ಎಂ.ಜೆ.ಸುಂದರ್ ರಾಮ್ ಅವರ ‘ಸಾವಿನೊಡನೆ ಸರಸವಾಡಿದ ವಿಜ್ಞಾನಿಗಳು’ ಪುಸ್ತಕವು ವೈದ್ಯ ವಿಜ್ಞಾನಕ್ಕೆ ಅಪಾರ ಸೇವೆ ಸಲ್ಲಿಸಿದ ಹಾಗೂ ವೈದ್ಯ ವೃತ್ತಿಗೆ ಮಾದರಿಯಾದ ಅನೇಕ ಸಂಶೋಧಕರ ಜೀವನದ ಘಟನೆಗಳ ನೈಜ ಚಿತ್ರಣವಿರುವ ಕೃತಿ. ಪುಸ್ತಕದಲ್ಲಿ ಕತೆಗಳ ಜೋಡಣೆಯು- ವೈದ್ಯರಲ್ಲೆ ಮೂಢನಂಬಿಕೆ-ದೀಪದ ಬುಡದಲ್ಲೇ ಕತ್ತಲೆ!, ರೋಗಿಯ ವಾಂತಿ ಕುಡಿದ ಸಂಶೋಧಕ!, ತನ್ನ ಹೃದಯವನ್ನೇ ಇರಿದುಕೊಂಡ ಹುಡುಗಾಟದ ಹುಡುಗ!, ಮೈಮರೆತು ಎಬೋಲಾಗೆ ತುತ್ತಾದ ವೈದ್ಯ!, ಕಾಲರಾ ರೋಗಿಯ ವಾಮತಿ ಕುಡಿದ ಭೂಪ!, ದೆಹದ ತೂಕವಿಳಿಸಲು ಗಾಜು, ಕಲ್ಲು ತಿಂದರು!, ಮೈಯೊಳಗೆ ಹುಳು ಬಿಟ್ಟುಕೊಂಡು ಹಿಗ್ಗಿದ ವೈದ್ಯ, ಗೋಪುರದಿಂದೆಗರಿ ಗೋತ ಹೊಡೆದರು! ಹೀಗೆ ಹದಿನೈದು ಶೀರ್ಷಿಕೆಗಳಿವೆ.
ಎಂ.ಜೆ, ಸುಂದರ್ ರಾಮ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು 1964ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜನಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಪ್ರಾರಂಭಿಸಿದರು. 1969ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜನ್ನು ಸೇರಿ ಅದರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರಾಗಿ, ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, 2000ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನ ಸುರಾನ ಮುಕ್ತ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ಪ್ರತಿಷ್ಠಿತ ಬೇಸ್ ವಿದ್ಯಾಸಂಸ್ಥೆಯಲ್ಲಿ ಕೆಲಕಾಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಸುಂದರ್ ರಾಮ್ರವರು ಕನ್ನಡದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಷಯಗಳಗೆ ಸಂಬಂಧಿಸಿದ ಹಲವಾರು ಜನಪ್ರಿಯ ಪುಸ್ತಕಗಳನ್ನು ...
READ MORE