ಹಿಂದಣ ಹೆಜ್ಜೆ

Author : ಬಿ.ಎ. ವಿವೇಕ ರೈ

Pages 192

₹ 150.00




Year of Publication: 2009
Published by: ಮುದ್ದುಶ್ರೀ ಗ್ರಂಥಮಾಲೆ
Address: ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಮಠ, ನಂ-119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು- 560104

Synopsys

ವಿವೇಕ ರೈ ಅವರ ಲೇಖನ ಸಂಕಲನ 'ಹಿಂದಣ ಹೆಜ್ಜೆ' ಹಿಂದಣ ಹೆಜ್ಜೆಯ ಅರಿವು, ಮುಂದಣ ಹೆಜ್ಜೆಯ ಉಳಿವು 'ಹಿಂದಣ ಹೆಜ್ಜೆಯನು ಅಳಿದಲ್ಲದೆ ಮುಂದಣ ಹೆಜ್ಜೆಯನಿಡಲಾಗದು' ಎಂಬ ಅಲ್ಲಮನ ವಚನದಲ್ಲಿ 'ಅಳಿದಲ್ಲದೆ' ಎನ್ನುವುದಕ್ಕೆ 'ಅರಿದಲ್ಲದೆ' ಎನ್ನುವ ಪಾಠಭೇದ ದೊರೆಯುತ್ತದೆ. The best way of learning is unleaning' ಎನ್ನುವ ಮಾತೊಂದಿದೆ. 'ಅರಿವು ಸಾಮಾನ್ಯ ಅಲ್ಲ' ಎಂದು ಅಲ್ಲಮ ಹೇಳುತ್ತಾನೆ. ಅರಿವನ್ನು ಪಡೆಯುವ ಪ್ರಕ್ರಿಯೆಯೇ ಆಕಸ್ಮಿಕ.

ಅದು ಅವಕಾಶಗಳ ಅನಂತ ದಿಗಂತ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಎನ್ನುವ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಬದುಕನ್ನು ಕನ್ನಡವನ್ನು ಸಾಹಿತ್ಯವನ್ನು ಕಲಿಸಿದ್ದು ನನ್ನ ಅಪ್ಪ ಅಗ್ತಾಳ ಪುರಂದರ ರೈ. ಅವರು ಶಿವರಾಮ ಕಾರಂತರ ಶಿಷ್ಯ ಮತ್ತು ಪರಮ ಅಭಿಮಾನಿ. ಹೀಗೆ ಮಗುವಿನ ಹೆಜ್ಜೆಯಿಂದ ನನಗೆ ಕಾರಂತರ ಗೆಜ್ಜೆಯ ಹೆಜ್ಜೆಗಳು ಮಂಜಾಗಿ ಕಾಣುತ್ತ ಕಿವಿಯಲ್ಲಿ ಅನುರಣನಗೊಳ್ಳುತ ಬುದ್ದಿ ಬಂದ ಕಾಲಕ್ಕೆ ಅದು ಕನ್ನಡ ಎಂದು ಗೊತ್ತಾಗಿ, ಮುಂದೆ ಅದು ಮಾತನಾಡುವ ಭಾಷೆಯಾಗಿ, ಬಳಿಕ ಓದುವ ಸಂಗತಿಯಾಗಿ, ಕೊನೆಗೆ ಬರೆಯುವ ಸಾಹಸವಾಗಿ, ದಾರಿಸಾಗುತ್ತಾ ಬಂತು. ಹೀಗೆ ಮಗುವಿನ ಮುಗ್ಧತೆಯಿಂದ ತೊಡಗಿ ದೇವರ ಇರವನ್ನು ನಿರಾಕರಿಸುವ ಮನಸ್ಸಿನ ಗಟ್ಟಿತನದವರೆಗೆ ಶಿವರಾಮ ಕಾರಂತರು ತಮ್ಮ ಬದುಕು ಬರಹಗಳಿಂದ ನನ್ನ ಹೆಸರು ಕಸುವುಗಳನ್ನು ರೂಪಿಸಿದ್ದಾರೆ. ಆಕಸ್ಮಿಕವಾಗಿ ವಿಜ್ಞಾನದಿಂದ ಕನ್ನಡ ಸಾಹಿತ್ಯದ ಹೊಲಕ್ಕೆ ಪ್ರವೇಶಿಸಿದ ನನಗೆ ಕಂಡ ಸಮೃದ್ಧಿಯ ಹೊಲದ ಬೆಳೆಯೆಂದರೆ ಕುವೆಂಪು ಅವರ ಸಾಹಿತ್ಯ, 'ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ' ಎಂದು ತರುಣರಿಗೆ ಕರೆಕೊಟ್ಟ ಕುವೆಂಪು, ಗ್ರಾಮೀಣ ಬದುಕಿನ ತುಂಬ ಸಾಂದ್ರವಾದ ಬಹುರೂಪಿ ಸಂಸ್ಕೃತಿಯನ್ನು ಗಟ್ಟಿಯಾಗಿ ಹಿಡಿದುಕೊಂಡೇ ಮನಸ್ಸಿನ ವಿಕಾಸದ ಆತ್ಮಶಕ್ತಿಯ ಪರಿಕಲ್ಪನೆಯಲ್ಲಿ 'ಶ್ರೀ ರಾಮಾಯಣದರ್ಶನಂ' ಮಹಾಕಾವ್ಯವನ್ನು ರಚಿಸಿದರು.

