ಪ್ರೀತಿ ಬಟ್ಟಲು

Author : ಪ್ರಕಾಶ ಗ. ಖಾಡೆ

Pages 54

₹ 25.00




Year of Publication: 1997
Published by: ಅನಿಕೇತ್ ಪ್ರಕಾಶನ
Address: ಲೋಕಾಪುರ, ಮುಧೋಳ ತಾ, ಬಾಗಲಕೋಟೆ ಜಿಲ್ಲೆ
Phone: 9845500890

Synopsys

ಪ್ರಕಾಶ್ ಖಾಡೆ ಅವರ ಮೊದಲ ಕವನ ಸಂಕಲನ. ಬದುಕಿನ ಏರಿಳಿತದಲ್ಲಿ ರೂಪಾಂತರ ಹೊಂದುವ ಸೂಕ್ಷ್ಮ ವಾಸ್ತವಿಕತೆಯನ್ನು ತೆರೆದಿಟ್ಟಿದ್ದಾರೆ ಕವಿ. ಕವಿತೆಗಳ ವಸ್ತು-ಸಾಮಾಜಿಕ ವಿದ್ಯಮಾನಗಳು. ವ್ಯಂಗ್ಯ-ವಿಡಂಬನೆ-ಅಚ್ಚರಿ -ಆತಂಕಗಳ ಮೂಲಕ ಸಮಾಜವನ್ನು ನೋಡುವ ಮತ್ತು ವ್ಯಾಖ್ಯಾನಿಸುವ ಇಲ್ಲಿಯ ಕವಿತೆಗಳು ಕಾವ್ಯಾಂಶದಿಂದ ಪುಷ್ಟಿಗೊಂಡಿವೆ. 

About the Author

ಪ್ರಕಾಶ ಗ. ಖಾಡೆ
(10 June 1965)

ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...

READ MORE

Related Books