ನಿಮ್ಮ 2 ಸಿಮ್ಮ

Author : ಸಿ.ಆರ್ ಸಿಂಹ

Pages 216

₹ 100.00




Year of Publication: 2007
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2003 ರಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಗ್ರಹ ರೂಪವೇ ನಿಮ್ಮ 2 ಸಿಮ್ಮ.

ರಂಗಭೂಮಿ, ದೂರದರ್ಶನ ಹಾಗೂ ಚಲನಚಿತ್ರಗಳಲ್ಲಿ ಚಿರಪರಿಚಿತರಾದ ನಟ ಸಿ.ಆರ್‍. ಸಿಂಹ.

ಅವರ ಅನೇಕ ಅನುಭವ, ವಿಚಾರಗಳ, ವೈವಿಧ್ಯಮಯ ಬರಹಗಳ ರೂಪವಾಗಿ ಈ ಪುಸ್ತಕ ಹೊರಬಂದಿದೆ.  

ಊರು ದೇಶ, ವಿದೇಶ,ಆಟ -ನೋಟ, ಕಲೆ, ಸಾಹಿತ್ಯ, ದೇವರು ಧರ್ಮ, ವಿಜ್ಞಾನ, ಹಬ್ಬ ಹರಿದಿನ ಇತ್ಯಾದಿ, ವಿಷಯಗಳ ಬಗ್ಗೆ ಆಸಕ್ತಿ ತಳೆದಿರುವ ಸ್ವಾರಸ್ಯ ನೋಟಗಳು ಈ ಕೃತಿಯಲ್ಲಿದೆ.

ನವನಾಟಕ ಪರಂಪರೆಯ ಆದ್ಯ ಪ್ರವರ್ತಕ, ಶಾಲೆ ಪಂಜರವಾದಾಗ ಕಲಿಯುವ ಉತ್ಸಾಹವೆಲ್ಲಿ?, ಮೂಲಕತೆಯಾದ ಉಪಕತೆ : ಕವಿಗಳ ಚತುರತೆ, ಏಕಲವ್ಯ ಕತೆಯ ರಿಮೇಕುಗಳು, ರೆಕ್ಕೆ ಮೂಡಿ, ಪುಕ್ಕ ಬಲಿತ ಹಕ್ಕಿ ತುತ್ತಿಕ್ಕಿದವರ ಮರೆತರೆ?, ಹಾರುವ ಬಾನಾಡಿಯೇ……ಗೂಡನ್ನೂ ನೊಡು !, ಏನೀ ಗಾರುಡಿಗನ ಮೋಡಿಯ ಪರಿ?, ನೆನಪಿನ ಬುತ್ತಿಯಲ್ಲಿ ಗತಕಾಲದ್ದೇ ನಿತ್ಯೋತ್ಸವ, ಬೇಕಿದೆ ರಂಗಭೂಮಿಗೆ ನವಕುಬೇರನ ಒತ್ತಾಸೆ, ಅಕ್ಕರೆಯ ಬಳ್ಳಿ ಆಸರೆಯಾಗಲು ಒಲ್ಲೆ ಎಂದಾಗ , ವಿಷಾದ ಗೀತೆಯಾದ ಭಾವಗೀತೆ….., ಚಿದಂಬರ ರಹಸ್ಯದ ವಿಸ್ಮಯಕಾರಿ ಮಾಂತ್ರಿಕ, ಹೀಗೆ ಹಲವಾರು ಲೇಖನಗಳ ಸಂಗ್ರಹವನ್ನು ಈ ಕೃತಿ ಪರಿಚಯಿಸುತ್ತದೆ.

About the Author

ಸಿ.ಆರ್ ಸಿಂಹ
(16 June 1942 - 04 February 2014)

ರಂಗಭೂಮಿ,ದೂರದರ್ಶನ ಹಾಗೂ ಚಲನಚಿತ್ರ - ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಚಿರಪರಿಚಿತರಾದ ಕನ್ನಡದ ಕಲಾವಿದ ಸಿ.ಆರ್ ಸಿಂಹ  ಹುಟ್ಟಿದ್ದು ಚನ್ನಪಟ್ಟಣದಲ್ಲಿ 1942, ಜೂನ್  16 ರಂದು .ತಂದೆ ರಾಮಸ್ವಾಮಿ ಶಾಸ್ತ್ರಿ.ತಾಯಿ ಲಲಿತಮ್ಮ. ತಮ್ಮ 12ನೆಯ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ್ದ ಸಿಂಹ ಅವರು 1972ರಲ್ಲಿ 'ನಟರಂಗ' ವೆಂಬ ಒಂದು ಕಲಾತಂಡವನ್ನು ಕಟ್ಟಿದ್ದರು. 1983 ರಲ್ಲಿ 'ವೇದಿಕೆ' ತಂಡವನ್ನು ಸ್ಥಾಪಿಸಿದರು. ಕಾಕನಕೋಟೆ, ತುಘಲಕ್, ಸಂಕ್ರಾಂತಿ, ಮೊದಲಾದ ಖ್ಯಾತ ನಾಟಕಗಳನ್ನು ನಿರ್ದೆಶಿಸಿದರು. ಸುಮಾರು 150 ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಹಿಸಿದ್ದ ಇವರು  ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ...

READ MORE

Related Books