‘ನಾದ’ ಬಾಳಿಕೆ ರಾಮ ಭಟ್ ಅವರ ಲೇಖನಗಳ ಸಂಗ್ರಹವಾಗಿದೆ. ವಸ್ತುವೊಂದು ಕಂಪಿಸಿದಾಗ ಗಾಳಿಯೊಂದಿಗೆ ಅಲೆಗಳಾಗಿ ಸಾಗಿ ನಾದೋತ್ಪತ್ತಿಯಾಗುವುದು ಹಾಗೂ ಭೌತಿಕವಾಗಿ ನಮಗದರ ಅನುಭವವು ವೈಜ್ಞಾನಿಕ ಸತ್ಯವಾಗಿದೆ.
ಹೊಸತು-2002-ಏಪ್ರಿಲ್
ವಸ್ತುವೊಂದು ಕಂಪಿಸಿದಾಗ ಗಾಳಿಯೊಂದಿಗೆ ಅಲೆಗಳಾಗಿ ಸಾಗಿ ನಾದೋತ್ಪತ್ತಿಯಾಗುವುದು ಹಾಗೂ ಭೌತಿಕವಾಗಿ ನಮಗದರ ಅನುಭವವು ವೈಜ್ಞಾನಿಕ ಸತ್ಯ. ಈ ಸೂತ್ರದೊಂದಿಗೆ ಹಲವಾರು ಹೆಸರುಗಳೊಂದಿಗೆ ಶಬ್ದವು ನಮಗೆ ಹಿತವಾದ ಇಲ್ಲವೇ ಕಿರಿಕಿರಿ ಉಂಟುಮಾಡುವ ರೀತಿಯನ್ನು ಸೊಗಸಾಗಿ ವಿವರಿಸಲಾಗಿದೆ. ಕಿವಿಗಿಂಪಾದಾಗ ನಾದ (ಸಂಗೀತ) ಕೇಳಲಸಾಧ್ಯವಾದಾಗ ಗದ್ದಲ (ಸಂತೆ)ವಾಗಿ ಸದಾ ನಮ್ಮ ಜೊತೆಗಿರುವ ಶಬ್ದದ ಬಗ್ಗೆ ವಿವರವಾದ ವ್ಯಾಖ್ಯಾನ.