ಮಾನಿಷಾದ

Author : ಡಾ. ಧರಣೀದೇವಿ ಮಾಲಗತ್ತಿ

Pages 328

₹ 200.00




Year of Publication: 2009
Published by: ಲಕ್ಷ್ಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್
Address: ನಂ.34 ಸಿ, ಹೂಟಗಳ್ಳಿ ಇಂಡಸ್ಟ್ರಿಯಲ್ ಏರಿಯಾ, ಮೈಸೂರು- 570001

Synopsys

‘ಮಾನಿಷಾದ’ ಧರಣೀದೇವಿ ಮಾಲಗತ್ತಿ ಅವರ ಲೇಖನ ಸಂಕಲನ. ಈ ಕೃತಿಯಲ್ಲಿ ಮಹಿಳಾ ಅಧ್ಯಯನಕ್ಕೊಂದು ಪೂರ್ವ ಪೀಠಿಕೆ, ಸುಧಾರಣಾವಾದ ಮತ್ತು ಉದಾರವಾದಿ ಸ್ತ್ರೀವಾದದ ಪರಾಮರ್ಶೆ, ಸ್ತ್ರೀವಾದ ಮತ್ತು ಭಾರತೀಯತೆ, ಸ್ತ್ರೀವಾದ ಮತ್ತು ಭಾರತೀಯತೆಯ ಛಿದ್ರೀಕರಣ, ಸ್ತ್ರೀವಾದಿ ವಿಮರ್ಶೆ, ಆಡಂನ ಪಕ್ಕೆಲುಬಲ್ಲ, ಅರ್ಧನಾರೀಶ್ವರನ ಅರ್ಧದೇಹ, ತುಳುವರ ಸಿರಿ-ಅಸಂಭಾವ್ಯಗಳ ದರ್ಪಣ, ಜನಪದ ಸ್ತ್ರೀ ಸಂವಿಧಾನ ಮತ್ತು ಚಲನಶೀಲತೆಯ ಅಪಕಲ್ಪನೆಗಳು, ಮಂಗಳೂರು ಪರಿಸರದ ಗಾದೆ ಮತ್ತು ನಂಬಿಕೆಗಳಲ್ಲಿ ಹೆಣ್ಣು, ಮಹಿಳಾ ಪ್ರಜ್ಞೆ ಮತ್ತು ಅರ್ಥಶಾಸ್ತ್ರದ ಸಿದ್ಧಾಂತಗಳು, ಎರಡನೆಯ ವಸಾಹತೀಕರಣ ಮತ್ತು ಎರಡನೆಯ ದರ್ಜೆಯ ಪ್ರಜೆ, ಮಹಿಳೆ ಮತ್ತು ಶ್ರಮಶಕ್ತಿ, ಭಾರತದ ಹೊರ ಸಾಲದ ಹೊರೆ, ಷೇರು ವಿಕ್ರಯದ ಒಂದು ಮುಖ, ವಚನಸಾಹಿತ್ಯ: ವಾಸ್ತವ ಮತ್ತು ಅವಾಸ್ತವವಾದದ ನಡುವೆ ಹೆಣ್ಣು, ಅಕ್ಕ-ದ್ವಂದ್ವಗಳ ಸಮನ್ವಯಕ್ಕೊಂದು ಹೆಸರು, ಶರಣೆ ಗೊಗ್ಗವ್ವೆ, ಹದಿಬದೆಯಲ್ಲದ ಹೊನ್ನಮ್ಮ, ಸಾಹಿತ್ಯ ಮತ್ತು ಮಹಿಳಾ ಸಂವೇದನೆ, ಕುವೆಂಪು ಅವರ ಸಾಹಿತ್ಯದಲ್ಲಿ ದಲಿತ ಪ್ರಜ್ಞೆ, ಕುವೆಂಪು ಮತ್ತು ಪರಂಪರೆ, ಕುವೆಂಪು ಸಾಹಿತ್ಯದಲ್ಲಿ ದಮನಿತವಾದದ ಸುಳಿವುಗಳು, ದಶಕದ ಮುಸ್ಲಿಂ ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯದಲ್ಲಿ ಮಹಿಳೆ, ದೇವಿಯಾದಳು ದೆವ್ವವಾದಳು ಮನುಷ್ಯಳಾಗಲಿಲ್ಲ, ಸಾಮಾಜಿಕ ಪುನಾರಚನೆ ಮತ್ತು ಆಯ್ಕೆಯ ಪ್ರಶ್ನೆ, ಈವ್ ಟೀಸಿಂಗ್, ಅಶ್ಲೀಲ ಜಾಹೀರಾತುಗಳು ಸ್ತ್ರೀ ಕೇಂದ್ರಿತವಲ್ಲ, ಕಾಮಕೇಂದ್ರಿತ?, ವಿಶ್ವಸುಂದರಿ ವಿವಾದ, ಹೆಂಡತಿಗೆ ಹೊಡೆಯಬೇಕೆನ್ನುವವರು, ಕೆಂಪು ವೆಲ್ವೆಟ್ಟಿನ ಕುಂಕುಮ, ಲೈಂಗಿಕ ಕಾರ್ಯಕರ್ತೆಯರೆಂಬ ಡಿಗ್ರಿ, ಸ್ತ್ರೀ ಅಭಿವ್ಯಕ್ತಿ ಮಾ ನಿಷಾದ, ಗೆಲ್ಲುವ ಕುದುರೆಯ ಸಲ್ಲಕ್ಷಣಗಳು, ಸಾಂಸ್ಕೃತಿಕ ಅನನ್ಯತೆ-ಮೂರು ಕರಡಿ ಕತೆ, ಕಪ್ಪು ಹುಡುಗಿ-ಬಿಳಿ ಹುಡುಗ, ಮಾತು ಬೆಳ್ಳಿ-ಕೃತಿ ಬಂಗಾರ ಸೇರಿದಂತೆ 52 ಲೇಖನಗಳು ಸಂಕಲನಗೊಂಡಿವೆ.

About the Author

ಡಾ. ಧರಣೀದೇವಿ ಮಾಲಗತ್ತಿ
(12 May 1967)

ಕವಿ, ಮಹಿಳಾಪರ ಸಾಹಿತಿ ಧರಣೀದೇವಿ ಮಾಲಗತ್ತಿ ಅವರು ಪೊಲೀಸ್ ಇಲಾಖೆಯಲ್ಲಿ ವಿವಿಧ ಉದ್ದೆಗಳನ್ನು ನಿರ್ವಹಿಸಿ ಸದ್ಯ ಐ.ಪಿ.ಎಸ್. ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವರಾದ ಧರಣೀದೇವಿಯವರ ತಂದೆ- ಪಿ.ದೂಮಣ್ಣ ರೈ, ತಾಯಿ- ದೇವಕಿ ಡಿ.ರೈ. ಕುಕ್ಕಾಜೆ. ಬಿಬಿಎಂ ಹಾಗೂ ಎಂ.ಕಾಂ. ಕನ್ನಡ ಎಂ.ಎ ಪದವೀಧರೆಯಾಗಿರುವ ಅವರು ನಿರ್ವಹಣಾ ಶಾಸ್ತ್ರದಲ್ಲಿ ಪಿ.ಹೆಚ್.ಡಿಯನ್ನು ಪಡೆದಿದ್ದಾರೆ.  1990ರಿಂದ 1991 ರ ವರೆಗೆ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಿಯಾಗಿ, 1991 ರಿಂದ 1993 ರ  ವರೆಗೆ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, 1993ರಿಂದ 94ರ ವರೆಗೆ ...

READ MORE

Related Books