು ಅತ್ಯುತ್ತಮ ನಾಗರಿಕರನ್ನಾಗಿ ರೂಪಿಸುವ ಧೈಯವುಳ್ಳ ಅವರು ಮುಖ್ಯವಾಗಿ ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಜೀವಿತದ ಅವಧಿಯಲ್ಲಿ ನೈತಿಕ ಜವಾಬ್ದಾರಿ ಗಳನ್ನು ನಿರ್ವಹಿಸಲು ಕರೆಕೊಟ್ಟಿದ್ದಾರೆ. ಎಲ್ಲ ವಯೋಮಾನದವರಿಗೂ ಈ ಲೇಖನಗಳು ರುಚಿಸುತ್ತವೆ.