ರಂಗ ತರಂಗ

Author : ಅಹಿತಾನಲ (ನಾಗ ಐತಾಳ)

Pages 268

₹ 200.00




Year of Publication: 2016
Published by: ಕನ್ನಡ ಸಾಹಿತ್ಯ ರಂಗ, ಯು.ಎಸ್.ಎ.
Address: ಯು.ಎಸ್.ಎ.

Synopsys

ಸಂಪಾದಕರಾದ ಮೈ. ಶ್ರೀ. ನಟರಾಜ,  ನಾಗ ಐತಾಳ (ಆಹಿತಾನಲ)  , ಮತ್ತು ಜ್ಯೋತಿ ಮಹಾದೇವ್ ಅವರು ಪ್ರಕಟಿಸಿರುವ ’ರಂಗತರಂಗ’ ಕನ್ನಡದ ಮುನ್ನಡೆಯ ಮಿಂಚುನೋಟ ಕೃತಿಯು ಅಮೆರಿಕದಲ್ಲಿರುವ ಕನ್ನಡಿಗರು ತಮ್ಮ ಕನ್ನಡ ಪ್ರೇಮವನ್ನು ಕ್ರಿಯಾಶೀಲವಾಗಿ ಉಳಿಸಿಕೊಂಡಿರುವುದರ ಬಗ್ಗೆ ತಿಳಿಸುವುದಾಗಿದೆ. 

 ಸಾಗರದಾಚೆಯ ಈ ಕನ್ನಡಿಗರು ಎರಡು ವರ್ಷಗಳಿಗೊಮ್ಮೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಯೋಜಿಸಿ, ಅತಿಥಿಗಳಿಗೆ ಮೊದಲೇ ಕೋರಿಕೆ ಮಾಡಿ ಬರೆಸಿರುವ ಲೇಖನಗಳನ್ನು ಕೆಲವೊಮ್ಮೆ ಪುಟ್ಟ ಹೊತ್ತಿಗೆಗಳಾಗಿಯೋ, ಇನ್ನೂ ಕೆಲವೊಮ್ಮೆ ಇತರ ಲೇಖನಗಳೊಂದಿಗೆ ಜೋಡಿಸಿ ಪುಸ್ತಕ ರೂಪದಲ್ಲಿ ತಂದ ಪ್ರಕಟನೆಗಳು ಭಾರತದಲ್ಲಿರುವ ಕನ್ನಡ ಓದುಗರಿಗೂ ಬಹಳ ಉಪಯುಕ್ತವಾಗಿದೆ.

ವಿವಿಧ ವಿಷಯಗಳ ಮೇಲೆ ಅಧಿಕಾರದಿಂದ ಮಾತನಾಡಬಲ್ಲ ವಿದ್ವಾಂಸರ ಸಮೀಕ್ಷೆಗಳು ಕನ್ನಡ ನಾಡಿನಲ್ಲಿರುವ ಕನ್ನಡಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಮೂಲ್ಯವಾಗಿವೆ, ಇವು ಕನ್ನಡ ಸಾಹಿತ್ಯದ ಸಾಧನೆಯನ್ನು ಚಿತ್ರಿಸುವುದಲ್ಲದೆ, ನಾಡಿನ ಮುಂದಿರುವ ಸವಾಲುಗಳನ್ನು ಗಮನಿಸಿ ಕನ್ನಡದ ಮುನ್ನೆಡೆಗೆ ದಾರಿಯನ್ನು ಸಿದ್ದಗೊಳಿಸುವ ಪ್ರಕಟಣೆಗಳು, ಅಮೆರಿಕದಲ್ಲಿಯೂ ಕನ್ನಡ ಲೇಖನಗಳನ್ನು ಅಚ್ಚುಮಾಡಿಸುವುದೇ ಒಂದು ಸಾಹಸವಾಗಿರುವಾಗ ಪ್ರಕಟಣೆಗಳನ್ನು ಸಾಕಷ್ಟು ಮೊದಲೇ ಯೋಚಿಸಿ ಅಚ್ಚುಕಟ್ಟಾಗಿ ಸಿದ್ಧಮಾಡಿ ಕನ್ನಡಿಗರ ಕೈಯಲ್ಲಿಡುವುದು ನಿಜವಾದ ಕನ್ನಡ ನಿಷ್ಠೆ. 

