ಗೌಡಗೆರೆ ಮಾಯುಶ್ರೀ ಅವರ ಚಿಂತನೆ ಬರಹಗಳ ಸಂಕಲನ ‘ಮೊಳಕೆ ಕಾಳು’. ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯ ಪಡೆದ ಕೃತಿ ಇದು. ಜಾಣಗೆರೆ ವೆಂಕಟರಾಮಯ್ಯ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ‘ಮೊಳಕೆ ಕಾಳು' ಮಾಯುಶ್ರೀ ಅವರ ಚೊಚ್ಚಲ ಕೃತಿ. ಇಲ್ಲಿ 43 ಲೇಖನಗಳು ಅಡಕವಾಗಿವೆ. ಒಂದು ರೀತಿಯಲ್ಲಿ ಎರಡು ದಶಕಗಳ ಕಾಲಮಾನದಲ್ಲಿ ಆಯಾಯ ಸಂದರ್ಭಕ್ಕೆ, ಘಟನೆಗಳಿಗೆ ಪ್ರತಿಕ್ರಿಯೆಯಾಗಿ, ವಿಶ್ಲೇಷಣೆ ರೂಪದಲ್ಲಿ ರಚನೆಗೊಂಡ ಲೇಖನಗಳು ಇವುಗಳಾಗಿವೆ. ಕೆಲವು ಮುಟ್ಟ ಬರಹಗಳಾಗಿದ್ದರೆ, ಇನ್ನು ಹಲವು ಪತ್ರಿಕೆಗಳಿಗೆ ಬೇಕಾದ ಇತಿಮಿತಿಯಲ್ಲಿ ರಚನೆಗೊಂಡಿವೆ. 3-4 ಬರಹಗಳಂತೂ ದೀರ್ಘವಾಗಿಯೂ, ಗಂಭೀರ ಚಿಂತನೆಗೆ ಹಚ್ಚುವ ಮಾದರಿಯಲ್ಲಿರುವುದು ಕೃತಿಗೆ ಮಹತ್ವವನ್ನು ತಂದು ಕೊಡುತ್ತವೆ. 'ಮೊಳಕೆ ಕಾಳು' ಲೇಖಕರ ಮೊದಲ ಬರಹಗಳ ಸಂಕಲನವಾದರೂ, ಅದರಲ್ಲಿ ಕೆಲವಾರು ಗಂಭೀರ ಚಿ೦ತನ ಬರಹಗಳು ಅಡಕವಾಗಿರುವುದರಿಂದ ಕೃತಿಗೆ ಮೌಲ್ಯ ಬಂದಿದೆ. ಮಾಯುಶ್ರೀ ಅವರ ಬರವಣಿಗೆ ಸರಳ ಹಾಗೂ ಲವಲವಿಕೆಯಿಂದ ಕೂಡಿದೆ. ಓದುಗರನ್ನು ತಣಿಸುವ ಈ ಗದ್ಯ ಬರಹಗಳಲ್ಲಿ ಪ್ರಾಮಾಣಕ ಕಾಳಜಿ ತುಂಬಿರುವುದನ್ನು ಮೆಚ್ಚಬೇಕು. ಈ ಗೆಳೆಯ ಇನ್ನೂ ಹೆಚ್ಚು ಹೆಚ್ಚಾಗಿ ಬರೆಯಬೇಕಾಗಿದೆ. ಮಾಯುಶ್ರೀ ತಮ್ಮನ್ನು ಹೆಚ್ಚಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬಲ್ಲರು. ಸರಳ ಮತ್ತು ಆಕರ್ಷಕ ಗದ್ಯ ಬರವಣಿಗೆಯಲ್ಲಿ ಪಳಗಿರುವ ಮಾಯು ಕತೆ-ಕಾದಂಬರಿ ಬರವಣಿಗೆಯತ್ತಲೂ ಗಮನ ಹರಿಸಲೆಂದು ಆಶಿಸುತ್ತಾ. ಕನ್ನಡ ಸಾರಸ್ವತ ಲೋಕಕ್ಕೆ ಚೊಚ್ಚಲ ಕೃತಿ ನೀಡಿದ್ದಕ್ಕಾಗಿ ಮನಸಾರ ಅಭಿನಂದಿಸುತ್ತೇನೆ ಎಂದಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಖಾಸಗಿ ಶಾಲೆಗಳೇ, ಬಡವರನ್ನು ಸುಲಿಯಬೇಡಿ, ಯಾವ ಕೇಡುಗಾಲಕ್ಕೆ ಈ ಕೋಮು ಗಲಭೇಯ ಹುಚ್ಚಾಟ?, ಕನ್ನಡಕ್ಕೀಗ ಶಾಸ್ತ್ರೀಯ ಭಾಷೆಯ ಹೊನ್ನ ಕಿರೀಟ, ಕೋಮವಾದದ ಕಿಡಿ ನೆಮ್ಮದಿ ಬದುಕನ್ನು ಸುಡದಿರಲಿ, ಹೊಗೇನಕಲ್ ವಿವಾದ: ಭುಗಿಲೆದ್ದ ಆಕ್ರೋಶ, ಅಧಿಖಾರಶಾಹಿ ಜನಸಾಮಾನ್ಯರ ಮಿತ್ರನಾಗುವುದೇ? ಸೇರಿದಂತೆ 43 ಶೀರ್ಷಿಕೆಗಳ ಬರಹಗಳು ಈ ಕೃತಿಯಲ್ಲಿದೆ.
ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಗೌಡಗೆರೆ ಮಾಯುಶ್ರೀ, ನಂತರ ಕನ್ನಡಕಟ್ಟಾಳು ವೈಶ್ರೀನಿವಾಸರ ನೇತೃತ್ವದ ವೀರಸೇನಾನಿ ಮ॥ ರಾಮಮೂರ್ತಿ ಕನ್ನಡ ಬಳಗದ ಗೌರವ ಕಾರ್ಯದರ್ಶಿಯಾಗಿ ಅನೇಕ ಕನ್ನಡ ಪರ ಹೋರಾಟ ಮತ್ತು ನಾಡು ನುಡಿ ನೆಲ ಜಲ ಪರವಾದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯನಾಗಿ, ಗಾಂಧಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಮೂರು ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ.. ಇವರು ಬರೆದ ಬಿಡಿ ಬಿಡಿ ಕವನಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಕರ್ಮವೀರ, ರಾಗಸಂಗಮ ಪ್ರಿಯಾಂಕ, ಮಾರ್ದನಿ, ಚಾಣಗೆರೆ ಪತ್ರಿಕೆ, ಬಹುಜನ ಕನ್ನಡಿಗರು, ಈ ಭಾನುವಾರ, ...
READ MORE