"ಅನುಗಾಲದ ಅನುಭಾವ" ಕಿಶನ್ ರಾವ್ ಕುಲಕರ್ಣಿ ಅವರ ನಾಡಿನ ಸಾಧನೆಯ ಸಾಧಕರ ಪರಿಚಯ ಕುರಿತ ಲೇಖನ ಸಂಕಲನವಾಗಿದೆ. ಉತ್ತರ ಕರ್ನಾಟಕದ ಜನರ ಜೀವನ ಶೈಲಿಯನ್ನು ಹಾಗೂ ಜೀವನ್ಮುಖೀ ಆಚರಣೆಗಳನ್ನು ಗ್ರಾಮ್ಯ ಸೊಗಡಿನ ಚುಟುವಟಿಕೆಗಳ ವೈವಿಧ್ಯಗಳನ್ನು ಈ ಕೃತಿಯು ದಾಖಲಿಸುತ್ತದೆ. ಅಲ್ಲಿಯ ನೆಲದ ಜೀವನ ಸೊಗಸಿನ ಮುದ ನೀಡುವ ಚಟುವಟಿಕೆಗಳ ಬಗೆಬಗೆಯ ಲೇಖನಗಳಲ್ಲಿ ಒಳನೋಟಗಳು, ತುಡಿತ-ಮಿಡಿತಗಳು, ಕಾಳಜಿ- ಚಿಂತನೆಗಳು ಯಾತಾರ್ಥವಾಗಿ ಅಭಿವ್ಯಕ್ತಗೊಂಡಿವೆ. ಪತ್ರಿಕೆಗಳಲ್ಲಿ ಈಗಾಗಲೇ ಬೆಳಕು ಕಂಡಿರುವ ಈ ಕೃತಿಯ ಲೇಖನಗಳಲ್ಲಿ ವಿಷಯದ ಆಯ್ಕೆಯೊಂದಿಗೆ ಅದೆ ವೈಶಿಷ್ಟ್ಯಗಳನ್ನು ಓದುಗರಿಗೆ ತಲುಪಿಸುವ ಲೇಖಕರ ಪ್ರಾಮಾಣಿಕ ಕಳಕಳಿಯಿಂದಾಗಿ ಲೇಖನಗಳು ಆಪ್ತವೆನ್ನಿಸುತ್ತವೆ. ಇಂದಿನ ಧಾವಂತ ಬದುಕಿನಲ್ಲಿ ಪತ್ರಿಕಾ ಲೇಖನಗಳು ವಿಷಯದ ಅನ್ವೇಷಣೆಗಿಳಿಯುವುದಿಲ್ಲವೆಂಬ ಅಪವಾದಕ್ಕೆ ಈ ಕೃತಿ ಹೊರತಾಗಿದೆ. ಲೇಖಕರ ಉತ್ಸಾಹ, ಆಸಕ್ತಿ ಮತ್ತು ಆವೆಲ್ಲವನ್ನೂ ಮೀರಿದ ಕುತೂಹಲದಿಂದ ಹೂರಣಕ್ಕೆ ಬೇಕಾದ ಮಾಹಿತಿ ಕಲೆ ಹಾಕುವ ಅವರ ಸೂಕ್ಷ್ಮ ಕೌಶಲದಿಂದಾಗಿ ಲೇಖನಗಳು ಮಾಹಿತಿ ಕಣಜಗಳಾಗಿ ಸಂಗ್ರಾಹ್ಯವೆನಿಸುತ್ತದೆ.
ಪರಿಸರ ಸಂರಕ್ಷಣೆ