About the Author

ರಂಗಭೂಮಿ,ದೂರದರ್ಶನ ಹಾಗೂ ಚಲನಚಿತ್ರ - ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಚಿರಪರಿಚಿತರಾದ ಕನ್ನಡದ ಕಲಾವಿದ ಸಿ.ಆರ್ ಸಿಂಹ  ಹುಟ್ಟಿದ್ದು ಚನ್ನಪಟ್ಟಣದಲ್ಲಿ 1942, ಜೂನ್  16 ರಂದು .ತಂದೆ ರಾಮಸ್ವಾಮಿ ಶಾಸ್ತ್ರಿ.ತಾಯಿ ಲಲಿತಮ್ಮ.

ತಮ್ಮ 12ನೆಯ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿದ್ದ ಸಿಂಹ ಅವರು 1972ರಲ್ಲಿ 'ನಟರಂಗ' ವೆಂಬ ಒಂದು ಕಲಾತಂಡವನ್ನು ಕಟ್ಟಿದ್ದರು. 1983 ರಲ್ಲಿ 'ವೇದಿಕೆ' ತಂಡವನ್ನು ಸ್ಥಾಪಿಸಿದರು. ಕಾಕನಕೋಟೆ, ತುಘಲಕ್, ಸಂಕ್ರಾಂತಿ, ಮೊದಲಾದ ಖ್ಯಾತ ನಾಟಕಗಳನ್ನು ನಿರ್ದೆಶಿಸಿದರು. ಸುಮಾರು 150 ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ಅಭಿನಹಿಸಿದ್ದ ಇವರು  ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಸಿ.ಆರ್ ಸಿಂಹ

(16 Jun 1942-04 Feb 2014)