ಅನ್ವಯ- ಖ್ಯಾತ ಸಾಹಿತಿ, ಲೇಖಕ ಅರವಿಂದ ಚೊಕ್ಕಾಡಿಯವರ ವೈಚಾರಿಕ ಲೇಖನಗಳ ಸಂಕಲನ. ಪ್ರತೀ ತಿರುವಿನಲ್ಲೂ ಹೊಸತನ್ನು ನೀಡುತ್ತಾ ಸಾಗುವ ಈ ಲೇಖನಗಳಲ್ಲಿ ಅರವಿಂದರು ಪ್ರಮುಖ ಚಿಂತಕರ ಚಿಂತನೆಗಳನ್ನು ಒರಗೆ ಹಚ್ಚಿ ಈಗಿನ ಸಮಸ್ಯೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.
ಬೇರನ್ನು ಆಳಕ್ಕಿಳಿಸಿ ಸಾರ ಹೀರಿ ಹಲವು ಕವಲುಗಳಿಂದ ವಾದವನ್ನು ಹೆಮ್ಮರವಾಗಿಸಿದ್ದಾರೆ. ಹಾಳೆಯ ಚೌಕಟ್ಟನ್ನು ಮೀರಿ ಆಚರಣೆಗೆ ಹತ್ತಿರವಾಗಿಸಿದ್ದಾರೆ. ಈ ಲೇಖನಗಳು ಬುದ್ಧಿಗೆ ಜಡಿದ ಬೀಗ ತೆಗೆಯುವ ಕೀಲಿಕೈಯಂತೆ ಮೂಡಿ ಬಂದಿವೆ. ಮಧ್ಯಮ ಪಥದ ಮೂಲಕ ನವ ಪಥದ ಶೋಧನೆಯಲ್ಲಿ ತೊಡಗಿದ ಅರವಿಂದ ಚೊಕ್ಕಾಡಿಯವರು ಅನ್ವಯದಲ್ಲಿ ತಮ್ಮ ಅನಿಸಿಕೆಗಳನ್ನು ನಾನಾ ಸಮಸ್ಯೆಗಳೊಂದಿಗೆ ಅನ್ಯಯಗೊಳಿಸಿದ್ದಾರೆ. ಚಿಕಿತ್ಸಕ ಒಳನೋಟ, ಸೂಕ್ಷ್ಮ ಚಿಂತನೆ ಅನ್ವಯದ ಪ್ರಧಾನ ವಿಚಾರವಾಗಿದೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MORE