‘ಮುಸ್ಸಂಜೆ ಮಾತು’ ಪ್ರಸಾದ ನಾಯ್ಕ್ ಅವರ ಕೃತಿಯಾಗಿದೆ. ವಯಸ್ಸಾಗುವುದು ಎಂಬ ಅನುದಿನದ ಪ್ರಕ್ರಿಯೆಯೇ ಸೃಷ್ಟಿಯ ಒಂದು ಸೋಜಿಗ. ಸಾವಿನ ಹಾದಿಯಲ್ಲಿ ಬರುವ ಒಂದು ಹಂತವಾದ ಕಾರಣಕ್ಕೋ ಏನೋ ವಯಸ್ಸಾಗುವುದೆಂದರೆ ನಿಡುಸುಯ್ಯುವವರೇ ಹೆಚ್ಚು. ಹಾಗಂತ ವಯಸ್ಸಾಗುವುದೇನು ನಿಲ್ಲುತ್ತದೆಯೇ? ಖಂಡಿತ ಇಲ್ಲ! ಮುಪ್ಪು, ವೃದ್ಧಾಪ್ಯ, ವಾನಪ್ರಸ್ಥಾಶ್ರಮಗಳೆಂದು ಹಲವು ಹೆಸರುಗಳಲ್ಲಿ ಕರೆಯಲಾಗುವ ಈ ಹಂತವು ಬರುವ ಸಮಯದಲ್ಲಿ ಬಂದೇ ಬರುತ್ತದೆ. ವರ್ಷಗಳಲ್ಲಿ ಆಯಸ್ಸನ್ನು ಅಳೆಯುವ ನಮಗೆ, ನಿಮಿಷಗಳಲ್ಲಿ ಸೋರಿಹೋಗುವ ಆಯಸ್ಸೇಕೆ ಅಷ್ಟಾಗಿ ಗಮನಕ್ಕೆ ಬರುವುದಿಲ್ಲ? ವೃದ್ಧಾಪ್ಯದಲ್ಲೂ ಚಂದದ ಬದುಕು ಸಾಧ್ಯವಿಲ್ಲವೇ? ವೃತ್ತಿಬದುಕಿನಲ್ಲಿ ನಿವೃತ್ತಿಗೆ ತಯಾರಾದಂತೆ, ಬದುಕಿನಲ್ಲಿ ವೃದ್ಧಾಪ್ಯಕ್ಕೆ ತಯಾರಾದರೆ ತಪ್ಪೇನಿದೆ? ಹೀಗೆ ಹಲವು ಪ್ರಶ್ನೆ-ತಲಾಶೆಗಳ ಚುಂಗು ಹಿಡಿಯುತ್ತಾ ಹೊರಟ ನನಗೆ ದಕ್ಕುತ್ತಾ ಹೋದ ಸಂಗತಿಗಳು ಸಾಕಷ್ಟು. ಈ ವಿಷಯದ ಬಗ್ಗೆ ಪುಸ್ತಕವೊಂದನ್ನು ಬರೆಯಲು ನನಗೇನು ಮಹಾವಯಸ್ಸು ಎಂಬ ಪ್ರಶ್ನೆಯು ಕಾಡಿದ್ದೇನೋ ಹೌದು. ಆದರೆ ಬರಹಗಾರನೊಬ್ಬ ತನ್ನನ್ನು ಬಲವಾಗಿ ಕಾಡಿದ ಸಂಗತಿಗಳ, ಕತೆಗಳ ಬಗ್ಗೆ ತನ್ನ ಓದುಗರೊಂದಿಗೆ ಹೇಳಿಕೊಳ್ಳದೆ ಹೆಚ್ಚು ಕಾಲ ಇರಲಾರ. ಇವೆಲ್ಲದರ ಫಲವೇ ಈ ಪುಸ್ತಕ. "ಮುಸ್ಸಂಜೆ ಮಾತು" ಬದುಕಿನ ಮುಸ್ಸಂಜೆಯ ಕತೆಗಳನ್ನು ತೆರೆದಿಟ್ಟಿರುವ ಒಂದು ಕಿರುಹೊತ್ತಗೆ. ಒಂದಲ್ಲ ಒಂದು ಹಂತದಲ್ಲಿ ಬದುಕಿನ ಮುಸ್ಸಂಜೆಯನ್ನು ನೋಡಲಿರುವ ಪ್ರತಿಯೊಬ್ಬರೂ ಒಮ್ಮೆ ಓದಬೇಕಾದ ಪುಸ್ತಕವಿದು.
ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು. ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು. ಕನ್ನಡದ ಖ್ಯಾತ ಜಾಲತಾಣ 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಆಫ್ರಿಕಾ ಪ್ರವಾಸ ಕಥನವಾಗಿರುವ 'ಹಾಯ್ ಅಂಗೋಲಾ!' ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ. ಕನೆಕ್ಟ್ ಕನ್ನಡ ವೆಬ್ ಪತ್ರಿಕೆಯ 'ಪಟ್ಟಾಂಗ' ಅಂಕಣವೂ ...
READ MORE