ವ್ಯಕ್ತಿ-ವಿಚಾರ-ವಿಮರ್ಶೆಗಳಿಗೆ ಸಂಬಂಧಿಸಿದ ನೂರಾರು ಲೇಖನಗಳು ವಿಶೇಷವಾಗಿ ವಿಮರ್ಶಕ ಜಿ.ಎಸ್.ಆಮೂರ ಅವರ ಅಂಕಣ ಬರೆಹಗಳ ಸಂಕಲನವಿದು. ಸುಮಾರು 400ಕ್ಕೂ ಅಧಿಕ ಲೇಖನಗಳನ್ನು ಬರೆದ ಖ್ಯಾತಿಯ ವಿಮರ್ಶಕರು, ವ್ಯಕ್ತಿ ಚಿತ್ರಣ, ವಿಚಾರಗಳ ಮೌಲಿಕತೆ ಹಾಗೂ ನೂರಾರು ಕೃತಿಗಳ, ಸಾಹಿತ್ಯಕ ವಿದ್ಯಮಾನಗಳ ವಿಮರ್ಶೆಗಳು ಸಂಕಲನಗೊಂಡಿವೆ. ಈವರೆಗೆ ಯಾವುದೇ ಲೇಖನವು ವಿವಾದಕ್ಕೆ ಎಡೆ ಮಾಡಿಕೊಡದೇ ಇರುವುದು ಅವರ ವಿಮರ್ಶಾ ಪ್ರಜ್ಞೆಗೆ, ತೀಕ್ಷಣತೆ, ವಿಷಯ ಕೇಂದ್ರಿತ ಆಳ ವಿವರಣೆಗಳು ಲೇಖಕರ ವಿಮರ್ಶೆಗೆ ಕನ್ನಡಿ ಹಿಡಿಯುತ್ತವೆ. ವಿಮರ್ಶೆಯ ವಿವಿಧ ಪ್ರಕಾರ, ಶೈಲಿ ಸೇರಿದಂತೆ ವಿಮರ್ಶೆಗೆ ಸಂಬಂದಿಸಿದ ವಿಷಯಗಳ ಅಧ್ಯಯನಕ್ಕೆ ಈ ಕೃತಿಯು ಉತ್ತಮ ಆಕರ ಒದಗಿಸುತ್ತದೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE