ಸುಖವೆಂಬ ಮರೀಚಕೆಯನ್ನು ಎಲ್ಲರು ನಿರಂತರವಾಗಿ ಬೆನ್ನುಹತ್ತಿರುತ್ತಾರೆ. ಅಂತಹ ಸುಖದ ಹಲವಾರು ಮುಖಗಳ ಪರಿಚಯ ಇಲ್ಲಿದೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪಕಟವಾದ ಸಣ್ಣ ಮತ್ತು ದೊಡ್ಡ ಬರಹಗಳ ಸಂಗ್ರಹವಿದು. ದಾಂಪತ್ಯ, ಮಕ್ಕಳು, ಇತರ ಸ್ನೇಹ ಸಂಬಂಧಗಳು-ಹೀಗೆ ನಿತ್ಯ ಜೀವನದ ಹಲವಾರು ಅಂಶಗಳು ಇಲ್ಲಿನ ಬರಹಗಳಲ್ಲಿ ವಿಸ್ತರಿಸಿಕೊಳ್ಳುತ್ತವೆ. ಮನೋಚಿಕಿತ್ಸಕರಾಗಿ ಲೇಖಕರ ಅನುಭವ ಇಲ್ಲಿನ ಬರಹಗಳ ಆಪ್ತತೆಯನ್ನು ಹೆಚ್ಚಿಸಿದೆ. ಪುಸ್ತಕವನ್ನು ಆರಂಭದಿಂದ ಅಂತ್ಯದವರೆಗೆ ಓದಲೇಬೇಕಾಗಿಲ್ಲ. ಬಿಡುವಿದ್ದಾಗ ಮಧ್ಯದ ಯಾವುದೇ ಬರಹವನ್ನು ಹೆಕ್ಕಿ ಓದಿದರೂ ಸಂಪೂರ್ಣ ಅರ್ಥವತ್ತಾಗಿರುತ್ತದೆ. ಸರಳವಾದ ನಿರೂಪಣೆ ಮತ್ತು ಜನಸಾಮಾನ್ಯರನ್ನು ನೇರವಾಗಿ ತಲುಪುವ ವಿವರಣೆಯಿಂದ ಪುಸ್ತಕ ಭಿನ್ನವಾಗುತ್ತದೆ.
ನಡಹಳ್ಳಿ ವಸಂತ್ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ ...
READ MORE