ಜನಸಾಮಾನ್ಯರ ಬದುಕಿನ ಗಾಢ ಅನುಭವದಿಂದ ಸಾಹಿತ್ಯ ರಚನೆ ಮಾಡಿದ ಕಾರಂತ ಮತ್ತು ಕುವೆಂಪು ಮತಮೌಡ್ಯಗಳ ವಿರುದ್ಧ ತಮ್ಮ ಸಾಹಿತ್ಯ ಕೃತಿಗಳ ಮೂಲಕ ಸಮರ ಸಾರಿದರು. ಈ ಇಬ್ಬರು ಮೇರು ಸಾಹಿತಿಗಳ ಪ್ರೇರಣೆ ನನಗೆ ನನ್ನ ಬದುಕನ್ನು ರೂಪಿಸಲು, ಮತ್ತೆ ಮತ್ತೆ ತಿದ್ದಿಕೊಳ್ಳಲು ಮತ್ತು ಅದರ ಬಲದಿಂದ ಸ್ವಲ್ಪ ಮಟ್ಟಿಗೆ ಕನ್ನಡದಲ್ಲಿ ಬರೆಯಲು ಶಕ್ತಿಯನ್ನು ಕೊಟ್ಟಿದೆ. ಈ ತಳಪಾಯದ ಮೇಲೆ, ನಾನು ಗೌರವಿಸುವ ಪ್ರೀತಿಸುವ ಅನೇಕರನ್ನು ಅವರ ಸಾಹಿತ್ಯವನ್ನು ಕುರಿತು ಬರೆದ ಲೇಖನಗಳು ಇಲ್ಲಿ ಒಟ್ಟು ಸೇರಿವೆ.

About the Author

ಬಿ.ಎ. ವಿವೇಕ ರೈ
(08 December 1946)

ಡಾ. ಬಿ.ಎ.ವಿವೇಕ ರೈ ಸಂಸ್ಕೃತಿ ಚಿಂತಕರು. ಕನ್ನಡ-ತುಳು ಭಾಷೆಯ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. ಅವರ ಹುಟ್ಟೂರು ಪುತ್ತೂರು ತಾಲೂಕಿನ 'ಪುಣಚಾ'. (ಜನನ: 1946ರ ಡಿಸೆಂಬರ್ 8ರಂದು), ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ, ಮತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರಕೇಂದ್ರ ದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾ.ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ.  ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು-ಪಾಂಡಿತ್ಯ ಉಳ್ಳವರು. ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸಿದ ವಿದ್ವಾಂಸರು. ಸಂಶೋಧನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ...

READ MORE

Related Books