"ಒಡಲಾಳದ ಪ್ರಶ್ನೆಗಳು" ಎಲ್ಲ ನೊಂದ ಜೀವಗಳ ಮನದಾಳದ ಪ್ರಶ್ನೆಗಳಾಗಿವೆ. ಹಸಿವು, ಬಡತನಗಳು ಕಾಡುವುದಕ್ಕಿಂತ ಹೆಚ್ಚಾಗಿ ಜಾತಿ ಧರ್ಮದ ಹೆಸರಿನಲ್ಲಿ ಮಿತಿ ಮೀರಿರುವ ದೌರ್ಜನ್ಯ, ಹೆಣ್ಣಿನ ಮೇಲೆ ನಂಬಿಕೆ, ಪದ್ಧತಿ, ಸಂಪ್ರದಾಯ,ಕಟ್ಟುಪಾಡುಗಳ ನೆವದಲ್ಲಿ ನಡೆಯುತ್ತಿದ್ದ ಶೋಷಣೆಗಳ ಬದಲಾಗಿ ಆಧುನಿಕ ಜಗತ್ತಿನ (ಅ)ನಾಗರೀಕ ಸಮಾಜ ಬೇರೊಂದು ರೀತಿಯಲ್ಲಿ ಎಸಗುವ ಅತ್ಯಾಚಾರಗಳತ್ತ ಬೆಳಕು ಬೀರುತ್ತದೆ ಕವನ ಸಂಕಲನ. ಇಂದಿಗೂ ನೆಲೆಯೂರಿರುವ ಹಲವು ಸಾಮಾಜಿಕ ಅನಿಷ್ಟಗಳ ಕುರಿತ ಚರ್ಚೆ ಈ ಕವನ ಸಂಕಲನದ ಒಡಲಾಳದಲ್ಲಿದೆ.ಜಾತಿ ಬೆರೆತ ಧರ್ಮಕ್ಕಿಂತ ಮಾನವತೆ ಮಿಳಿತವಾದ ಧರ್ಮ ಶ್ರೇಷ್ಠವೆನ್ನುವ ವಿಚಾರಧಾರೆ ಈ ಪುಸ್ತಕದಲ್ಲಿದೆ.40 ಕವನಗಳಿರುವ ಈ ಪುಸ್ತಕದಲ್ಲಿ ಪ್ರೀತಿ ಪ್ರೇಮ ಪ್ರಣಯವೂ ಇದ್ದು ಮುದದಿಂದ ಓದಿಸಿಕೊಳ್ಳುತ್ತದೆ.
ಮಹೇಶಕುಮಾರ ಹನಕೆರೆ ಮಂಡ್ಯ ತಾಲೂಕಿನ ಹನಕೆರೆ ಮೂಲದವರು. ಬಿಎ ಎಲ್ ಎಲ್ ಬಿ ಪದವೀಧರನಾಗಿದ್ದು ಆರು ವರ್ಷಗಳ ಕಾಲ ಮಂಡ್ಯದಲ್ಲಿ ವಕೀಲ ವೃತ್ತಿ ನಡೆಸಿ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಅಧೀಕ್ಷಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ..ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುತ್ತಾರೆ. ನವ್ಯ ಕಾವ್ಯದ ಜೊತೆ ಜೊತೆಗೆ ಛಂದೋಬದ್ಧ ಸಾಹಿತ್ಯ ಮತ್ತು ಮುಕ್ತಕಗಳ ರಚನೆಯಲ್ಲಿ ತೊಡಗಸಿಕೊಂಡಿದ್ದು ಸುಮಾರು ಐದು ನೂರು ಮುಕ್ತಕಗಳನ್ನು ಹಾಗೂ ನೂರಾರು ಷಟ್ಪದಿಗಳನ್ನು ರಚಿಸಿರುತ್ತಾರೆ. ಹಲವಾರು ಕಥೆಗಳು, ಸಣ್ಣಕಥೆಗಳು ಮತ್ತು ನ್ಯಾನೋ ಕಥೆಗಳನ್ನು ರಚಿಸಿದ್ದಾರೆ. ಜೀ ಶಂ ಪರಮಶಿವಯ್ಯ ವೇದಿಕೆ, ಮಂಡ್ಯ ...
READ MORE