ಶರಣರ ಚರಿತೆ-ಲೇಖಕ ಶ್ರೀಧರ ಗೌಡರ ಅವರ ಲೇಖನಗಳ ಸಂಗ್ರಹ ಕೃತಿ. ಲೋಕಾನುಭವದೊಂದಿಗೆ ಲಿಂಗಾನುಭವಿಯಾಗಿ ವಚನ ರಚಿಸಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಬಸವಣ್ಣನ ಸಮಕಾಲಿನ 19 ಶರಣರು, ಬಸವತತ್ವಕ್ಕೆ ಜೀವನ ಮುಡುಪಾಗಿಟ್ಟ ಮೂವರ ಶರಣರ ಆದರ್ಶ ತತ್ವ, ಮೌಲ್ಯಗಳು ಹಾಗೂ ವೈಚಾರಿಕ ವಿಚಾರಗಳತ್ತ ಬೆಳಕು ಚೆಲ್ಲುವ ಕೃತಿ ಇದು. ಈ ಕೃತಿಯಲ್ಲಿ ಪ್ರಚಾರಕ್ಕೆ ಬಾರದ ಶರಣರ ಬದುಕಿನ ಚಿತ್ರಣವೂ ಇದೆ.
ಲೇಖಕ ಶ್ರೀಧರ ಗೌಡರ ಅವರು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ದವರು. 1982 ಜುಲೈ 5 ರಂದು ಜನಿಸಿದರು. ಕೂಡಲಸಂಗಮ, ಚಿಮ್ಮಲಗಿ, ಇಲಕಲ್ಲ, ರಾಯಚೂರಗಳಲ್ಲಿ ವಿದ್ಯಾಬ್ಯಾಸ ಮಾಡಿದ್ದು, ಇತಿಹಾಸ, ಕನ್ನಡ, ರಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತರ ಪದವಿ, ಬಿಇಡಿ ಪದವಿ ಪಡೆದಿದ್ದಾರೆ. 2013 ಜುಲೈ 12 ರಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಓತಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ತೋಟದಾರ್ಯ ಮಠದ ಸಮಾಜ ಮುಖಿ ಚಳುವಳಿಗಳು : ವಿಶ್ಲೇಷಣಾತ್ಮಕ ...
READ MORE