ಪ್ರೀತಿಯ ಪಂಚಗವ್ಯ

Author : ವಿಜಯಲಕ್ಷ್ಮಿ ಸತ್ಯಮೂರ್ತಿ

Pages 115

₹ 75.00




Year of Publication: 2019
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 0804011 4455

Synopsys

‘ಪ್ರೀತಿಯ ಪಂಚಗವ್ಯ' ಸಂಕಲನದ ಕವಿತೆಗಳಲ್ಲಿ ಅಬ್ಬರವಿಲ್ಲ. ನೀರು ಸಮುದ್ಸರ ಸೇರುವಂತೆ ಸಹಜತೆ ಇದೆ.  ಎಲ್ಲ ಕವಿತೆಗಳು ಕವಯತ್ರಿಯ ಸ್ವಗತವಾಗಿವೆ. ‘ಆದರೆ' ಎಂಬ ಕವನದ ಸಾಲುಗಳು : `ಅಪ್ಪಿಕೊಳ್ಳಬೇಕೆನಿಸುತ್ತಿದೆ ಆದರೆ ಕೈಗಳು ಸೋತಿವೆ' ಇಲ್ಲಿ ಆಸೆ -ಹಂಬಲ ಮತ್ತು ಹತಾಶೆ -ನಿರಾಶೆ ಒಟ್ಟಾಗಿ ಧ್ವನಿಸುತ್ತವೆ. ‘ಅವನು..’ ಕವಿತೆಯ ಸಾಲುಗಳು ಹೀಗಿವೆ ‘ನನ್ನೆದೆಯ ಗೋರಿಯಲ್ಲಿ ಹಾಯಾಗಿ ಮಲಗಿದ್ದ ಬಯಕೆಗಳ ಹಿಂಡನ್ನು ತಟ್ಟಿ ಎಬ್ಬಿಸಿದ್ದೇಕೋ ನೀನು ’ ಹೀಗೆ ಕವಯತ್ರಿಯ ಬಿಚ್ಚು ಮನಸ್ಸಿನ ಸಾಲುಗಳು ನಮ್ಮನ್ನು ಎದುರಾಗುತ್ತವೆ.

 

About the Author

ವಿಜಯಲಕ್ಷ್ಮಿ ಸತ್ಯಮೂರ್ತಿ

ವಿಜಯಲಕ್ಷ್ಮಿ ಸತ್ಯಮೂರ್ತಿ ಮೂಲತಃ ಬೆಂಗಳೂರಿನವರು. ತಂದೆ ಶ್ರೀನಿವಾಸ ಮೂರ್ತಿ.ತಾಯಿ ಯಶೋದ.ಪತಿ  ಸತ್ಯಮೂರ್ತಿ. ಚಾಮರಾಜಪೇಟೆಯ ಶ್ರೀರಾಮ ಶಿಶುವಿಹಾರ, ಮಾಧವ ಕೃಷ್ಣಯ್ಯ ಬಾಲಕಿಯರ ಪ್ರೌಢ ಶಾಲೆ ಹಾಗೂ ಚಾಮರಾಜಪೇಟೆ ಜೂನಿಯರ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.  ಇವರ 'ನವಮಿ' ಕಥಾಸಂಕಲನ  ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನ ಎರಡನೇ ಸೆಮಿಸ್ಟರ್ ಡಿಗ್ರಿ ತರಗತಿಗೆ ಪಠ್ಯವಾಗಿದೆ. ಬಸವ ವಿಭೂಷಣ ಪ್ರಶಸ್ತಿ,ಬಸವ ರತ್ನ ಪ್ರಶಸ್ತಿ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ  ಕೆ ಎಸ್ ನ ಕಾವ್ಯ ಪುರಸ್ಕಾರ ಇವರು ಪಡೆದಿರುವ  ಪ್ರಶಸ್ತಿಗಳು . ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. 'ಋತುಗಾನ'ಎಂಬ ಸಾಹಿತ್ಯ ಮತ್ತು ...

READ MORE

Reviews

ತಮ್ಮ ಮೂರನೆಯ ಕವನ ಸಂಕಲನದಲ್ಲಿ ಕವಯಿತ್ರಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರು ಪ್ರೀತಿಯ ಸಿಂಚನವನ್ನು ನೀಡುವುದರ ಜತೆಯಲ್ಲೇ, ಪಂಚಗವ್ಯದ ಹೋಲಿಕೆಯಲ್ಲಿ ಕವನಗಳನ್ನು ಕಟ್ಟಿಕೊಟ್ಟಿದ್ದಾರೆ. ಹಾಗೆ ನೋಡಿದರೆ ಇಲ್ಲಿರುವ ಕವನಗಳಲ್ಲಿ ಪ್ರೀತಿಯ ವಿವಿಧ ಮುಖಗಳನ್ನು ನೋಡಬಹುದು. ಒಮ್ಮೊಮ್ಮೆ ಪ್ರೀತಿಯ ಹುಚ್ಚು ಹೊಳೆ ಹರಿದರೆ, ಇನ್ನೊಮ್ಮೆ ಪ್ರೀತಿಯ ಇನ್ನೊಂದು ಮುಖ ಎನಿಸಿದ ವಿರಹದ ಕಣ್ಣೀರು ಅಲ್ಲಲ್ಲಿ ಹರಿಯುತ್ತದೆ. 'ಮನದ ಮಾತುಗಳು ನನ್ನೆದೆಯ/ಕೋಣೆಯಲಿ ರಾಶಿ ರಾಶಿ ಹರಡಿವೆ/ ಅದನಾಲಿಸಲು ನೀನೇ ಬರಬೇಕು' (ಪುಟ 35) 'ಜೇನು ಒಸರುತ್ತಿರುವ ಅಧರಗಳಿಗೆ ನೀ ನೀಡು/ಮುತ್ತಿನಾ ಮುಕ್ತಿ/ ಬಯಕೆಗಳಿಂದ ನರಳುತಿರುವ / ತನುವಿಗೆ ನೀ ನೀಡು | ಅಪ್ಪುಗೆಯ ಮುಕ್ತಿ' (ಪುಟ 49) ಈ ಸಾಲುಗಳು ಪ್ರೀತಿಯ ಮಧುರ ಭಾವಗಳನ್ನು, ಬಯಕೆಯನ್ನು ಬಿಂಬಿಸುತ್ತವೆ. ಒಮ್ಮೆ ಕಣ್ಣಲ್ಲಿ ನೀರು ಜಿನುಗಿದರೂ | ಜೊತೆಗೇ ನಗುವುಕ್ಕುವುದು / ಒಮ್ಮೆ ಒಡನಾಟದ ಜೇನಮಳೆಯ ಕಂಪು/ ಮತ್ತೊಮ್ಮೆ ವಿರಹದ ಜೊಂಪು' (ಪುಟ 62) ಇಲ್ಲಿ ಪ್ರೀತಿಸಿದ ಜೀವ ಅನುಭವಿಸುವ ವಿರಹದ ನೋವಿದೆ. 

- ಶಶಿಧರ ಹಾಲಾಡಿ

ಕೃಪೆ : ವಿಶ್ವವಾಣಿ (2020 ಫೆಬ್ರುವರಿ 09)

Related Books