ಉಸಿರಾಟದ ಗುರುತು

Author : ಅರ್ಜುನಪುರಿ ಅಪ್ಪಾಜಿಗೌಡ

Pages 228

₹ 200.00




Year of Publication: 2004
Published by: ಶ್ರೀ ಸಿದ್ಧಾರೂಢ ಪ್ರಕಾಶನ
Address: ಮದ್ದೂರು

Synopsys

‘ಉಸಿರಾಟದ ಗುರುತು’ ಅರ್ಜುನಪುರಿ ಅಪ್ಪಾಜಿಗೌಡ ಅವರ ರಚನೆಯ ಪರಾಮರ್ಶನ ಲೇಖನಗಳಾಗಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಒಟ್ಟುಗೂಡಿಸುವು ಉಸಿರಾಟದ ಗುರುತು ಇದರಿಂದ ಬರಹಕ್ಕೆ ಏಕರೂಪತೆ ಇಲ್ಲ, ರಾವಂದೂರು ದೇವಪ್ಪ, ಕೆಂಪೇಗೌಡ, ಸೀತಾಸುತ ಮುಂತಾದ ಅಷ್ಟು ಪರಿಚಿತರಲ್ಲದ ಲೇಖಕರ ಬಗ್ಗೆ ಬರೆದಿರುವುದು ಗಮನಾರ್ಹ. ಕುವೆಂಪು, ಕಾರಂತ, ಪಾಟೀಲ ಪುಟ್ಟಪ್ಪ ಮುಂತಾದವರ ಬಗ್ಗೆ ಬರೆದ ಬರಹಗಳಲ್ಲಿ ವಿಮರ್ಶೆಗಿಂತ ಮುಗ್ಧವಾದ ಗೌರವ ಕಂಡುಬರುತ್ತದೆ. ನಂಜನಗೂಡು ತಿರುಮಲಾಂಬ ಬಗ್ಗೆ ಬರೆದ ಲೇಖನ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿದೆ; ಅದೇ ರೀತಿ ಜಾನಪದದ ಬಗ್ಗೆ ಬರೆದ ಬರಹಗಳು. 'ಮಂಡ್ಯ ಜಿಲ್ಲೆಯ ಆಧುನಿಕ ಸಾಹಿತಿಗಳು' ಎಂಬ ಲೇಖನ ಕೆಲವು ಪ್ರಾಥಮಿಕ ಸಂಗತಿಗಳನ್ನು ತಿಳಿಸುತ್ತದೆ.

About the Author

ಅರ್ಜುನಪುರಿ ಅಪ್ಪಾಜಿಗೌಡ - 29 April 2017)

ಡಾ. ಅರ್ಜುನಪುರಿ ಅಪ್ಪಾಜಿಗೌಡ  ಅವರು  ನಿವೃತ್ತ ಪ್ರಾಂಶುಪಾಲ, ಸಾಹಿತಿ ಹಾಗೂ ಪತ್ರಕರ್ತರಾಗಿದ್ದರು. ಕನ್ನಡದಲ್ಲಿ ಎಂ.ಎ. ಹಾಗೂ ಪಿಎಚ್.ಡಿ. ಪದವಿ ಪಡೆದಿದ್ದ ಅವರು ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದ್ದರು. ನಂತರ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಎಚ್‌.ಕೆ.ವೀರಣ್ಣಗೌಡ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 'ದೌರ್ಬಲ್ಯ, “ಹೀಗೊಂದು ಬಾಳು' ಮುಂತಾದ ಕಾದಂಬರಿ ರಚಿಸಿದ್ದರು. 'ನಂಜನಗೂಡು ತಿರುಮಲಾಂಬ ಒಂದು ಅಧ್ಯಯನ' ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಪಿಎಚ್‌.ಡಿ ಪದವಿ ನೀಡಿತ್ತು. 'ಪ್ರಜಾವಾಣಿ' ಹಾಗೂ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗಳ ಮದ್ದೂರು ವರದಿಗಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಮದ್ದೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.  ನಿಸರ್ಗದ ಕರೆ, ಕುವೆಂಪು ಸಾಹಿತ್ಯ ...

READ MORE

Reviews

ಹೊಸತು- ಡಿಸೆಂಬರ್‌ -2005

ಅರ್ಜುನಪುರಿ ಅಪ್ಪಾಜಿಗೌಡರ ಇಪ್ಪತ್ತೇಳು ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ. ಶಾಸನದಿಂದ ಹಿಡಿದು ಆಧುನಿಕ ಸಾಹಿತ್ಯದತನಕ ಲೇಖನಗಳ ಹರವು ಇದೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಒಟ್ಟುಗೂಡಿಸುವು ಉಸಿರಾಟದ ಗುರುತು ದರಿಂದ ಬರಹಕ್ಕೆ ಏಕರೂಪತೆ ಇಲ್ಲ, ರಾವಂದೂರು ದೇವಪ್ಪ, ಕೆಂಪೇಗೌಡ, ಸೀತಾಸುತ ಮುಂತಾದ ಅಷ್ಟು ಪರಿಚಿತರಲ್ಲದ ಲೇಖಕರ ಬಗ್ಗೆ ಬರೆದಿರುವುದು ಗಮನಾರ್ಹ. ಕುವೆಂಪು, ಕಾರಂತ, ಪಾಟೀಲ ಪುಟ್ಟಪ್ಪ ಮುಂತಾದವರ ಬಗ್ಗೆ ಬರೆದ ಬರಹಗಳಲ್ಲಿ ವಿಮರ್ಶೆಗಿಂತ ಮುಗ್ಧವಾದ ಗೌರವ ಕಂಡುಬರುತ್ತದೆ. ನಂಜನಗೂಡು ತಿರುಮಲಾಂಬ ಬಗ್ಗೆ ಬರೆದ ಲೇಖನ ಸಾಕಷ್ಟು ಮಾಹಿತಿಗಳನ್ನು ಒಳಗೊಂಡಿದೆ; ಅದೇ ರೀತಿ ಜಾನಪದದ ಬಗ್ಗೆ ಬರೆದ ಬರಹಗಳು. 'ಮಂಡ್ಯ ಜಿಲ್ಲೆಯ ಆಧುನಿಕ ಸಾಹಿತಿಗಳು' ಎಂಬ ಲೇಖನ ಕೆಲವು ಪ್ರಾಥಮಿಕ ಸಂಗತಿಗಳನ್ನು ತಿಳಿಸುತ್ತದೆ. ಅದಲ್ಲದೆ ಲೇಖಕರು ಹಿಂದೆ ಬರೆದ ಲೇಖನವನ್ನು ಪರಿಷ್ಕರಿಸದಿರು ವುದರಿಂದ ವಿವರಣೆಗಳು ಅನೇಕ ಕಡೆ ಅಪೂರ್ಣ ಮಾಹಿತಿಗಳನ್ನು ಕೊಡುತ್ತದೆ. ಲೇಖಕರ 'ಹೃದಯದ ಮಿಡಿತ' ಇಲ್ಲಿ ಕಾಣುವುದರಿಂದ ಪುಸ್ತಕದ ಹೆಸರು 'ಉಸಿರಾಟದ ಗುರುತು . 

Related Books