ಈ ಪ್ರಕಟಣೆಗಳು ಸಾವಿರಾರು ಮೈಲುಗಳ ದೂರವನ್ನು ಗೆದ್ದು ಹತ್ತಿರ ತರುವ ಸೇತುವೆಗಳು, ಇವು ಕನ್ನಡ ನಾಡಿನಲ್ಲಿಯೂ ಪ್ರಚಾರವಾಗಬೇಕು. ಅಷ್ಟೇ ಅಲ್ಲ, ಕನ್ನಡ ನಾಡಿನ ಪ್ರತಿ ಶಾಲಾ-ಕಾಲೇಜುಗಳಲ್ಲಿ, ವಾಚನಾಲಯಗಳಲ್ಲಿ ಲಭ್ಯವಾಗುವಂತಿರಬೇಕು. ಇಂಥ ಪುಸ್ತಕಗಳಲ್ಲಿ ಸುಮಾರು ಒಂದು ಪುಟದಷ್ಟಾದರೂ ಅಮೆರಿಕದ ಕನ್ನಡಿಗರ ಸಮಾಚಾರ, ಇನ್ನೊಂದು ಪುಟದಷ್ಟಾದರೂ ಅಮೆರಿಕದ ಕನ್ನಡಿಗರಿಗೆ ಆಸಕ್ತಿಯನ್ನು ಉಂಟುಮಾಡುವ ಕನ್ನಡ ನಾಡಿನ ಸಮಾಚಾರಗಳಿರುವಂತೆ ನೋಡಿಕೊಂಡರೆ ಎರಡೂ ಸಮುದಾಯಗಳನ್ನು ಇನ್ನೂ ಹತ್ತಿರಕ್ಕೆ ತರುತ್ತದೆ, “ರಂಗ ತರಂಗ' ಅನಂತವಾಗಿ ಅಮೆರಿಕದ ಕನ್ನಡಿಗರು ಮತ್ತು ಕನ್ನಡ ನಾಡಿನ ಕನ್ನಡಿಗರ ಸೇವೆ ಮೆಚ್ಚುವಂತದ್ದಾಗಿದೆ. 

 

 

About the Author

ಅಹಿತಾನಲ (ನಾಗ ಐತಾಳ)
(05 October 1932 - 29 October 2022)

ಅಹಿತಾನಲ ಎಂಬ ಕಾವ್ಯನಾಮದಿಂದ ಬರೆಯುವ ವಿಜ್ಞಾನಿ ನಾಗ ಐತಾಳ ಅವರು ಜನಿಸಿದ್ದು 1932ರ ಅಕ್ಟೋಬರ್‍ 5ರಂದು. ಮೂಲತಃ ಉಡುಪಿ ಜಿಲ್ಲೆಯ ಕೋಟದವರಾದ ಅವರು ಸದ್ಯ ಕ್ಯಾಲಿಫೋರ್ನಿಯಾದ ಅರ್‍ಕಾಡಿಯಾದ ನಿವಾಸಿ ಆಗಿರುವ ಐತಾಳರು ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಆರ್ಯ ವಿದ್ಯಾಶಾಲೆಯಲ್ಲಿಯೂ ಪದವಿ ಶಿಕ್ಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಅವರು ಅಧ್ಯಯನ ಮಾಡಿದ್ದಾರೆ.  ಭಾರತದಲ್ಲಿ ಪಿಎಚ್.ಡಿ. ಪದವಿ ಪಡೆದ ನಂತರ ಬಯೋಕೆಮಿಸ್ಟ್ರಿಯಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ಕೆನಡಾಕ್ಕೆ ಹೋದರು. ಅದಾದ ಮೇಲೆ ಅಮೆರಿಕೆಗೆ ಹೋದ ಅವರು 1975ರಿಂದ 2001ರ ವರೆಗೆ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ ...

READ MORE

Related Books