ಗಣಿತ: ಮಕ್ಕಳಿಗಾಗಿ, ಪದ್ಯ, ಪ್ರಬಂಧ, ಪರಿಕಲ್ಪನೆ

Author : ವಿ.ಎಸ್.ಎಸ್. ಶಾಸ್ತ್ರಿ

Pages 80

₹ 40.00




Year of Publication: 2011
Published by: ಡಿ.ವಿ.ಜಿ ಪ್ರಹ್ಲಾದರಾವ್
Address: ಡಿವಿಜಿ ಪ್ರತಿಷ್ಠಾನ, ಕೋಲಾರ

Synopsys

‘ಗಣಿತ: ಮಕ್ಕಳಿಗಾಗಿ, ಪದ್ಯ, ಪ್ರಬಂಧ, ಪರಿಕಲ್ಪನೆ’ ಕೃತಿಯು ವಿ.ಎಸ್.ಎಸ್. ಶಾಸ್ತ್ರೀ ಅವರ ಲೇಖನ ಸಂಕಲನವಾಗಿದೆ. ಮಕ್ಕಳು ತಾವು ಕಲಿತದ್ದನ್ನು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುವಂತಾಗಬೇಕು. ಪ್ರಾಯೋಗಿಕವಾಗಿ ಅನುಭವವಂತಾಗಬೇಕು. ಕಲಿಕೆ ಉಲ್ಲಾಸದಾಯಕವಾಗಿದ್ದರೆ, ಆಟದಿಂದ ಪಾಠ ಎಂಬಂತಿದ್ದರೆ ಕಲಿಕೆ ಸದಾ ನೆನಪಲ್ಲಿ ಉಳಿಯುತ್ತದೆ. ಇಂತಹ ಉದ್ದೇಶಗಳನ್ನು ಇಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಇದೊಂದು ಪ್ರಯೋಗಶೀಲ ಕೃತಿ, ಗಣಿತದ ಆಸಕ್ತರಿಗೆ ಸಾಹಿತ್ಯ ಮೂಲಕ ಕಲಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಕಠಿಣ ವಿಷಯವೆಂದು ಭಾವಿಸಿರು ಗಣಿತ ವಿಷಯವನ್ನು ಆಟದ ಮೂಲಕ ಕಲಿಯುವ ಕಲಿತದ್ದನ್ನು ತಮ್ಮ ಮನೆ ಹಾಗ ಸುತ್ತಲಿನ ಪರಿಸರದಲ್ಲಿ ಪ್ರಯೋಗ ನಡೆಸಿ ಇನ್ನಷ್ಟು ಪರಿಣಾಮಕಾರಿಯಾ ಕೊಳ್ಳುವುದು ಹೇಗೆ೦ಬುದಕ್ಕೆ ಈ ಕೃತಿ ಕೈಗನ್ನಡಿಯಾಗಿದೆ.

About the Author

ವಿ.ಎಸ್.ಎಸ್. ಶಾಸ್ತ್ರಿ

ಒರಿಗಾಮಿ ಗಣಿತದ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಕೆಲವರಲ್ಲಿ ವಿ.ಎಸ್.ಎಸ್. ಶಾಸ್ತ್ರಿ ಒಬ್ಬರು. ನವಕರ್ನಾಟಕದ ಗಣಿತ ಸಂವತ್ಸರ ಮಾಲೆಯ ಸಂಪಾದಕರ ಪೈಕಿ ಇವರೂ ಒಬ್ಬರು.  ಗಣಿತ ಮತ್ತು ವಿಜ್ಞಾನ ಕುರಿತು ಹಲವು ಕೃತಿಗಳನ್ನು ರಚಿಸಿದ್ದಾರೆ. ಅರವಿಂದ ಗುಪ್ತ ಅವರ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಗಣಿತ ಚಟುವಟಿಕೆಗಳು, ಆಹಾ ಎಷ್ಟೊಂದು ಚಟುವಟಿಕೆಗಳು, ಸೌರಶಕ್ತಿಯ ಕತೆ, ತ್ಯಾಜ್ಯವಸ್ತುಗಳಿಂದ ವಿಜ್ಞಾನ-ಆಟಿಕೆಗಳು ಮುಂತಾದವು ಪ್ರಮುಖ ಕೃತಿಗಳು. ಇವರಿಗೆ ವಿಜ್ಞಾನ ಸಂವಹನಕಾರ ಪ್ರಶಸ್ತಿಯು ಲಭಿಸಿದೆ.  ...

