ಮೂಲ ದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು

Author : ಎಂ. ಚಿದಾನಂದಮೂರ್ತಿ

Pages 240

₹ 100.00




Year of Publication: 2004
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ಮೂಲ ದಾಖಲೆಗಳಲ್ಲಿ ಹುದುಗಿದ್ದ ಟಿಪ್ಪು' ಇತಿಹಾಸ ಬರಹದ ಪುಸ್ತಕವನ್ನು ಲೇಖಕ ಎಂ. ಚಿದಾನಂದಮೂರ್ತಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಟಿಪ್ಪು ಒಬ್ಬ ದೇಶಪ್ರೇಮಿ, ವೀರ, ಹುತಾತ್ಮ, ಸರ್ವಧರ್ಮ ಪ್ರೇಮಿ ಎಂದು ಹಲವರು ಅವನನ್ನು ವಿಜೃಂಭಿಸಿದ್ದಾರೆ. ಆದರೆ ಅವನ ಮೂಲ ದಾಖಲೆಗಳನ್ನು ಪರಿಶೀಲಿಸಿದರೆ ಅವನೊಬ್ಬ ಕ್ರೂರಿ, ಮತಾಂಧ, ಸ್ವಾರ್ಥಿ, ಕರ್ನಾಟಕದ ಚರಿತ್ರೆಗೆ ಕಳಂಕ ತಂದಿರುವವನು ಎಂಬುದು ಸ್ಪಷ್ಟವಾಗುತ್ತದೆ. ಅನೇಕ ಪ್ರಮುಖ ದಾಖಲೆಗಳನ್ನು ಅವಲಂಬಿಸಿರುವ ಈ ಕೃತಿ, ಟಿಪ್ಪುವಿನ ನಿಜ ಚರಿತ್ರೆಯನ್ನು ಬಿಚ್ಚಿಡುತ್ತದೆ. ಭಾರತದ ಇಂದಿನ- ಮುಂದಿನ ಸ್ಥಿತಿಯು ಬಗ್ಗೆ ಗಂಭೀರ ಚಿಂತನೆಗೆ ತೊಡಗಿಸುತ್ತದೆ.ಇಲ್ಲಿಯ ಬಹುತೇಕ ಅಭಿಪ್ರಾಯಗಳು ಸಂಪೂರ್ಣ ವಸ್ತುನಿಷ್ಟ ಮತ್ತು ಅವುಗಳನ್ನು ನೇರವಾಗಿ ಕೊಂಕು, ವ್ಯಂಗ್ಯ, ಅನಾಗರಿಕ ಅಲ್ಲದ ಭಾಷೆ ಮತ್ತು ರೀತಿಗಳಲ್ಲಿ ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ.

About the Author

ಎಂ. ಚಿದಾನಂದಮೂರ್ತಿ
(10 May 1931)

ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...

READ MORE

Related Books