ವಿಜಯಲಕ್ಷ್ಮಿ ಸತ್ಯಮೂರ್ತಿ ಮೂಲತಃ ಬೆಂಗಳೂರಿನವರು. ತಂದೆ ಶ್ರೀನಿವಾಸ ಮೂರ್ತಿ.ತಾಯಿ ಯಶೋದ.ಪತಿ ಸತ್ಯಮೂರ್ತಿ. ಚಾಮರಾಜಪೇಟೆಯ ಶ್ರೀರಾಮ ಶಿಶುವಿಹಾರ, ಮಾಧವ ಕೃಷ್ಣಯ್ಯ ಬಾಲಕಿಯರ ಪ್ರೌಢ ಶಾಲೆ ಹಾಗೂ ಚಾಮರಾಜಪೇಟೆ ಜೂನಿಯರ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ.
ಇವರ 'ನವಮಿ' ಕಥಾಸಂಕಲನ ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನ ಎರಡನೇ ಸೆಮಿಸ್ಟರ್ ಡಿಗ್ರಿ ತರಗತಿಗೆ ಪಠ್ಯವಾಗಿದೆ. ಬಸವ ವಿಭೂಷಣ ಪ್ರಶಸ್ತಿ,ಬಸವ ರತ್ನ ಪ್ರಶಸ್ತಿ ಸಾಹಿತ್ಯ ರತ್ನ ಪ್ರಶಸ್ತಿ ಹಾಗೂ ಕೆ ಎಸ್ ನ ಕಾವ್ಯ ಪುರಸ್ಕಾರ ಇವರು ಪಡೆದಿರುವ ಪ್ರಶಸ್ತಿಗಳು .
ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. 'ಋತುಗಾನ'ಎಂಬ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಾಹಿತಿ ಪ್ರತಿನಿಧಿ ಆಗಿದ್ದಾರೆ.
ಕವನ ಸಂಕಲನ: 'ಗಂಧದೋಕುಳಿ', 'ಸಾಗರವ ಗೆದ್ದವಳು', 'ಪ್ರೀತಿಯ ಪಂಚಗವ್ಯ', 'ಅಮೃತಧಾರೆ'
ಕಥಾಸಂಕಲನ: 'ನವಮಿ' ಹಾಗೂ 'ಪಂಚಮಿ'
ಕಾದಂಬರಿ : 'ಅಮೂಲ್ಯ', 'ಮಳೆಯಲ್ಲಿ ಬಂದ ಅಪ್ಸರೆ' ಹಾಗೂ 'ವ್ಯೂಹ'