ಮಹೇಶಕುಮಾರ ಹನಕೆರೆ ಮಂಡ್ಯ ತಾಲೂಕಿನ ಹನಕೆರೆ ಮೂಲದವರು. ಬಿಎ ಎಲ್ ಎಲ್ ಬಿ ಪದವೀಧರನಾಗಿದ್ದು ಆರು ವರ್ಷಗಳ ಕಾಲ ಮಂಡ್ಯದಲ್ಲಿ ವಕೀಲ ವೃತ್ತಿ ನಡೆಸಿ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಅಧೀಕ್ಷಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ..ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುತ್ತಾರೆ. ನವ್ಯ ಕಾವ್ಯದ ಜೊತೆ ಜೊತೆಗೆ ಛಂದೋಬದ್ಧ ಸಾಹಿತ್ಯ ಮತ್ತು ಮುಕ್ತಕಗಳ ರಚನೆಯಲ್ಲಿ ತೊಡಗಸಿಕೊಂಡಿದ್ದು ಸುಮಾರು ಐದು ನೂರು ಮುಕ್ತಕಗಳನ್ನು ಹಾಗೂ ನೂರಾರು ಷಟ್ಪದಿಗಳನ್ನು ರಚಿಸಿರುತ್ತಾರೆ.
ಹಲವಾರು ಕಥೆಗಳು, ಸಣ್ಣಕಥೆಗಳು ಮತ್ತು ನ್ಯಾನೋ ಕಥೆಗಳನ್ನು ರಚಿಸಿದ್ದಾರೆ. ಜೀ ಶಂ ಪರಮಶಿವಯ್ಯ ವೇದಿಕೆ, ಮಂಡ್ಯ ಇವರು ನೀಡಿದ "ಕಾವ್ಯಶ್ರೀ" ರಾಣೆಬೆನ್ನೂರಿನ ರಂಗ ಕುಸುಮ ಪ್ರಕಾಶನದವರು ಕೊಡಮಾಡಿದ "ರಂಗ ಸಾಹಿತ್ಯ ಸಿರಿ" ಕಸ್ತೂರಿ ಕನ್ನಡ ಸಿರಿಗನ್ನಡ ವೇದಿಕೆ ಮಂಡ್ಯ ಇವರು ಕೊಡಮಾಡಿದ “ರಾಜ್ಯೋತ್ಸವ ಪುರಸ್ಕಾರ” ಮತ್ತು “ಕಸ್ತೂರಿ ಕೌಸ್ತುಭ” ಪ್ರಶಸ್ತಿ ಪಡೆದಿರುತ್ತಾರೆ.ಸದ್ಯ ಶಿರಸಿ ಶೈಕ್ಷಣಿಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿರುತ್ತಾರೆ. ಒಡಲಾಳದ ಪ್ರಶ್ನೆಗಳು ಇವರ ಮೊದಲ ಕವನ ಸಂಕಲನವಾಗಿದ್ದು "ಮನಿಟ್ರ್ಯಾಪ್" ಕಥಾ ಸಂಕಲನ ಹಾಗೂ "ಹೊಂಸಿತನಯನ ಮುಕ್ತಕ ಮಾಲೆ" ಮುಕ್ತಕ ಸಂಕಲನಗಳು ಪ್ರಕಟಣೆಯ ಹೊಸ್ತಿಲಲ್ಲಿವೆ