READ MORE

Reviews

(ಹೊಸತು, ಅಕ್ಟೋಬರ್ 2012, ಪುಸ್ತಕದ ಪರಿಚಯ)

ಕಲಿಕೆಯೆನ್ನುವುದು ಯಾ೦ತ್ರಿಕವಾಗುತ್ತಾ ತ್ರಾಸದಾಯಕವಾಗಿ ಪರಿಣಮಿಸಿರುವ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಸಂತೋಷದ ಕಲಿಕೆಗಿಂತ ಒತ್ತಾಯಪೂರ್ವಕವಾಗಿ ಕಲಿಯುವ ಸ್ಥಿತಿ ಬಂದೊದಗಿರುವುದು ದುರಂತವೇ ಸರಿ, ಇದು ಮಕ್ಕಳ ಕಲಿಕೆ ಮತ್ತು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ ಅವರು ಮನೋವಿಕಲರಾಗ ಕಾರಣವಾಗುತ್ತಿದೆ. ಅದರಲ್ಲೂ ಗಣಿತ ವಿಷಯ ಕಬ್ಬಿಣದ ಕಡಲೆಯಂತಾಗಿ ಪರಿ ದೃಷ್ಟಿಯ ಓದು ಮಾತ್ರವಾಗಿ ಉಳಿಯುವಂತಾಗಿದೆ. ಮಕ್ಕಳು ತಾವು ಕಲಿತದ್ದನ್ನು ತ ಸುತ್ತಮುತ್ತಲಿನ ಪರಿಸರದಲ್ಲಿ ಕಾಣುವಂತಾಗಬೇಕು. ಪ್ರಾಯೋಗಿಕವಾಗಿ ಅನುಭವ ವಂತಾಗಬೇಕು. ಕಲಿಕೆ ಉಲ್ಲಾಸದಾಯಕವಾಗಿದ್ದರೆ, ಆಟದಿಂದ ಪಾಠ ಎಂಬಂತಿದ್ದರೆ ಕಲಿಕೆ ಸದಾ ನೆನಪಲ್ಲಿ ಉಳಿಯುತ್ತದೆ. ಇಂತಹ ಉದ್ದೇಶಗಳನ್ನು ಇಟ್ಟುಕೊಂಡು ಈ ರಚಿಸಲಾಗಿದೆ. ಇದೊಂದು ಪ್ರಯೋಗಶೀಲ ಕೃತಿ, ಗಣಿತದ ಆಸಕ್ತರಿಗೆ ಸಾಹಿತ್ಯ ಮೂಲಕ ಕಲಿಸುವ ಪ್ರಯತ್ನ ಈ ಕೃತಿಯಲ್ಲಿದೆ. ಕಠಿಣ ವಿಷಯವೆಂದು ಭಾವಿಸಿರು ಗಣಿತ ವಿಷಯವನ್ನು ಆಟದ ಮೂಲಕ ಕಲಿಯುವ ಕಲಿತದ್ದನ್ನು ತಮ್ಮ ಮನೆ ಹಾಗ ಸುತ್ತಲಿನ ಪರಿಸರದಲ್ಲಿ ಪ್ರಯೋಗ ನಡೆಸಿ ಇನ್ನಷ್ಟು ಪರಿಣಾಮಕಾರಿಯಾ ಕೊಳ್ಳುವುದು ಹೇಗೆ೦ಬುದಕ್ಕೆ ಈ ಕೃತಿ ಕೈಗನ್ನಡಿಯಾಗಿದೆ. ಪದ್ಯ, ಪ್ರಬಂಧ, ಮುಂತಾದ ಪ್ರಕಾರಗಳ ಮೂಲಕ ಅಂಕಿಗಳ ಜ್ಞಾನವನ್ನು ಇಲ್ಲಿ ನೀಡಲಾಗಿದೆ. ಕೂಡು ಕಳೆಯುವ, ಭಾಗಿಸುವ ಹಾಗೂ ಬೆಸ ಸಂಖ್ಯೆ, ಸಮ ಸಂಖ್ಯೆಗಳ ಜ್ಞಾನವನ್ನು ಆ ಆಡುತ್ತಲೇ ಕಲಿಯುವ ವಿಧಾನಗಳನ್ನು ಈ ಪುಸ್ತಕ ತಿಳಿಸುತ್ತದೆ. ಇದು ಮಕ್ಕಳಷ್ಟೇ ಅಲ್ಲ ಶಿಕ್ಷಕರು, ಪೋಷಕರೂ ಸಹ ಓದಲೇಬೇಕಾದ ಅಮೂಲ್ಯ ಪುಸಕ.

 

Related Books