ಎಂ.ಜೆ, ಸುಂದರ್ ರಾಮ್ ಅವರು ತಮ್ಮ ಶಿಕ್ಷಕ ವೃತ್ತಿಯನ್ನು 1964ರಲ್ಲಿ ಬೆಂಗಳೂರಿನ ವೈದ್ಯಕೀಯ ಕಾಲೇಜನಲ್ಲಿ ಪ್ರಾಣಿಶಾಸ್ತ್ರ ಉಪನ್ಯಾಸಕರಾಗಿ ಪ್ರಾರಂಭಿಸಿದರು. 1969ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ವಿಜಯ ಕಾಲೇಜನ್ನು ಸೇರಿ ಅದರ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ಪ್ರಾಚಾರ್ಯರಾಗಿ, ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸಿ, 2000ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನ ಸುರಾನ ಮುಕ್ತ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರಿನ ಪ್ರತಿಷ್ಠಿತ ಬೇಸ್ ವಿದ್ಯಾಸಂಸ್ಥೆಯಲ್ಲಿ ಕೆಲಕಾಲ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಸುಂದರ್ ರಾಮ್‌ರವರು ಕನ್ನಡದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ವಿಷಯಗಳಗೆ ಸಂಬಂಧಿಸಿದ ಹಲವಾರು ಜನಪ್ರಿಯ ಪುಸ್ತಕಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಇವರು ಬರೆದ ಜೀವ ಹೇಗೆ ಹುಟ್ಟದರೇನಂತೆ? ಹಸ್ತಪ್ರತಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಬಹುಮಾನ ದೊರತಿದೆ. ಹಾಗೆಯೇ, ನವದೆಹಲಿಯ ಚಲನ್ಸ್ ಬುಕ್ ಟ್ರಸ್ಟ್ ಸಂಸ್ಥೆಯಿಂದ Does Life Arise from Non-living Things? ಎಂಬ ಆಂಗ್ಲ ಪುಸ್ತಕಕ್ಕೆ ಬಹುಮಾನ ದೊರೆತಿದೆ. ಇವರ ಮಕ್ಕಳ ವಿಜ್ಞಾನ ಎಂಬ ಜನಪ್ರಿಯ ಮಕ್ಕಳ ವಿಜ್ಞಾನ ಪುಸ್ತಕಕ್ಕೆ ಬೆಳಗಾವಿ ಶ್ರೀ ನಾಗನೂರು ರುದ್ರಾಕ್ಷಿ ಮಠದಿಂದ 2014ರ ಮಕ್ಕಳ ಸಾಹಿತ್ಯದ ಹರ್ಡೇಕರ್ ಮಂಜಪ್ಪ ಪ್ರಶಸ್ತಿ ಲಭಿಸಿದೆ. ಪ್ರೊ|| ರಾಮ್‌ರವರು ರಾಜ್ಯದ ಒಂಭತ್ತನೆಯ ತರಗತಿಯ ಶಾಲಾ ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿಯ ಪೀಠಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃತಿಗಳು: ಬಂಜೆತನಕ್ಕೆ ವೈಜ್ಞಾನಿಕ ಪರಿಹಾರ ಪ್ರನಾಳ ಶಿಶು, ಕುತೂಹಲ ಕೆರಳಿಸುವ ಸ್ವಾರಸ್ಯಕರ ವೈಜ್ಞಾನಿಕ ಆವಿಷ್ಕಾರಗಳು, ಗಂಡುಗಲಿಗಳ ಆಟ ಕಬಡ್ಡಿ, ಸಾವಿನೊಡನೆ ಸರಸವಾಡಿದ ವಿಜ್ಞಾನಿಗಳು, ಪೆಪ್ಟಿಕ್ ಅಪ್ಸರ್ ಹೊಸ ಬೆಳಕು, ನೋಬೆಲ್ ವಂಚಿತ ವಿಜ್ಞಾನಿಗಳು ಭಾರತೀಯ ವೈದ್ಯವಿಜ್ಞಾನಿಗಳು, ಶಾಲಾಮಕ್ಕಳಿಗೆ ವಿಜ್ಞಾನ ಕತೆಗಳು.