ಪ್ರೇಮ ಸಂಭ್ರಮ

Author : ನಾ. ಸೋಮೇಶ್ವರ



Published by: ವಸಂತ ಪ್ರಕಾಶನ
Address: ನಂ.360, ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು - 560011
Phone: 08022443996

Synopsys

ನಾ ಸೋಮೇಶ್ವರ ಅವರ ಕೃತಿ ಪ್ರೇಮ ಸಂಭ್ರಮ. ಈ ಕೃತಿಯ ಒಳಪುಟದಲ್ಲಿ ನಾಗೇಶ ಹೆಗಡೆ ಅವರ ಬರಹವಿದ್ದು, ‘ನಮ್ಮಲ್ಲಿ ಲೈಂಗಿಕ ಶಿಕ್ಷಣವನ್ನು ಯಾವ ಹಂತದಲ್ಲಿ ಮಕ್ಕಳಿಗೆ ಪರಿಚಯಿಸಬೇಕು, ಹೇಗೆ ಪರಿಚಯಿಸಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಲೇ ಇದೆ. ಇತ್ತ ನಮ್ಮ ಸಿನೆಮಾಗಳಲ್ಲಿ, ಮೋಸ್ಟರ್‌ಗಳಲ್ಲಿ, ಟಿವಿಗಳಲ್ಲಿ ಬರುವ ಸಿನೆಮಾ ಹಾಡುದೃಶ್ಯಗಳಲ್ಲಿ ಹಾಗೂ ಇಂಟರ್‌ನೆಟ್‌ನಲ್ಲಿ ಲಂಗುಲಗಾಮಿಲ್ಲದೆ ಕೀಳು ಅಭಿರುಚಿಯ ಅಶ್ಲೀಲ, ಕಾಮೋತ್ತೇಜಕ ದೃಶ್ಯಗಳು ಬಿಂಬಿತವಾಗುತ್ತಿರುತ್ತವೆ. ಈ ಸಂದರ್ಭದಲ್ಲಿ 'ಪ್ರೇಮಸಂಭ್ರಮ' ವೈಜಾನಿಕ ನೆಲೆಗಟ್ಟಿನ, ಸದಭಿರುಚಿಯ ಒಂದು ಹೊಸ ಹಾದಿಯನ್ನು ರೂಪಿಸಿದೆ. ಅಕ್ಷರ ಪ್ರೇಮಿಗಳೆಲ್ಲ ಸಂಭ್ರಮಿಸುವಂತೆ ಮಾಡಿದೆ’ ಎಂದಿದ್ದಾರೆ.

'ಪ್ರೀತಿ-ಪ್ರಕೃತಿ ಹೂಡಿರುವ ಸಂಚು'ವಿನಲ್ಲಿ ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಲೇಖವಿದ್ದು, ‘ಶೃಂಗಾರ ರಸಗಳಲ್ಲೇ ಅತ್ಯಂತ ಆಕರ್ಷಕ. ಆದರೆ ಅದನ್ನು ಹದಗೆಡದಂತೆ ನಿರ್ವಹಿಸುವುದು ಅತ್ಯಂತ ಕಷ್ಟ ಸ್ವಲ್ಪ ಹದ ತಪ್ಪಿದರೆ ಶೃಂಗಾರ ಅಶ್ಲೀಲವಾಗಿಬಿಡುತ್ತದೆ. ಹಾಗೆಂದು ಗಂಭೀರವಾದರೆ ನೀರಸವಾಗಿಬಿಡುತ್ತದೆ. ಒಂದು ಹದದಲ್ಲಿ ನಿರ್ವಹಿಸಿದಾಗ ಮಾತ್ರ ಅದು ಆಕರ್ಷಕ, ಸೋಮೇಶ್ವರ ಇಂಥ ವಸ್ತುವನ್ನು ಆರಿಸಿಕೊಂಡು ಒಂದು ಸೊಗಸಾದ ಆಕರ್ಷಕವಾದ ಕೃತಿ ರಚಿಸಿದ್ದಾರೆ, ಎಲ್ಲ ಸಹೃದಯ ರಸಿಕರ ಪರವಾಗಿ ಅವರಿಗೆ ಅಭಿನಂದನೆಗಳು…’ ಎಂದಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಪ್ರೇಮ ಒಂದು ಮಾಯೆ ಹಾಗೂ ಪ್ರೇಮ ..ಬತ್ತದ ಒಳಸೆಲೆ ಎಂಬ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಬದುಕಿನ ಸತ್ಯ-ಸಂತಾನ ವರ್ಧನೆ, ಲೈಂಗಿಕ ಸಂತಾನವರ್ಧನೆ,ಜೀವಜಗತ್ತಿನ ಅಲಿಖಿತ ನಿಯಮಗಳು, ಹೆತ್ತವರ ಹೂಡಿಕೆ ಮತ್ತು ಪಾಲಕತ್ವ, ಬೆಳೆದು ಬಂದ ಹಾದಿ-1, ಬೆಳೆದುಬಂದ ಹಾದಿ-2, ಮನುಷ್ಯನೆಂಬ ಮಹಾ ಬುದ್ಧವಂತ! ಶೀರ್ಷಿಕೆಗಳಿವೆ.

About the Author

ನಾ. ಸೋಮೇಶ್ವರ
(14 May 1955)

ನಾ. ಸೋಮೇಶ್ವರ  ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ  ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books