ರವೀಂದ್ರ ಭಟ್ಟ ಅವರ ಲೇಖನಗಳ ಸಂಕಲನ ‘ಇಂಥವರೂ ಇದ್ದಾರೆ ಜಗದೊಳಗೆ..’. ಪ್ರಜಾವಾಣಿಯ ಸಂಗತ ವಿಭಾಗದಲ್ಲಿ ಬರೆದ ಲೇಖನಗಳ ಸಂಗ್ರಹವಿದು. ಇಲ್ಲಿರುವ ಬಹುತಾಕ ವಸ್ತು ಬೇರೆ ಬೇರೆಯಾದರೂ ಮಾನವೀಯತೆ ಅವುಗಳ ಮೂಲಸತ್ವ, ಜನ ಸಾಮಾನ್ಯರ ಅಸಾಮಾನ್ಯ ಗುಣ, ದೊಡ್ಡವರ ಸಣ್ಣತನ ಎಲ್ಲವೂ ಇಲ್ಲಿವೆ ಎನ್ನುತ್ತಾರೆ ಲೇಖಕ ರವೀಂದ್ರ ಭಟ್ಟ.
ಕೃತಿಯ ಪರಿವಿಡಿಯಲ್ಲಿ ಕರೆದರೆ ಬಂದಾನಯೇ ಭಗೀರಥ, ಅಜ್ಞಾತ ಆಟೋ ಚಾಲಕನ ನೆನೆದು!, ಕಾಳು ಮುರಿದುಕೊಂಡು ಬಿದ್ದ ಶೋಷಣೆ!, ಇಲ್ಲಿ ಕಲ್ಲರಳಿ ಹೂವಾಗದು!, ಇಂಥವರೂ ಇದ್ದಾರೆ ಜಗದೊಳಗೆ, ಧನ್ಯವಾಯಿತು ಕಲೆ ಋಣ ಸಂದಾಯದಲ್ಲಿ!, ಇಲ್ಲಿ ಸಾಲವೆಂಬುದು ಗಗನ ಕುಸುಮ!, ಹೈದರಾಲಿ ನಮಗೆ ಆದರ್ಶ ಆಗಲಾರನೇ?, ನಗರ ಸ್ವ್ಛ ಮಾಡುವವರ ‘ಹೊಲಸು ಬದುಕು’, ಈ ಹನುಮನಿಗೆ ರಾಮನ ನೆರವಿಲ್ಲ!, ಅನ್ನ ಕಸಿದುಕೊಂಡ ಮಾಹಿತಿ ಹಕ್ಕು!, ಕಲಾವಿದರಿಗೆ ‘ಅರಮನೆ ಕಂಪ್ನಿ’ ಪಾಠ!, ಡಾರ್ವಿನ್ ವಾದಕ್ಕೆ 150ವರ್ಷ, ಘೋರ ವಿಷ: ಹಾವಿನದ್ದೋ ಮನುಷ್ಯನದ್ದೋ!, ನಮ್ಮ ನಡುವೆ ಇನ್ನೂ ‘ಗಾಂಧಿ’ಗಳಿದ್ದಾರೆ! ಹೀಗೆ 42 ಶೀರ್ಷಿಕೆಗಳ ಲೇಖನಗಳು ಈ ಸಂಕಲನದಲ್ಲಿವೆ.
ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...
READ MORE