`ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಡಾ. ಪ್ರಕಾಶ್ ಭಟ್ ಅವರ ಲೇಖನ ಸಂಕಲನವಾಗಿದೆ. ಕೃತಿ ಕುರಿತು ಜಗದೀಶ್ ಕೊಪ್ಪ ಹೀಗೆ ಹೇಳಿದ್ದಾರೆ; ಈ ಕೃತಿಯಲ್ಲಿ ಹಸು,ಎಮ್ಮೆ, ಕುರಿ, ಮೇಕೆ ಸಾಕಾಣಿಕೆಯ ಅನುಭವದ ಕಥೆಯಿದೆ. ಸ್ವ ಸಹಾಯ ಸಂಘಗಳನ್ನ ರಚಿಸಿದ ಕಥನ, ಕೃಷಿ ಹೊಂಡಗಳ ನಿರ್ಮಾಣದ ಕಥೆ, ಭೂ ರಹಿತ ಬಡವರಿಗೆ ಕೃಷಿ ಕೂಲಿಯ ಬಡತನ ಜೀವನದಿಂದ ಮೇಲೆದ್ದು ಬರಲು ಪರ್ಯಾಯ ಮಾರ್ಗಳು, ಮಹಿಳೆಯರಿಗೆ ಹೊಲಿಗೆ ತರಬೇತಿ, ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ತಯಾರಿಕೆ ಮತ್ತು ಮಾರಾಟ ಹಾಗೂ ಸಣ್ಣ ಭೂಮಿ ಹೊಂದಿರುವ ಕುಟುಂಬಗಳಿಗೆ ಹಣ್ಣಿನ ಗಿಡ, ಇತರೆ ಮೇವಿ ನಗಿಡ ಬೆಳೆಸುವುದು, ಭೂಮಿಯಲ್ಲಿ ಮಳೆ ನೀರು ಇಂಗುವಂತೆ ಮಾಡುವ ವಿಧಾನ, ಬಯಲು ಶೌಚಾಲಯ ತಪ್ಪಿಸಿ, ಮನೆಗೊಂದು ಶೌಚಾಲಯ ನಿರ್ಮಾಣ, ಹೊಗೆ ರಹಿತ ಒಲೆಗಳು, ಅಡಿಗೆ ಮನೆ ಮತ್ತು ಆಹಾರ ತಯಾರಿಕೆಯಲ್ಲಿ ಶುದ್ಧತೆಗೆ ವಹಿಸಬೇಕಾದ ಕಾಳಜಿ ಹೀಗೆ ನೂರಾರು ಕಥನಗಳಿವೆ. ಐರೋಪ್ಯ ಒಕ್ಕೂಟ ಮತ್ತು ನಬಾರ್ಡ್ ಸಹಭಾಗಿತ್ವದಲ್ಲಿ ನಡೆದ ಈ ಅಭಿವೃದ್ಧಿಯ ಕಾರ್ಯಕ್ರಮಗಳಿಗೆ ಡಾ. ಪ್ರಕಾಶ್ ಭಟ್ ಅವರು ನೇತಾರರಾಗಿ ಕಾರ್ಯಕರ್ತರೊಂದಿಗೆ ಹಳ್ಳಿಗಳಲ್ಲಿ ಉಳಿದು ಅಲ್ಲಿನ ಜನರ ಮನಗೆಲ್ಲುವುದರ ಮೂಲಕ ಯಶಸ್ಸು ಸಾಧಿಸಿದ್ದಾರೆ. ಗ್ರಾಮೀಣಾಭಿವೃದ್ಧಿಯ ಸಿದ್ಧಾಂತಗಳಿಗೆ ಮತ್ತು ಪ್ರಯೋಗಗಳಿಗೆ ಅಜಗಜಾಂತರ ವತ್ಯಾಸವಿದೆ ಎಂಬುದನ್ನು ಪ್ರಕಾಶ್ ಭಟ್ ಅವರು ತಮ್ಮ ಹಲವಾರು ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.
ಯಕ್ಷಗಾನ ಕಲಾವಿದ, ಲೇಖಕ ಡಾ. ಪ್ರಕಾಶ್ ಭಟ್ ಅವರು ಧಾರವಾಡದಲ್ಲಿ ನೆಲೆಸಿದ್ದಾರೆ. ಪಶು ವೈದ್ಯಕೀಯ ವಿಜ್ಞಾನದಲ್ಲಿ ಪದವೀಧರರಾಗಿದ್ದು, ಗ್ರಾಮೀಣಾಭಿವೃದ್ಧಿ ಅವರ ಆಸಕ್ತಿಯ ಕೇಂದ್ರ. ಉತ್ತರ ಕರ್ನಾಟಕದಲ್ಲಿ ಅವರು ಕಳೆದ ಮೂರು ದಶಕಗಳಿಂದ ಮಾಡುತ್ತಿರುವ ಹಳ್ಳಿಗಳ ಅಭಿವೃದ್ಧಿ, ಯೋಜನೆಗಳು ಮತ್ತು ಕೃಷಿ ಹೊಂಡಗಳ ನಿರ್ಮಾಣ ಹಾಗೂ ಬರೀ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿರುವ ಕಲಘಟಗಿ ತಾಲ್ಲೂಕಿನ ಒಣ ಭೂಮಿಯಲ್ಲಿ ಹಸಿರನ್ನು ಎಬ್ಬಿಸಿ, ರೈತರ ಮುಖದಲ್ಲಿ ನೆಮ್ಮದಿಯ ನೆಲೆಯನ್ನು ಸೃಷ್ಟಿ ಮಾಡಿದ್ದಾರೆ. ಕೃತಿಗಳು: ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ...
READ MORE