ಆರ್.ಜೆ. ಹಳ್ಳಿ ನಾಗರಾಜ ಅವರ 'ಹೆದ್ದಾರಿ ಕವಲು ' ಬರಹಗಳ ಸಂಕಲನ. ನಿಚ್ಚಳ ಮನಸ್ಸು ಮಾತ್ರ ತಾರತಮ್ಯವಿಲ್ಲದ, ಜಾತಿಯ ವಾಸನೆ ಹೊಡೆಯದ, ಪ್ರಾಮಾಣಿಕವಾಗಿ ಸಾಂಸ್ಕೃತಿಕ ವಿಸ್ಕೃತಿಗೆ, ಅನಾದರಕ್ಕೆ ಕನಲುತ್ತಾ ಪ್ರತಿಕ್ರಿಯಿಸಬಲ್ಲುದು. ಈ ಬರಹಗಳು ಇದನ್ನು ರುಜುವಾತುಪಡಿಸುವಂತಿವೆ. ಒಳ್ಳೆಯದನ್ನು ಕಂಡಾಗ ಕೊಂಡಾಡುವ, ಅನ್ಯಾಯವನ್ನು ಕಂಡಾಗ ಕೋಪಗೊಳ್ಳುವ; ಮರೆತದ್ದನ್ನು ನೆನಪಿಸುವ, ಶೋಷಣೆಯ ವಿರುದ್ಧ ದನಿ ಎತ್ತುವ, ಭವಿಷ್ಯಕಾರನಂತೆ ಭಯೋತ್ಪಾದನೆಯನ್ನು ಮುನ್ನೋಟದಿಂದ ಊಹಿಸುವ (ಐಎಸ್ ಉಗ್ರ), ಕಲೆಯ ಶ್ರೀಮಂತಿಕೆಯನ್ನು ಕಂಡು ಸಂತೋಷ ಪಡುವ, ನಾಡಿನ ಸಾಂಸ್ಕೃತಿಕ ಹಿರಿಯರನ್ನು ಜನತೆಗೆ ತಿಳಿಸಿಕೊಡುವ, ಹೆಚ್ಚೂ ಕಡಿಮೆ ಸಮಾಜದ ವಿವಿಧ ಬಗೆಯ ವಿಷಯಗಳ ಕುರಿತು ಚರ್ಚಿಸಿದ್ದಾರೆ.
ಸಾಹಿತಿ ಆರ್.ಜಿ. ಹಳ್ಳಿ ನಾಗರಾಜ ಅವರು ಹುಟ್ಟಿದ್ದು ದಾವಣಗೆರೆ ಜಿಲ್ಲೆಯ ರಾಮಗೊಂಡನಹಳ್ಳಿಯ ರೈತ ಕುಟುಂಬದಲ್ಲಿ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದ ಎಂಬತ್ತರ ದಶಕ ಬಂಡಾಯದ ಕಾಲಘಟ್ಟದ್ದು, ಹೊಸ ಚಿಂತನೆಯ ಬೆಳೆಗೆ, ಸಾಮಾಜಿಕ ಬದಲಾವಣೆಗೆ ನೆಲವೂ ಹದವಾಗಿತ್ತು, ಆರ್ ಜಿ ಹಳ್ಳಿ ನಾಗರಾಜ ಇದರಲ್ಲಿ ಪ್ರಮುಖರಲ್ಲದಿದ್ದರೂ ಬೆಳೆಯುತ್ತಿದ್ದ ಸಸಿ. ವಿದ್ಯಾರ್ಥಿ ದೆಸೆಯ ಆ ದಿನಗಳಲ್ಲಿ ಪ್ರಗತಿಪರ ವಿಚಾರಗಳಿಗೆ ತೆರೆದುಕೊಂಡು ಭಾಷಾ ಚಳವಳಿ, ರೈತಚಳವಳಿಯಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ವಚನ ಸಾಹಿತ್ಯ, ಸಮಾಜವಾದಿ ಚಿಂತನೆ, ಪೆರಿಯಾರ್, ಕುವೆಂಪು, ಎಚೈನ್ ವೈಚಾರಿಕತೆಯಲ್ಲಿನ ಬೆಳೆಕೊಯ್ಲಿನಲ್ಲಿ ಪ್ರಶ್ನಿಸುವ ಮೂಲಕ ಕಂಡುಕೊಂಡದ್ದು ಸ್ವತಂತ್ರ ದಾರಿ, ಕಾನೂನು, ಪತ್ರಿಕೋದ್ಯಮ ...
READ MORE