ಕಂಬಾರರ ನಾಟಕಗಳು

Author : ವಿಕ್ರಮ ವಿಸಾಜಿ

Pages 78

₹ 45.00




Year of Publication: 2001
Published by: ಸಂಚಯ
Address: 2ನೇ ಮುಖ್ಯ, 6ನೇ ಬ್ಲಾಕ್‌, 3ನೇ ಹಂತ, ಬನಶಂಕರಿ, ಬೆಂಗಳೂರು- 560085
Phone: 9844063514

Synopsys

ಲೇಖಕ ವಿಕ್ರಮ ವಿಸಾಜಿ ಅವರ ಸಂಪಾದಿತ ಕೃತಿ ʻಕಂಬಾರರ ನಾಟಕಗಳುʼ. ಪುಸ್ತಕದಲ್ಲಿ ಖ್ಯಾತ ಸಾಹಿತಿ ಕಂಬಾರರ ನಾಟಕಗಳ ಕುರಿತಾದ ವಿಚಾರಗಳು, ಪ್ರಬಂಧಗಳು ಒಟ್ಟಾರೆ ಸಾಹಿತ್ಯದ ಬಗೆಗಿನ ಬರಹಗಳು ಇವೆ. ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, “ಕಂಬಾರರ ನಾಟಕಗಳ ಪಾತ್ರಗಳಿಗೆ ಕನ್ನಡ ಪರಂಪರೆಯಲ್ಲಿ ಒಂದು ದೀರ್ಘವಾದ ಸಾಂಸ್ಕೃತಿಕ ಚರಿತ್ರೆಯೇ ಇದೆ. ಅವರ ನಾಟಕಗಳ ವಸ್ತುಗಳು ಕೂಡಾ ನಮ್ಮ ಹಿಂದಿನವರ ಬದುಕಿನ ತಲ್ಲಣಗಳಿಂದಾಯ್ದವುಗಳೇ ಆಗಿವೆ. ಪ್ರಭುತ್ವದ ಕೇಂದ್ರದಲ್ಲಿರುವ ಜನ ಮತ್ತು ಇದರ ಅಂಚಿನಲ್ಲಿರುವ ಜನ, ಇವರ ನಡುವಿನ ಸಂಘರ್ಷ ಕಂಬಾರರ ಬಹುತೇಕ ನಾಟಕಗಳ ಅನಿವಾರ್ಯ ಸ್ಥಿತಿಯಾಗಿಬಿಟ್ಟಿದೆ. ಅವರ ಕೆಲವು ನಾಟಕಗಳು ಜಮೀನ್ದಾರಿ ವ್ಯವಸ್ಥೆಯ ಬಿರುಕು, ತಲ್ಲಣಗಳನ್ನು ನಮ್ಮೆದುರಿಗೆ ತೆರೆದಿಟ್ಟರೆ ಮತ್ತೆ ಕೆಲವು ನಾಟಕಗಳು ಆಕ್ರಮಣಕ್ಕೆ ಒಳಗಾದ ನಂತರದ ಸಂಕಟಗಳನ್ನು ಹಿಡಿದಿಟ್ಟುಕೊಂಡಿವೆ. ಹೀಗೆ ನಮ್ಮ ಬಹುಮುಖ ಪರಂಪರೆಯ ಗಾಢ ಅರಿವಿನಲ್ಲಿ ಕಂಬಾರರ ನಾಟಕಗಳು ಬೆಳೆದು ನಿಂತಿವೆ. ವಿಭಿನ್ನ ನೆಲೆಗಳಿಂದ ಕಂಬಾರರ ನಾಟಕಗಳು ಇಲ್ಲಿ ಚರ್ಚೆಗೊಳಗಾಗಿದ್ದು, ಕೆಲವರು ಅವರ ನಾಟಕಗಳ ಗುಣಾತ್ಮಕ ಅಂಶಗಳಿಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದರೆ, ಇನ್ನೂ ಕೆಲವರಿಗೆ ಅವರ ನಾಟಕಗಳ ಜೊತೆ ಹೆಚ್ಚಿನ ತಕರಾರುಗಳಿವೆ”.

About the Author

ವಿಕ್ರಮ ವಿಸಾಜಿ

ಕಲಬುರ್ಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿರುವ ವಿಕ್ರಮ ವಿಸಾಜಿ ಅವರು ಕವಿ-ವಿಮರ್ಶಕ. ಬೀದರ ಜಿಲ್ಲೆಯ ಭಾಲ್ಕಿಯವರಾದ ವಿಕ್ರಮ ಅವರ ತಂದೆ ಹೆಸರಾಂತ ಕವಿ-ಲೇಖಕರು. ಬಾಲ್ಯದಲ್ಲಿಯೇ ಕವಿತೆ ಬರೆಯುವುದನ್ನು ಆರಂಭಿಸಿದ ವಿಕ್ರಮ ಅವರು ಹೈಸ್ಕೂಲಿನಲ್ಲಿದ್ದಾಗಲೇ ಕವನ ಸಂಕಲನ ಪ್ರಕಟಿಸಿದ್ದರು.  ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಪದವಿ ಪಡೆದ ಅವರು ಕಂಬಾರರ ಕಾವ್ಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ ಸೊಂಡೂರು, ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.  ಕನ್ನಡ ಸಾಹಿತ್ಯ ಪರಿಷತ್ತು ...

READ MORE

Related Books