‘ಬೇತಾಳಗಳ ಕುಣಿತ ಅಥವಾ ಸಿದ್ಧಸಭೆಯ ಕಾಯಕಲಾಪಗಳು’ ಕೃತಿಯು ಬಿ.ಎಚ್. ಶ್ರೀಧರ ಅವರ ಬರಹಗಳ ಸಂಕಲನವಾಗಿದೆ. ಈ ಕೃತಿ ಮೊದಲು ಪ್ರಕಟವಾದದ್ದು ಸರ್ವೋದಯ ಸಾಹಿತ್ಯಮಾಲೆ-ಹುಬ್ಬಳ್ಳಿಯ ವತಿಯಿಂದ 1951ರಲ್ಲಿ. ಇದು ಶ್ರೀಧರರು ಮೈಸೂರಿನಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ಬೆಂಗಳೂರಿನ “ನಗುವನಂದ” ಹಾಸ್ಯಪತ್ರಿಕೆಗಾಗಿ ಬರೆಯಲಾರಂಭಿಸಿದ್ದ ವಿಡಂಬನ “ಚಂಪೂಲೇಖನಗಳ” ಸಂಗ್ರಹ. ಅದು ಅವರ ಸೃಷ್ಟಿಶೀಲತೆ ಬಹುರೂಪ ಪಡೆದು ವಿಕಸಿಸುತ್ತಿದ್ದ ವಿಶಿಷ್ಟ ಕಾಲ. ಈ ಕೃತಿಯು ಗುರುವಿನ ಘನತೆಯನ್ನು ಘೋರವಾಗಿ ಹೊಗಳುವುದಾಗಲಿ, ದೋಷವನ್ನು ಗುರುತಿಸುವುದಾಗಲಿ ಸಭ್ಯ ಶಿಷ್ಯರಿಗೆ ಸಲ್ಲದು. ಒ೦ದು ಮಾತನ್ನು ಮಾತ್ರ ಹೇಳದೆ ಗತಿಯಿಲ್ಲ. ಇದೊಂದು ಸರ್ವಾರ್ಥಸಿದ್ದಿ ಕವಚದಂತಿದೆ. ಸಕಲ ರೋಗಗಳಿಗೆ ಇಲ್ಲಿ ಪರಿಹಾರ ಹೇಳಿದೆ. ರೋಗವನ್ನೇ ಆರೋಗ್ಯವೆಂದು ನಂಬಿ ಕಣ್ಣು ಮುಚ್ಚಿ ಕುಳಿತರೆ ಕಿವಿಯನ್ನೇ ಉದ್ದವಾಗಿಸಿ ಬೀಜಮಂತ್ರ ಊದುವ ಶಕ್ತಿ ಇದಕ್ಕಿದೆ ಎಂಬುವುದನ್ನು ಅರಿಯುವಂತೆ ಮಾಡುತ್ತದೆ.
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...
READ MORE