ಲೇಖಕ ರವೀಂದ್ರ ಭಟ್ ಅವರ ಲೇಖನಗಳ ಸಂಕಲನ ‘ಬದುಕು ಮರದ ಮೇಲೆ’. ಈ ಸಂಕಲನದಲ್ಲಿರುವ ಎಲ್ಲ ಲೇಖನಗಳೂ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಪತ್ರಿಕೆಗಾಗಿಯೇ ಬರೆದ ಕಾರಣದಿಮದ ಪತ್ರಿಖಾ ಭಾಷೆಯನ್ನೇ ಹೊಂದಿದೆ. ಕೃತಿಯ ಪರಿವಿಡಿಯಲ್ಲಿ ಹಾಡಿಗಳಲ್ಲಿ ಅರಿವಿನ ಹಣತೆ, ಕರೆದರೆ ಬಂದಾನೆಯೇ ಭಗೀರಥ?, ಕಾಲು ಮುರಿದುಕೊಂಡು ಬಿದ್ದ ನ್ಯಾಯ!, ಇದುವರೆಗೂ ಮತ ಚಲಾಯಿಸದವರು!, ಮಾದರಿಯಾದ ಮೊಸರಹಳ್ಳ(ಪರಿಸರ ಸ್ನೇಹಿ ಶೌಚಾಲಯ), ಹೆಡ್ಡನಾದ ಹೆಗ್ಗಡಾಪುರದ ಹುಡುಗ!, ಇಲ್ಲಿ ಕೃಷಿ ಸಾಲವೆಂಬುದು ಗಗನ ಕುಸುಮ!, ಸಾಲಕ್ಕೆ ಪರದಾಡುತ್ತಿರುವ ಈ ನಾಲ್ಕು ಗ್ರಾಮಗಳು.., ಇಲ್ಲಿ ಈಗಲೂ ಕತ್ತೆ ಸಾರಿಗೆ ವ್ಯವಸ್ಥೆ!, ಇಲ್ಲಿ ಕಲ್ಲರಳಿ ಹೂವಾಗದು!, ಶೌಚವೆಂಬ ನಾಕ ನರಕ, ಮೇಲುಕೋಟೆ ನೀರುಕೋಟೆ!, ತ್ರಿಶಂಕು ಶಿವಪುರ, ನೆಲ ಬಿಟ್ಟ ರೈತ, ಬದುಕು, ಚಾಮಲಾಪುರದಲ್ಲಿ ಭಸ್ಮಾಪುರ, ದಡಸೇರದ ದಡದಕಲ್ಲಹಳ್ಳಿ ದಲಿತರು ಸೇರಿದಂತೆ 46 ಶೀರ್ಷಿಕೆಗಳ ಲೇಖನಗಳು ಈ ಸಂಕಲನದಲ್ಲಿದೆ.
ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...
READ MORE