ಸಂಗೀತ, ಸ್ವರ, ನಾದಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಲೇಖಕ ಸಚ್ಛಿದಾನಂದ ಹೆಗಡೆ ಎತ್ತಿದ್ದಾರೆ. ಕತೆ, ಕಾದಂಬರಿ, ಕವನಗಳು ಇತ್ಯಾದಿ ಪ್ರಕಾರಗಳು ಮಾತ್ರ ಸಾಹಿತ್ಯ ಲೋಕದಲ್ಲಿ ಸಲ್ಲುತ್ತವೆ ಎಂಬ ಧೋರಣೆ ಇದೆ. ಸಂಗೀತ ಲೇಖನಗಳು ಸಹ ಸಲ್ಲುವ ಸಾಹಿತ್ಯ ಲೋಕವಿದೆ ಎಂಬುದನ್ನು ಈ ಕೃತಿ ಸಾಬೀತು ಪಡಿಸುತ್ತದೆ. ಲೇಖಕರ ಅಧ್ಯಯನಶೀಲತೆ, ಸೂಕ್ಷ್ಮದೃಷ್ಟಿ, ಕಲೆಯ ಆರಾಧನೆ ಓದುಗರನ್ನು ಸಮ್ಮೋಹನಗೊಳಿಸುತ್ತದೆ. ಈ ಕೃತಿಯು ಲೇಖಕರ ಒಂದು ವಿನೂತನ ಪ್ರಯತ್ನ.
ಸಚ್ಚಿದಾನಂದ ಹೆಗಡೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯಲ್ಲಿ, ಭಾರತ ಮತ್ತು ಯುರೋಪ್‌ಗಳಲ್ಲಿ ಅವರ ಉನ್ನತ ಶಿಕ್ಷಣ. ಅಮೆರಿಕ, ಯುರೋಪ್ ಮತ್ತು ಭಾರತದಲ್ಲಿ ತಮ್ಮ ವೃತ್ತಿ ಮುಂದುವರಿಸಿ ಈಗ ಚೀನಾ ದೇಶದ ಕಾರ್ ಡಿಸೈನ್ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಲ್ಲೇ ವಾಸವಾಗಿದ್ದಾರೆ. 'ಕಾರಂತಜ್ಜನಿಗೊಂದು ಪತ್ರ' ಅವರ ಮೊದಲ ಕಥಾ ಸಂಕಲನ, ಯಕ್ಷಗಾನ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆ, 'ಮಹಾಬಲ'ದ ಸಹ ಲೇಖಕರು. ಅವರ ಮೊದಲ ಕಥಾ ಸಂಕಲನದ 'ಕಾರಂತಜ್ಜನಿಗೊಂದು ಪತ್ರ' ಕಥೆ ಚಲನಚಿತ್ರವಾಗಿದೆ. ಹಾಗೂ ಅದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 'ಅರಳು ಪ್ರಶಸ್ತಿ' ...
READ MORE