‘ಈಶಾನ್ಯೆ ಒಡಲು’ ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ನೋಟ, ಪತ್ರಕರ್ತ, ಲೇಖಕ ದೇವು ಪತ್ತಾರ ಅವರ ಲೇಖನಗಳ ಸಂಕಲನ. ದೇಶದ ಈಶಾನ್ಯ ರಾಜ್ಯಗಳ ಹಾಗೆ ಕರ್ನಾಟಕದ ಈಶಾನ್ಯ ಜಿಲ್ಲೆಗಳು. ಈಗ “ಕಲ್ಯಾಣ ಕರ್ನಾಟಕ' ಎಂದು ಗುರುತಿಸಲಾಗುವ ರಾಜ್ಯದ ಈ ಭಾಗ ಚಿನ್ನ ಮತ್ತು ಬಿಸಿಲುಗಳೆರಡನ್ನೂ ಪಡೆದಿರುವ ಪ್ರದೇಶ. ಸಾವಿರಕ್ಕೂ ಹೆಚ್ಚು ವರುಷಗಳಿಂದ ಚಿನ್ನದ ಒಡನಾಟ ಇದ್ದರೂ ಇಲ್ಲಿಯ ಜನ ಬೆಳದಿಂಗಳಿಗಿಂತ ಬಿಸಿಲನ್ನೇ ಹೆಚ್ಚು ಕಂಡವರು. ವಾಸ್ತವವಾಗಿ ನೋಡಿದರೆ ಬಿಸಿಲ ಬೆಳಕು ಚಿನ್ನದ ಹೊಳಪನ್ನು ಹೆಚ್ಚಿಸಬೇಕಿತ್ತು. ಆದರೆ, ಉರಿಬಿಸಿಲ ಬೆಳಕು ಕಣ್ಣ ಮಂಜಾಗಿಸಿದ್ದೇ ಹೆಚ್ಚು. ಬಿಸಿಲ ಆರ್ಭಟವೇ ಹೆಚ್ಚಾಗಿ ಕೇವಲ ಬೆವರು ಸುರಿಸುವುದಕ್ಕೇ ಸೀಮಿತವಾಗಿದೆ. ಬೆವರಿಗೆ ತಕ್ಕ ಬೆಲೆ ಪಡೆಯುವುದು ಸಾಧ್ಯವಾಗಿಲ್ಲ.
ಮುಖ್ಯವಾಹಿನಿಯಿಂದ ದೂರ ಮತ್ತು ಭಿನ್ನವಾಗಿ ಹರಿಯುತ್ತ ಬಂದಿರುವ ಈಶಾನ್ಯ ಜಿಲ್ಲೆಗಳ ಭವ್ಯ ಪರಂಪರೆಯು ವರ್ತಮಾನದ ಬಿಸಿಲಿನಲ್ಲಿ ಮಸುಕಾಗಿದೆ. 'ಹೈದರಾಬಾದ್ ಕರ್ನಾಟಕ' ಎಂದು ಕರೆಯಲಾಗುತ್ತಿದ್ದ ಈ ಪ್ರದೇಶವು “ಹಿಂದುಳಿದ ಪ್ರದೇಶ' ಎಂಬ ಹಣೆಪಟ್ಟಿಗೆ ಒಳಗಾಗಿದೆ. ಆರ್ಥಿಕ- ಸಾಮಾಜಿಕ ಕಾರಣಗಳಿಂದ ಅದು ಸರಿ. ಆದರೆ, ಅದೇ ಹೊತ್ತಿಗೆ ಸಾಂಸ್ಕೃತಿಕ ಜೀವಂತಿಕೆ ಅರಿವಿಗೂ ಬಾರದಷ್ಟು ಹಿಂದೆ ಸರಿದಿದೆ. ಹರಡಿದ ಧೂಳು ಕಾಲನ ಓಟದಲ್ಲಿ ಒರೆಸಲಾಗದಷ್ಟು ಬೆಳೆದಿದೆ. ಚಿತ್ರ-ಚಿತ್ರಣ ಅಸ್ಪಷ್ಟವಾಗಿದೆ. ಇತಿಹಾಸ, ಸಾಹಿತ್ಯ, ಕಲೆ, ಸಂಗೀತ ಸೇರಿಂತೆ ಹಲವು ಕ್ಷೇತ್ರಗಳಲ್ಲಿ ಢಾಳಾಗಿ ಎದ್ದು ಕಾಣುವ ಸಾಧನೆ ಇದ್ದರೂ ಅವಗಣನೆಗೆ ಒಳಗಾಗಿವೆ. ಚಾರಿತ್ರಿಕ ನೋಟ ಬೀರುವ ಈ ಪುಸ್ತಕದ ಬರಹಗಳು 'ಅನಭಿವೃದ್ಧಿ ಕಥನ'ವೂ ಹೌದು ಎಂದಿದ್ದಾರೆ ಲೇಖಕ ದೇವು ಪತ್ತಾರ.
ಪತ್ರಕರ್ತ, ಲೇಖಕ ದೇವು ಪತ್ತಾರ ಅವರು ಮೂಲತಃ ಯಾದಗಿರಿ ಜಿಲ್ಲೆ ಶಹಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಲಿಂಗ್ವಿಸ್ಟಿಕ್ಸ್ ಹಾಗೂ ಟ್ರಾನ್ಸಲೇಷನ್‌ನಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ. ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕ ಹಾಗೂ ಅಂಕಣಕಾರರಾಗಿ ಕಾರ್ಯ ನಿರ್ವಹಿಸಿರುವ ಅವರು ಪ್ರಸ್ತುತ ಬುಕ್ ಬ್ರಹ್ಮ ಡಿಜಿಟಲ್ ಮೀಡಿಯಾದಲ್ಲಿ ಪ್ರಧಾನ ಸಂಪಾದಕರಾಗಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಉದ್ಯೋಗ ಖಾತ್ರಿ ಮತ್ತು ವಲಸೆ ಕುರಿತು ಅಧ್ಯಯನ ವರದಿ ಮಂಡಿಸಿರುವ ಇವರು ...
READ MORE